ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತ’ದ ರಜತ ಮಹೋತ್ಸವದ ನಿಮಿತ್ತ ಉಜಿರೆಯ ಶ್ರೀ ಸೀತಾರಾಮ ಕಲಾಮಂದಿರದಲ್ಲಿ ವರ್ಧಂತ್ಯುತ್ಸವ ಕಾರ್ಯಕ್ರಮ- ಕಹಳೆ ನ್ಯೂಸ್
ಬೆಳ್ತಂಗಡಿ: ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ ಮತ್ತು ಈ ಕಾರ್ಯವನ್ನು ತತ್ವನಿಷ್ಟತೆಯಿಂದ ಮಾಡುವ ಪತ್ರಿಕೆ ಎಂದರೆ ಸನಾತನ ಪ್ರಭಾತ. ‘ಗೋ ಹತ್ಯೆ, ಮತಾಂತರ, ಲವ್ ಜಿಹಾದ್, ಹಲಾಲ್ ಜಿಹಾದ್ ಮುಂತಾದ ಅನೇಕ ಹಿಂದೂಗಳ ಮೇಲಾಗುತ್ತಿರುವ ಆಘಾತಗಳ ವಿರುದ್ಧ ಧ್ವನಿ ಎತ್ತಿ ಸತ್ಯನಿಷ್ಠ ಕಾರ್ಯವನ್ನು ಸನಾತನ ಪ್ರಭಾತ ಪತ್ರಿಕೆಯು ಮಾಡುತ್ತಿದೆ. ಕೇವಲ ಓದುಗರ ಸಂಖ್ಯೆ ಹೆಚ್ಚಿಸುವುದು ಸನಾತನ ಪ್ರಭಾತದ ಉದ್ದೇಶವಲ್ಲ, ಬದಲಾಗಿ ಸನಾತನ ಧರ್ಮದ ಮಹತ್ವ ಸಾರುವುದು ಸನಾತನ ಪ್ರಭಾತದ ಮುಖ್ಯ ಉದ್ದೇಶ ಎಂದು ಸನಾತನ ಸಂಸ್ಥೆಯ ಸಾಧಕರಾದ ಶ್ರೀ ಆನಂದ ಗೌಡ ಹೇಳಿದರು.
ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತ’ದ ರಜತ ಮಹೋತ್ಸವದ ನಿಮಿತ್ತ ಉಜಿರೆಯ ಶ್ರೀ ಸೀತಾರಾಮ ಕಲಾಮಂದಿರದಲ್ಲಿ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತಾನಾಡಿದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ನೂರಕ್ಕಿಂತಲೂ ಹೆಚ್ಚು ಸನಾತನ ಪ್ರಭಾತದ ವಾಚಕರು. ಜಾಹೀರಾತುದಾರರು, ಹಿತಕಿಂತಕರು ಹಾಗೂ ಧರ್ಮಭಿಮಾನಿಗಳು ಉಪಸ್ಥಿತರಿದ್ದರು.