Saturday, November 23, 2024
ಸುದ್ದಿ

ಮಾ.2ರಂದು ಹೊನಲು ಬೆಳಕಿನ ಮೂಡೂರು- ಪಡೂರು “ಬಂಟ್ವಾಳ ಜೋಡುಕರೆ ಕಂಬಳ ” – ಕಹಳೆ ನ್ಯೂಸ್

ಟ್ವಾಳ: 13 ನೇ ವರ್ಷದ ಹೊನಲು ಬೆಳಕಿನ ಮೂಡೂರು- ಪಡೂರು “ಬಂಟ್ವಾಳ ಕಂಬಳ ” ಜೋಡುಕರೆ ಬಯಲು ಕಂಬಳ ನಾವೂರ ಗ್ರಾಮದ ಕೂಡಿಬೈಲು ಎಂಬಲ್ಲಿ ಮಾ.2 ರಂದು ಅತ್ಯಂತ ಅದ್ದೂರಿಯಾಗಿ ನಡೆಯಲಿದೆ ಎಂದು ಮಾಜಿ ಸಚಿವ ಕಂಬಳದ ಗೌರವಾಧ್ಯಕ್ಷ ಬಿ.ರಮಾನಾಥ ರೈ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಲೂರು ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ , ಆಳದಂಗಡಿ ಅರಮನೆ ಅರಸರಾದ ತಿಮ್ಮಣ್ಣರಸರಾuಟಿಜeಜಿiಟಿeಜ ಡಾ.ಪದ್ಮಪ್ರಸಾದ ಅಜಿಲ, ಅಲ್ಲಪಾದೆ ಸಂತ ಅಂತೋನಿ ಧರ್ಮಗುರು ವಂದನೀಯ ಫೆಡ್ರಿಕ್ ಮೊಂತೆರೊ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ.
ಇವರ ಜೊತೆಗೆ ಬೇರೆ ಬೇರೆ ಕ್ಷೇತ್ರದ ಸಚಿವರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಂಬಳದಲ್ಲಿ ಹೊಸ ಅವಿಷ್ಕಾರ ಮಾಡಿ ಕಂಬಳದಲ್ಲಿ ಬದಲಾವಣೆಗೆ ರೂಪ ನೀಡಿದ್ದೇವೆ. ಕಂಬಳಕ್ಕೆಕಾನೂನಾತ್ಮಕ ತೊಡುಕು ಬಂದಾಗ ಕಂಬಳ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಹೋರಾಟ ಮಾಡಿದ್ದೇವೆ.ಬಂಟ್ವಾಳ ಕಂಬಳ ಎಂದರೆ ಕಂಬಳ ಪ್ರೇಮಿಗಳಿಗೆ ಆಸಕ್ತಿಯ ಕಂಬಳವಾಗಿದ್ದು, ಸರ್ವ ರೀತಿಯಲ್ಲಿ ಸಹಕಾರ ನೀಡಿಕಂಬಳಕ್ಕೆ ವಿಶೇಷ ಮೆರಗು ನೀಡುತ್ತಾರೆ ಎಂದು ಅವರು ತಿಳಿಸಿದರು.

ಈಗಾಗಲೇ ಸುಸಜ್ಜಿತವಾದ ಕರೆ ನಿರ್ಮಾಣವಾಗಿದ್ದು,ಕಂಬಳದ ಗದ್ದೆಗೆ ತೆರಳುವ ರಸ್ತೆಯನ್ನು ಅಗಲೀಕರಣ ಮಾಡಿ ಕಾಂಕ್ರೀಟ್ ಮಾಡಲಾಗಿದೆ. ಕಂಬಳ ಪ್ರೇಮಿಗಳಿಗೆ ಪಾರ್ಕ್ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಅತಿಥಿಗಳಿಗೆ ಕಂಬಳ ವೀಕ್ಷಣೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರತ್ಯೇಕವಾದ ಗ್ಯಾಲರಿಯನ್ನು ಈ ಬಾರಿ ನಿರ್ಮಾಣ ಮಾಡಲಿದ್ದುಅಮೂಲಕ ಅತಿಥಿಗಳು ಕಂಬಳ ವೀಕ್ಷಣೆ ಮಾಡಲು ಸಾಧ್ಯವಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮತಿ ಅಧ್ಯಕ್ಷಪಿಯೂಸ್ ಎಲ್ ರೋಡ್ರಿಗಸ್, ಕಾರ್ಯಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಂಚಾಲಕ ಪದ್ಮಶೇಖರ್ ಜೈನ್ ಹಾಗು ಸಮಿತಿ ಪ್ರಮುಖರಾದ ಬೇಬಿ ಕುಂದರ್, ಸುದರ್ಶನ ಜೈನ್, ಸುದೀಪ್ ಶೆಟ್ಟಿ, ಶಬೀರ್ ಸಿದ್ದಕಟ್ಟೆ, ಎಂ.ಎಸ್.ಮಹಮ್ಮದ್, ಮಾಯಿಲಪ್ಪ ಸಾಲ್ಯಾನ್, ರಾಜೇಶ್ ರೊಡ್ರಿಗಸ್,ಪ್ರವೀಣ್ ರೋಡ್ರಿಗಸ್,ಪ್ರಕಾಶ್ ಆಳ್ವ, ಶುಬಾಶ್ಚಂದ್ರ ಶೆಟ್ಟಿ, ಜನಾರ್ದನ ಚೆಂಡ್ತಿಮಾರ್, ಸೀತಾರಾಮ ಶಾಂತಿ, ಮಂಜುಳಾಕುಶಾಲ ಗೌಡ, ಉಮೇಶ್ ಕುಲಾಲ್, ರಾಜೀವ ಶೆಟ್ಟಿ ಎಡ್ತೂರು,ಸಂದೇಶ್ ಶೆಟ್ಟಿ,ವೆಂಕಪ್ಪ ಪೂಜಾರಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.