Friday, November 22, 2024
ದಕ್ಷಿಣ ಕನ್ನಡಸುದ್ದಿ

ಸ್ವಸ್ಥ ಮತ್ತು ಸ್ವಚ್ಛ ಉಪ್ಪಿನಂಗಡಿಯನ್ನು ರೂಪಿಸಲು ಪಣ ತೊಟ್ಟಿರುವ ಉಪ್ಪಿನಂಗಡಿಯ ದಕ್ಷ ಪೊಲೀಸ್ ಠಾಣಾಧಿಕಾರಿ ಅವಿನಾಶ್ ಎಚ್ ಗೌಡ.- ಕಹಳೆ ನ್ಯೂಸ್

ಉಪ್ಪಿನಂಗಡಿಯ ಅಸುಪಾಸಿನಲ್ಲಿ ಕೆಲವು ದಿನಗಳಿಂದ ಮಾದಕ ದ್ರವ್ಯದ ಜಾಲಕ್ಕೆ ಯುವಕರು ಬಲಿಯಾಗುತ್ತಿರುವ ಸಂಗತಿಗಳು ಅಲ್ಲಲ್ಲಿ ಕೇಳಿ ಬರುತ್ತಿತ್ತು. ಈ ಮಾದಕ ದ್ರವ್ಯದ ಜಾಲವನ್ನು ಬೇರು ಸಮೇತ ಕಿತ್ತೊಗೆಯಬೇಕು ಎಂದು ಪಣತೊಟ್ಟು ರಂಗಕ್ಕಿಳಿದಿರುವ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನೂತನ ಠಾಣಾಧಿಕಾರಿಗಳಾಗಿ ಬಂದಿರುವ ಅವಿನಾಶ್ ಎಚ್ ಗೌಡ ಇವರು ತನ್ನ ಸಿಬ್ಬಂದಿ ವರ್ಗದವರೊಂದಿಗೆ ಹೇಳಿ ಅಲ್ಲಲ್ಲಿ ಬಂದೋಬಸ್ತ್ ಏರ್ಪಡಿಸಿ, ಉಪ್ಪಿನಂಗಡಿಯಲ್ಲಿ ಈಗಾಗಲೇ 3 ಯುವಕರನ್ನು ಬಂಧಿಸಿ ಕೇಸು ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ನಿಜಕ್ಕೂ ಶ್ಲಾಘನೀಯ. ಉಪ್ಪಿನಂಗಡಿಯ ಠಾಣಾಧಿಕಾರಿಗಳ ಕೆಲಸವನ್ನು ಮೆಚ್ಚಿ ಉಪ್ಪಿನಂಗಡಿಯಾದ್ಯಂತ ಜನರಿಂದ ಮೆಚ್ಚುಗೆಯ ಮಾತುಗಳು ಬರುತ್ತಿದೆ. ಸರ್ ನಿಜಕ್ಕೂ ಮೆಚ್ಚುಗೆ ಇದೆ. ನಿಮ್ಮ ಕಾರ್ಯತತ್ಪರತೆ ಮತ್ತು ಕೆಲಸದ ಮೇಲೆ ಉಪ್ಪಿನಂಗಡಿಯ ಜನರು ಭರವಸೆಯನಿಟ್ಟಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ. ಉಪ್ಪಿನಂಗಡಿಯಲ್ಲಿ ಇನ್ನು ಮುಂದಕ್ಕೆ ಯಾವುದೇ ರೀತಿಯ ಮಾದಕ ದ್ರವ್ಯದ ವ್ಯವಹಾರಗಳು ನಡೆಯದಂತೆ ನೀವು ನೋಡಿಕೊಳ್ಳಿ. ದೇವನು ನಿಮ್ಮನ್ನು ಮತ್ತು ನಿಮ್ಮ ಸಿಬ್ಬಂದಿಯ ವರ್ಗವನ್ನು ಅನುಗ್ರಹಿಸಲಿ ಎಂಬ ಪ್ರಾರ್ಥನೆಯೊಂದಿಗೆ…   ಉಪ್ಪಿನಂಗಡಿಯ ನಿವಾಸಿಗಳು