Sunday, January 19, 2025
ಉಡುಪಿಕಾಪುರಾಜಕೀಯಸುದ್ದಿ

ಪಾಂಗಳ ಆರ್ಯಡಿ ಶ್ರೀ ಸರಳ ಧೂಮಮತಿ ಸಾನಿಧ್ಯದಲ್ಲಿ ನಡೆದ “ಯುವಚೌಪಾಲ್” ಕಾರ್ಯಕ್ರಮ – ಕಹಳೆ ನ್ಯೂಸ್

ಪಾಂಗಳ ಆರ್ಯಡಿ ಗ್ರಾಮದ ಶ್ರೀ ಸರಳ ಧೂಮವತಿ ದೈವ್ವದ ಸಾನಿಧ್ಯದಲ್ಲೇ ನನ್ನ ವಿಧಾನಸಭಾ ಮತಯಾಚನೆ ಪ್ರಾರಂಭ ಮಾಡಿದ್ದು, ಮುಂಬರುವ ಲೋಕ ಸಭೆಯ ಫಲಿತಾಂಶ ಜವಾಬ್ದಾರಿಯನ್ನು ಸರಳ ಧೂಮವತಿ ನೆರವೇರಿಸಿ ಕೊಡುತ್ತಾರೆ.

ನಾವೆಲ್ಲರೂ ಕಮಲದ ಪಕ್ಷ ಏನು ಕೊಟ್ಟಿದೆ ಎಂಬುದನ್ನು ಎಲ್ಲರಿಗೂ ತಿಳಿಸಿ ಕೊಡಬೇಕು. ಮೋದಿಜಿಯವರ ನೇತೃತ್ವವನ್ನು ಜಗತ್ತು ಒಪ್ಪಿದೆ. ಪ್ರತಿಯೊಬ್ಬ ನಾಗರೀಕರ ಸಮಸ್ಯೆಗೆ ಸ್ಪಂದಿಸುವಲ್ಲಿ ಪಕ್ಷ ದುಡಿಯಬೇಕು ಯಾವುದೇ ಅಧಿಕಾರದ ಅಪೇಕ್ಷೆ ಮಾಡದೇ ಸೇವೆ ಮಾಡಿ ದೇಶ ಕಟ್ಟುವ ಕೆಲಸ ಮಾಡಿ ಎಂದು “ಯುವಚೌಪಾಲ್” ಕಾರ್ಯಕ್ರಮವನ್ನು ಕಾಪುವಿನ ಮಾನ್ಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಪಾಂಗಳ ಆರ್ಯಡಿ ಶ್ರೀ ಸರಳ ಧೂಮಮತಿ ಸಾನಿಧ್ಯದಲ್ಲಿ ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

“ಯುವ ಚೌಪಾಲ್” ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್,ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ ಸುವರ್ಣ, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ಕಾಪು ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಸಚಿನ್ ಸುವರ್ಣ, ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಗಳಾದ ವಿಖ್ಯಾತ್ ಶೆಟ್ಟಿ, ಕಾಪು ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸುಮಾ ಶೆಟ್ಟಿ, ಶಕ್ತಿ ಕೇಂದ್ರದ ಸಂಚಾಲಕರಾದ ಪ್ರವೀಣ್ ಶೆಟ್ಟಿ, ಬಿಜೆಪಿಯುವಮೋರ್ಚಾ ಪ್ರಧಾನಕಾರ್ಯದರ್ಶಿಗಳಾದ ಸೋನು ಪಾಂಗಾಳ ಹಾಗೂ ಪಕ್ಷದ ಪ್ರಮುಖರಾದ ಕೇಸರಿ ಯುವರಾಜ್,ರಾಜೇಶ್ ಕುಂದರ್,ರವಿ ಕೋಟ್ಯಾನ್,ಧೀರೇಶ್ ಮೂಳೂರು,ರಾಜ್ ಪಡುಬಿದ್ರಿ,ಉದಯ ಮೂಲ್ಯ,ಶೈಲೇಶ್ ಶೆಟ್ಟಿ,ಸುರೇಖ ಶೆಟ್ಟಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು