ಮಂಗಳೂರು : ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ವಿಭಾಗದಲ್ಲಿ, ಎ.ಐ.ಸಿ.ಟಿ.ಇ- ಎಟಿಎಎಲ್ ಸಹಯೋಗದೊಂದಿಗೆ, “ಎಲಿವೇಟಿಂಗ್ ಹೆಲ್ತ್ ಕೇರ್ ಥ್ರೂ ಡೀಪ್ ರ‍್ನಿಂಗ್ : ಇನ್ನೋವೇಶನ್ಸ್ ಇನ್ ಮೆಡಿಕಲ್ ಇಮೇಜ್ ಪ್ರೊಸೆಸಿಂಗ್” ಕುರಿತಒಂದು ವಾರದ ಭೋಧಕರ ಅಭಿವೃದ್ಧಿ ಕರ‍್ಯಕ್ರಮ (ಎಫ್.ಡಿ.ಪಿ) ಆಯೋಜಿಸಲಾಯಿತು.
ಕರ‍್ಯಕ್ರಮ ಸಂಯೋಜಿಸಿದ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ಎಚ್. ಶೇಖರ್, ಕರ‍್ಯಕ್ರಮದ ಉದ್ದೇಶ ಹಾಗು ಮಹತ್ವದ ಬಗ್ಗೆ ವಿವರಿಸಿದರು.ಕರ‍್ಯಕ್ರಮ ಉದ್ಘಾಟಿಸಿದ ಮೈಸೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಎಚ್. ಎಸ್. ನಾಗೇಂದ್ರಸ್ವಾಮಿ,ವೈದ್ಯಕೀಯ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳಾದ ಕೃತಕ ಬುದ್ದಿಮತ್ತೆ ಹಾಗೂ ಯಂತ್ರಕಲಿಕೆಯ ಆಳವಾದ ಸಂಶೋಧನೆಯ ವಿವಿಧ ಆಯಾಮಗಳ ಬಗ್ಗೆ ವಿವರಿಸಿದರು. ಮಾತ್ರವಲ್ಲದೆ ವೈದ್ಯಕೀಯ ಕ್ಷೇತ್ರದ ಪ್ರಸ್ತುತ ಸವಾಲುಗಳನ್ನು ಎದುರಿಸಲು ಲಭ್ಯವಿರುವ ಆಧುನಿಕ ತಂತಜ್ಞಾನಗಳ ಹಾಗೂ ಯಂತ್ರಗಳ ಪರಿಚಯ ಮಾಡಿಕೊಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಪ್ರೊ.ಜಯರಾಜ್ ಅಮೀನ್ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು, ಇಂತಹ ಮೌಲ್ಯಯುತ ಕರ‍್ಯಕ್ರಮಗಳು ಯುವಜನತೆಯನ್ನು ಉತ್ತಮ ಗುಣಮಟ್ಟದ ಸಂಶೋಧನೆ ಮಾಡಲು ಪ್ರೇರೇಪಿಸುತ್ತದೆ, ಎಂದರು. ಈ ನಿಟ್ಟಿನಲ್ಲಿ ಯುವ ಸಂಶೋಧಕರು ಇನ್ನೂ ಹೆಚ್ಚಿನ ಸಾಧನೆ ಮಾಡಲು ಕರೆ ನೀಡಿದರು.ಪಿ. ಎ. ಇಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಂಶುಪಾಲೆ ಪ್ರೊ. ರ‍್ಮಿಳಾ ಕುಮಾರಿ ಸ್ವಾಗತಿಸಿದರು. ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಕಾಶ್ ಎಂ ಅವರು ವಂದಿಸಿದರು. ವಿಶ್ವವಿದ್ಯಾನಿಲಯ ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆ ಡಾ. ಭಾರತಿ ಪಿಲಾರ್ ಕರ‍್ಯಕ್ರಮ ನಿರೂಪಿಸಿದರು.
ಈ ಕರ‍್ಯಕ್ರಮದಲ್ಲಿ ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಎ.ಎಂ.ಖಾನ್ಉಪಸ್ಥಿತರಿದ್ದರು. ಒಂದು ವಾರ ಅವಧಿಯ ಈ ಎಫ್.ಡಿ.ಪಿ, ಪ್ರಸಿದ್ಧ ವಿಶ್ವವಿದ್ಯಾನಿಲಯಗಳು, ಐಐಟಿ, ಎನ್‌ಐಟಿ, ಸಾಫ್ಟ್ ವೇರ್ ಕಂಪನಿಗಳು ಮತ್ತು ವೈದ್ಯಕೀಯ ಕಾಲೇಜುಗಳ ಗಣ್ಯ ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸದ ಜೊತೆಗೆ, ಪ್ರಾಯೋಗಿಕ ತರಗತಿಗಳು, ಹಾಗೂ ಉದ್ಯಮ ಭೇಟಿಯನ್ನುಒಳಗೊಂಡಿದೆ.