Sunday, January 19, 2025
ದೆಹಲಿಸಂತಾಪಸುದ್ದಿ

ಹನಿಮೂನ್ ಮೂಡ್ ನಲ್ಲಿದ್ದ ನವದಂಪತಿಯ ದಾರುಣ ಅಂತ್ಯ : ಹೃದಯಾಘಾತಕ್ಕೆ ಬಲಿಯಾದ ಪತಿ : ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಪತ್ನಿ – ಕಹಳೆ ನ್ಯೂಸ್

ನವದೆಹಲಿ: ಹನಿಮೂನ್ ಮೂಡ್ ನಲ್ಲಿದ್ದ ನವದಂಪತಿ ದಾರುಣವಾಗಿ ಮೃತಪಟ್ಟ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ವಿಹಾರಕ್ಕೆಂದು ತೆರಳಿದ್ದ ದಂಪತಿಯಲ್ಲಿ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪತಿಯ ಸಾವಿನಿಂದ ಆಘಾತಗೊಂಡು ಪತ್ನಿ ತಮ್ಮ ಅಪಾರ್ಟೆಂಟ್  ಕಟ್ಟಡದ 7ನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾರೆ.

2023 ನವೆಂಬರ್ 30 ರಂದು ಅಭಿಷೇಕ್(25) ಹಾಗೂ ಅಂಜಲಿ(23) ವಿವಾಹ ನಡೆದಿದೆ. ಬಳಿಕ ಇಬ್ಬರೂ ದೆಹಲಿಯಲ್ಲೇ ನೆಲೆಸಿದ್ದರು. ಸೋಮವಾರ ದಂಪತಿ ಜೊತೆಯಾಗಿ ದೆಹಲಿಯ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅಭಿಷೇಕ್ ಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಅಂಜಲಿ ತನ್ನ ಸ್ನೇಹಿತರನ್ನು ಕರೆದು ಪತಿಯನ್ನು ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ ವೈದ್ಯರ ಸೂಚನೆಯಂತೆ ಸಫರ್‌ ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಅಷ್ಟರಲ್ಲಿ ಅಭಿಷೇಕ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದ ಆಘಾತಗೊಂಡ ಅಂಜಲಿ ನೇರವಾಗಿ ತಮ್ಮ ಮನೆಗೆ ಬಂದಿದ್ದರು. ಸೋಮವಾರ ರಾತ್ರಿ ಅಭಿಷೇಕ್ ಮೃತದೇಹವನ್ನು ಮನೆಗೆ ತರಲಾಗಿತ್ತು. ಪತಿಯನ್ನು ಕೊನೆಯ ಬಾರಿಗೆ ನೋಡಿದ ಅಂಜಲಿ ಬಿಕ್ಕಿ ಬಿಕ್ಕಿ ಅಳುತ್ತಲೇ ತಮ್ಮ ಮನೆಯತ್ತ ಓಡಿದ್ದಾಳೆ. ಬೆಡ್ ರೂಮಿಗೆ ಹೋಗಿ ಬಾಗಿಲು ಹಾಕ್ಕೊಂಡಿದ್ದಾಳೆ. ಬಳಿಕ ಮನೆಯ ಆವರಣದ ಬಾಲ್ಕನಿಯಿಂದ ಹೊರಕ್ಕೆ ಹಾರಿದ್ದಾಳೆ. ಅಂಜಲಿ ಏಳನೇ ಮಹಡಿಯ ಬಾಲ್ಕನಿಯಿಂದ ಹೊರಕ್ಕೆ ಹಾರಿದ್ದನ್ನು ಅಪಾರ್ಟೆಂಟ್ ಸೆಕ್ಯುರಿಟಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಗಂಭೀರ ಗಾಯಗೊಂಡಿದ್ದ ಆಕೆಯನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು.  ಅಂಜಲಿ ಕೊನೆಯುಸಿರೆಳೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು