Sunday, November 24, 2024
ಕುಂದಾಪುರಸುದ್ದಿ

ʼಫೈನ್ ಪ್ಲಾಂಟ್ʼ ಮಾರುಕಟ್ಟೆ ಬಿಡುಗಡೆ, ʼಹೊಸ ಪುಟʼ ಅಪ್ಲಿಕೇಶನ್ ಲೋಕಾರ್ಪಣೆ- ಕಹಳೆ ನ್ಯೂಸ್

ಕುಂದಾಪುರ: ಕುಂದಾಪುರದ ನೆಹರೂ ಮೈದಾನದಲ್ಲಿ ಶನಿವಾರ ಸಂಜೆ ಬೆಂಗಳೂರಿನ ಫೈನ್ ಪ್ಲಾಂಟ್ ರಿಸರ್ವ್ಯಯರ್ ಕಂಪೆನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ʼ ಫೈನ್ ಪ್ಲಾಂಟ್ ʼ ಮಾರುಕಟ್ಟೆ ಬಿಡುಗಡೆ, ವಿದ್ಯಾರ್ಥಿಗಳಿಗೆ ಪ್ಲಾಂಟ್ ವಿತರಣೆ ಹಾಗೂ ʼಹೊಸ ಪುಟʼ ಅಪ್ಲಿಕೇಶನ್ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆ ತಂತ್ರಜ್ಞಾನ ಹಾಗೂ ಆಧುನಿಕತೆಯ ಕಾರಣಗಳಿಂದಾಗಿ ಸುಲಭ ವ್ಯವಸ್ಥೆಗಳತ್ತ ಮಾನವರು ಕೇಂದ್ರೀಕೃತರಾಗುತ್ತಿರುವುದರಿAದ, ನೀರನ್ನು ಹೀರಿಕೊಳ್ಳುವ ನೈಸರ್ಗಿಕ ವ್ಯವಸ್ಥೆಯಿಂದ ನಾವು ದೂರವಾಗುತ್ತಿದ್ದೇವೆ ಎಂದರು.


ಮಾನವ ಸೃಷ್ಟಿಯಿಂದ ಆಗಿರುವ ಸಮಸ್ಯೆಗಳ ನಿವಾರಣೆಗೆ ಈ ವಿನೂತನವಾದ ಸಂಶೋಧನೆ ನಾಂದಿ ಹಾಡಿದಂತಿದೆ. ಪ್ಲಾಸ್ಟಿಕ್ ನಿರ್ಮೂಲನೆ, ಪರಿಸರ ರಕ್ಷಣೆ ಹಾಗೂ ಹಸಿರು ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸುವ ತುರ್ತು ಅಗತ್ಯವಿದೆ. ಜಲಮೂಲ ನಾಶವಾದಾಗ, ನಾವು ಆತಂಕ ಪಡುತ್ತೇವೆ. ಕಾಂಕ್ರೀಟ್ ನಂತಹ ಅವೈಜ್ಞಾನಿಕ ವ್ಯವಸ್ಥೆಯಿಂದ ಪರಿಸರ ನಾಶವಾಗುತ್ತಿದೆ. ಇಂತಹ ಸಂದಿಗ್ಧ ಕಾಲದಲ್ಲಿ ಫೈನ್ ಪ್ಲಾಂಟ್‌ನAತಹ ಸಂಶೋಧನೆ ನಡೆದಿರುವುದು ಶ್ಲಾಘನೀಯ. ಸರ್ಕಾರ ಮಟ್ಟದಲ್ಲಿಯೂ ಇಂತಹ ಸಂಶೋಧನೆಗಳಿಗೆ ಪ್ರೋತ್ಸಾಹ ದೊರಕುವಂತಾಗಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ʼಹೊಸ ಪುಟʼ ಅಪ್ಲಿಕೇಶನ್ ಲೋಕಾರ್ಪಣೆ ಮಾಡಿ ಮಾತನಾಡಿದ ಬೆಂಗಳೂರಿನ ಬಿಬಿಎಂಪಿಯ ಅಪರ ಆಯುಕ್ತರಾದ ಅಜಿತ್ ಹೆಗ್ಡೆ ಶಾನಾಡಿ ಮಾತನಾಡಿ, ಪ್ರಾಕೃತಿಕತೆಯನ್ನು ಉಳಿಸುವ ಇಂತಹ ಸಂಶೋಧನೆ ಎಲ್ಲರಿಗೂ ತಲುಪುವಂತಾಗಲೂ. ಸಂಬAಧಪಟ್ಟ ಇಲಾಖೆಗಳು ಕಾರ್ಯೋನ್ಮುಖವಾಗಬೇಕು. ಶಾಲೆ ಹಾಗೂ ಶಿಕ್ಷಣಾಸಕ್ತರನ್ನು ಒಂದುಗೂಡಿಸುವ ಹೊಸ ಪುಟ ಅಪ್ಲಿಕೇಶನ್ ಪರಿಣಾಮಕಾರಿಯಾಗಲು ಇದರ ಸದ್ಬಳಕೆ ಆಗಬೇಕು. ಹೀಗಾದಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿ ನಿರ್ಮಾಣವಾಗುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಫೈನ್ ಪ್ಲಾಂಟ್ ರಿಸರ್ವ್ಯಯರ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಪ್ರಸನ್ನಚಂದ್ರ ಶೆಟ್ಟಿ, ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಹೆಗ್ಡೆ ಟ್ರಸ್ಟ್ (ರಿ.)ನ ಎಂ ದಿನೇಶ್ ಹೆಗ್ಡೆ ಮೊಳಹಳ್ಳಿ, ವಡೇರಹೋಬಳಿ ಸರ್ಕಾರಿ ಹಿ. ಪ್ರಾ. ಶಾಲೆ ನಿವೃತ್ತ ಮುಖ್ಯ ಶಿಕ್ಷಕರಾದ ಎ.ಚಂದ್ರಶೇಖರ್ ಶೆಟ್ಟಿ, ಕುಂದಾಪುರ ವಲಯ ಶಿಕ್ಷಣಾಧಿಕಾರಿ ಶೋಭಾ ಎಸ್. ಶೆಟ್ಟಿ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ರವಿರಾಜ್ ಶೆಟ್ಟಿ ಜಿ., ಜಿಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ರಾಘವೇಂದ್ರ ಕುಲಾಲ್, ವಡೇರಹೋಬಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಾಲಚಂದ್ರ ಹೆಬ್ಬಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳಿಗೆ, ಪ್ರಮುಖ ದೇವಸ್ಥಾನಗಳಿಗೆ, ಇಗರ್ಜಿ, ಮಸೀದಿಗಳಿಗೆ, ಶಾಲಾ-ಕಾಲೇಜುಗಳಿಗೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಗೆ ಉಚಿತವಾಗಿ ಫೈನ್ ಪ್ಲಾಂಟ್ ಗಳನ್ನು ವಿತರಿಸಲಾಯಿತು.