Saturday, November 23, 2024
ಸುದ್ದಿ

ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಧಾರ್ಮಿಕ ಸಭೆ: ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಭಾಗಿ- ಕಹಳೆ ನ್ಯೂಸ್

ವೇಣೂರು: ಪ್ರಾಚೀನ ಇತಿಹಾಸ, ನಾಗರಿಕತೆ ಮತ್ತು ಸಂಸ್ಕ್ರತಿಯ ಅಧ್ಯಯನದಿಂದ ನಾವು ದುರ್ಗುಣಗಳನ್ನು ತ್ಯಜಿಸಿ ಉತ್ತಮ ಸಂಸ್ಕಾರದಿoದ ಮಾನವೀಯತೆಯೊಂದಿಗೆ ಸಾರ್ಥಕ ಜೀವನ ನಡೆಸಬಹುದು. ಸತ್ಯ ಮತ್ತು ಅಹಿಂಸೆಯ ಪಾಲನೆಯಿಂದ ಜೀವನ ಪಾವನವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಮಂಗಳವಾರ ವೇಣೂರಿನಲ್ಲಿ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಅಯೋಜಿಸಿದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶ ಮತ್ತು ಭಾಷೆಯ ಸೀಮೆಯನ್ನು ಮೀರಿ, ಬಾಹುಬಲಿಯ ಜೀವನ ಸಿದ್ಧಾಂತವನ್ನು ನಾವು ಅನುಸರಿಸಿದಲ್ಲಿ ದಾನವ ಗುಣಗಳನ್ನು ತ್ಯಜಿಸಿ ಆದರ್ಶ ಮಾನವರಾಗಿ ಉತ್ತಮ ಜೀವನ ನಡೆಸಬಹುದು. ಪ್ರತಿದಿನ ತಾನು ಬೆಳಿಗ್ಗೆ ಬೇಗನೆ ಎದ್ದು ನೇಮಿಚಂದ್ರ ಕವಿ ರಚಿಸಿದ ಗೊಮ್ಮಟ ಸ್ತುತಿಯನ್ನು ಓದುವುದಾಗಿ ತಿಳಿಸಿದ ಮೊಯಿಲಿ ಅವರು, ಇದರಿಂದಾಗಿ ಮನಸು ಪವಿತ್ರವಾಗುತ್ತದೆ. ಆದರ್ಶ ಮಾನವೀಯ ಮೌಲ್ಯಗಳು ಮೂಡಿಬರುತ್ತವೆ.ಜೈನರ ಪ್ರಭಾವದಿಂದ ತಾನು ಶುದ್ಧ ಸಸ್ಯಾಹಾರಿಯಾಗಿದ್ದು ನಿರಂತರ ಧಾರ್ಮಿಕ ಗ್ರಂಥಗಳ ಅಧ್ಯಯನ ಮತ್ತು ಸಂಶೋಧನೆಯನ್ನು ತಪಸ್ಸಿನಂತೆ ಏಕಾಗ್ರತೆಯಿಂದ ಮಾಡುತಿದ್ದೇನೆ ಎಂದರು. ಯುವಜನತೆ ಕೂಡಾ ಧಾರ್ಮಿಕ ಗ್ರಂಥಗಳ ಅಧ್ಯಯನ ಮಾಡಿ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜೈನಕಾಶಿ ಮೂಡಬಿದ್ರೆ ತನ್ನ ಹುಟ್ಟೂರಾಗಿದ್ದು ಜೈನ ಹೈಸ್ಕೂಲಿನಲ್ಲಿ ತಾನು ವಿದ್ಯಾರ್ಥಿಯಾಗಿದ್ದಾಗ ವಿಶೇಷವಾಗಿ ಅಂದು ಶಿಕ್ಷಕರಾಗಿದ್ದ ದಿ| ಟಿ.ರಘುಚಂದ್ರ ಶೆಟ್ಟಿ ಮತ್ತು ದಿ| ಕೆ.ಕಾಂತ ರೈ ಅವರ ಪ್ರೇರಣೆ, ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ತಾನು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳುವಂತಾಯಿತು. ಜೈನ ಸಮಾಜದ ನಿರಂತರ ಸಂಪರ್ಕ, ಅವರ ಜೀವನ ಶೈಲಿ, ಪ್ರೀತಿ-ವಿಶ್ವಾಸ ಮತ್ತು ನಾಯಕತ್ವ ಗುಣ ತನ್ನ ಉಜ್ವಲ ಭವಿಷ್ಯ ರೂಪಿಸುವಲ್ಲಿ ವಿಶೇಷ ಪ್ರಭಾವ ಬೀರಿದೆ ಎಂದರು.

ಯುಗಳ ಮುನಿಗಳಾದ ಪೂಜ್ಯ ಅಮೋಘಕೀರ್ತಿ ಮುನಿ ಮಹಾರಾಜರು ಮತ್ತು ಪೂಜ್ಯ ಅಮರಕೀರ್ತಿ ಮುನಿ ಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಿತು. ಡಾ ಎಂ.ಎನ್.ರಾಜೇAದ್ರಕುಮಾರ್, ಡಾ ಪದ್ಮಪ್ರಸಾದ ಅಜಿಲ, ಪ್ರಧಾನ ಕಾರ್ಯದರ್ಶಿ ವಿ.ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿ ಪಿ.ಜಯರಾಜ ಕಂಬಳಿ, ಮೂಡಬಿದರೆ ಚೌಟರ ಅರಮನೆಯ ಕುಲದೀಪ್ ಮತ್ತು ಎಂ.ಸಿ.ಎಸ್. ಬ್ಯಾಂಕಿನ ಸಿ.ಇ.ಒ.ಚಂದ್ರಶೇಖರ ಉಪಸ್ಥಿತರಿದ್ದರು.

ಕೆ.ಹೇಮರಾಜ್ ಬೆಳ್ಳಿಬೀಡು ಸ್ವಾಗತಿಸಿದರು. ಸ್ಮಿತೇಶ್ ಪತ್ರಾವಳಿ ವಂದಿಸಿದರು. ಮಹಾವೀರ್ ಜೈನ್ ಮೂಡುಕೋಡಿಗುತ್ತು ಕಾರ್ಯಕ್ರಮ ನಿರ್ವಹಿಸಿದರು.