ಅಡ್ಯಾರ್ ಕಣ್ಣೂರಿಂದ ಕೇರಳಕ್ಕೆ ಸಾಗಿಸುತ್ತಿದ್ದ ಮರಳು ಟಿಪ್ಪರ್, ಲಾರಿಗಳನ್ನು ಸಂಚಾರಿ ಪೊಲೀಸರು ಮುಟ್ಟುಗೋಲು ಹಾಕಿದ ಘಟನೆ ನಡೆದಿದೆ.
ಸಬ್ ಇನ್ ಸ್ಪೆಕ್ಟರ್ ಕಬ್ಬಲ್ ರಾಜ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ 10 ಚಕ್ರದ ಬೃಹತ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ತಲಪಾಡಿ ಬಳಿ ಮುಟ್ಟುಗೋಲು ಹಾಕಿಕೊಂಡರು.
ಬುಕಾರಿ ಕರೀಮ್ ಎಂಬವರು ಅಕ್ರಮ ಸಾಗಾಟ ಮಾಡುತ್ತಿದ್ದು ದೇವಿನಗರ ಮೂಲಕ ಕೇರಳಕ್ಕೆ ಮರಳು ಅಕ್ರಮವಾಗಿ ಸಾಗಿಸಲಾಗುತ್ತಿದ್ದು ಟಿಪ್ಪರ್‌ನಲ್ಲೂ ಸಾಗಿಸಲಾಗುತ್ತಿತ್ತು. ಟಿಪ್ಪರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.