ಕಡಬ: ಬಸ್ಸಿನಿಂದ ಇಳಿಯುತ್ತಿದ್ದ ವೇಳೆ ಚಾಲಕ ಬಸ್ಸು ಚಲಾಯಿಸಿದ ಪರಿಣಾಮ ಮಹಿಳೆಯೋರ್ವರು ಕೆಳಕ್ಕೆ ಬಿದ್ದು ಗಾಯಗೊಂಡಿರುವ ಘಟನೆ ಸುಬ್ರಹ್ಮಣ್ಯ ಗ್ರಾಮದ ಬಿಲದ್ವಾರದ ಬಳಿ ನಡೆದಿದೆ.
ಕಡಬ ತಾಲೂಕು ಬಿಳಿನೆಲೆ ಗ್ರಾಮದ ಹೂವಪ್ಪ ಗೌಡರವರ ಪತ್ನಿ ವಸಂತಿ ಎಂ.(42ವ.)ಗಾಯಗೊAಡವರು. ಇವರು ತನ್ನ ಮಗಳೊಂದಿಗೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ (ಕೆಎ 19 ಎಫ್ 3247) ಪ್ರಯಾಣಿಸುತ್ತಿದ್ದವರು ಸುಬ್ರಹ್ಮಣ್ಯ ಬಿಲದ್ವಾರದ ಬಳಿ ಬಸ್ಸಿನ ನಿರ್ವಾಹಕ ಅಡಿವೆಪ್ಪ ಪಟಾಣಿರವರಲ್ಲಿ ತಿಳಿಸಿ ಇಳಿಯುತ್ತಿದ್ದಾಗ ನಿರ್ವಾಹಕ ಗಮನಿಸದೇ ಬಸ್ ಚಲಾಯಿಸಲು ಸೂಚನೆ ನೀಡಿದ್ದಾರೆ. ಈ ವೇಳೆ ಬಸ್ ಚಾಲಕ ಮಂಜುನಾಥರವರು ಬಸ್ ಚಲಾಯಿಸಿದ ಪರಿಣಾಮ ವಸಂತಿರವರು ಬಸ್ನಿಂದ ಕೆಳಗೆ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳು ವಸಂತಿ ಅವರನ್ನು ಚಿಕಿತ್ಸೆಗಾಗಿ ದೇರಳ ಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಹೂವಪ್ಪ ಅವರು ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 12/2024 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
You Might Also Like
ವಿಟ್ಲಸ್ವರ ಸಿಂಚನ ಸಂಗೀತ ಶಾಲೆಗೆ ಶೇಕಡ 100 ಫಲಿತಾಂಶ-ಕಹಳೆ ನ್ಯೂಸ್
ಪೆರ್ನಾಜೆ: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಯುನಿವರ್ಸಿಟಿ ಮೈಸೂರು ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ಜೂನಿಯರ್ ವಿಭಾಗದಲ್ಲಿ ಸ್ವರ ಸಿಂಚನ ಸಂಗೀತ ಶಾಲೆಯ ಆರು ಮಂದಿ...
ಗೋ ಸುಭದ್ರ ಪರಂಪರೆಯನ್ನು ವಿಶ್ವಕ್ಕೆ ಸಾರಿದ ತೃತೀಯ ವಿಶ್ವ ಹವ್ಯಕ ಸಮ್ಮೇಳನ-ಕಹಳೆ ನ್ಯೂಸ್
ಪೆರ್ನಾಜೆ:ಭಗವಾನ್ ಶ್ರೀ ಕೃಷ್ಣ ಹೇಳುತ್ತಾರೆ ಯಾವುದೇ ಒಬ್ಬ ಮನುಷ್ಯನ ಸಮಯ ಮತ್ತು ಪರಿಸ್ಥಿತಿ ನೋಡಿ ನಿಂದನೆಯನ್ನು ಮಾಡಬೇಡಿ ಯಾಕೆಂದರೆ ಅವರ ಸಮಯ ಯಾವಾಗ ಬೇಕಾದರೂ ಬದಲಾಗಬಹುದು. ನೀವು...
ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಯಕ್ಷಗಾನ ಕಲಾವಿದ ಹಾಸ್ಯ ಚಕ್ರವರ್ತಿ ಅರುಣ್ ಕುಮಾರ್ ಜಾರ್ಕಳ ಆಯ್ಕೆ -ಕಹಳೆ ನ್ಯೂಸ್
ಮಂಗಳೂರು: ಕಾರ್ಕಳ ಹಿರ್ಗಾನ ಕ್ಷೇತ್ರದಿಂದ ಪ್ರತಿ ವರ್ಷ ನೀಡಲಾಗುವ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಯಕ್ಷಗಾನ ಕಲಾವಿದ ಹಾಸ್ಯ ಚಕ್ರವರ್ತಿ ಅರುಣ್ ಕುಮಾರ್ ಜಾರ್ಕಳ ಆಯ್ಕೆಯಾಗಿದ್ದಾರೆ. ಜ.23ರಂದು...
ರಾಜ್ಯದ ಜನತೆಗೆ ಗುಡ್ ನ್ಯೂಸ್ : `ಯಶಸ್ವಿನಿ ಯೋಜನೆ’ ನೋಂದಣಿಗೆ ಜ.31ರವರೆಗೆ ಅವಕಾಶ.!– ಕಹಳೆ ನ್ಯೂಸ್
ಬೆಂಗಳೂರು : ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಹೊಸದಾಗಿ ಹಾಗೂ ನವೀಕರಣಕ್ಕಾಗಿ ಸರ್ಕಾರ ಹಾಗೂ ಸಹಕಾರ ಇಲಾಖೆ ಪ್ರಕಟಣೆ ಹೊರಡಿಸಿದ್ದು ನೋಂದಣಿ ಮಾಡಿಸಲು ದಿನಾಂಕ:-31-01-2025 ಕೋನೆಯ ದಿನಾಂಕವಾಗಿರುತ್ತದೆ....