Tuesday, January 21, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಧರ್ಮಸ್ಥಳ: ವಿದ್ಯುತ್ ಶಾಕ್ ಹೊಡೆದು ಯುವಕ ಸಾವು – ಕಹಳೆ ನ್ಯೂಸ್

ಧರ್ಮಸ್ಥಳ: ವಿದ್ಯುತ್ ಶಾಕ್ ಹೊಡೆದು ಕಾರ್ಮಿಕ ಯುವಕನೋರ್ವ ಧರ್ಮಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಫೆ.29ರಂದು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಉತ್ತರ ಕರ್ನಾಟಕದ ಸಲೀಂ(36ವ) ಮೃತಪಟ್ಟ ಯುವಕ.ಧರ್ಮಸ್ಥಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಕಟ್ಟಡವೊಂದರ ಕಾಂಕ್ರೀಟ್ ಕಾಮಗಾರಿ ಸಂದರ್ಭ ಕಾಂಕ್ರೀಟ್ ವೈಬ್ರೇಟರ್ ಮಷೀನ್‌ನ ವಯರ್‌ನಿಂದ ವಿದ್ಯುತ್ ಪ್ರವಹಿಸಿ ಸಲೀಂ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆ.
ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು