Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳರಾಜ್ಯಸುದ್ದಿ

ರಾಷ್ಟ್ರಮಟ್ಟದ ಪೋಲೀಸ್ ಕರ್ತವ್ಯ ಕೂಟದಲ್ಲಿ ಚಿನ್ನದ ಪದಕ ಪಡೆದುಕೊಂಡ ಬಂಟ್ವಾಳ ಗ್ರಾಮಾಂತರ SI ಹರೀಶ್ ಎಂ.ಆರ್. – ಕಹಳೆ ನ್ಯೂಸ್

ಬಂಟ್ವಾಳ: ರಾಷ್ಟ ಮಟ್ಟದ ಪೋಲೀಸ್ ಕರ್ತವ್ಯ ಕೂಟದಲ್ಲಿ ಭಾಗವಹಿಸಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ದ.ಕ.ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ಎಂ.ಆರ್ ಅವರಿಗೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಫೆ.12 ರಿಂದ ಫೆ.16 ರವರೆಗೆ ಉತ್ತರ ಪ್ರದೇಶದ ಲಕ್ಕೋ ದಲ್ಲಿ ಜರುಗಿದ 67ನೇ ರಾಷ್ಟ್ರ ಮಟ್ಟದ ಪೋಲೀಸ್ ಕರ್ತವ್ಯ ಕೂಟದಲ್ಲಿ, ಉಪ್ಪಿನಂಗಡಿ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಹರೀಶ್ ಎಂ.ಆರ್ ರವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಅವರುಗಳ ಪೈಕಿ ಹರೀಶ್ ಎಂ.ಆರ್ ರವರು Forensic Science Written Test ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕ ಗಳಿಸಿದ್ದಾರೆ.