ಅಡ್ಯನಡ್ಕ : ಕರ್ಣಾಟಕ ಬ್ಯಾಂಕ್ ಕಳ್ಳತನ ಪ್ರಕರಣ : ಇಬ್ಬರನ್ನು ಬಂಧಿಸಿದ ಪೊಲೀಸರು – ಕಹಳೆ ನ್ಯೂಸ್
ವಿಟ್ಲ : ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಕಳ್ಳತನ ಪ್ರಕರಣದ ತನಿಖೆಯಲ್ಲಿ ಪೊಲೀಸರು ಪ್ರಗತಿಯನ್ನು ಸಾಧಿಸಿ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆನ್ನಲಾಗಿದೆ.
ಪೆರ್ಲದಲ್ಲಿ ವಾಹನದ ಗುರುತು ಹಾಗೂ ನಂಬರ್‌ಪ್ಲೇಟ್ ಪತ್ತೆ ಮಾಡಲಾಗಿತ್ತಾದರೂ, ಅದರಿಂದ ಕಳ್ಳರ ಪತ್ತೆಯನ್ನು ಮಾಡಲು ಸಾಧ್ಯವಾಗಿಲ್ಲ. ತಾಂತ್ರಿಕ ತನಿಖೆಯ ಮೂಲಕ ಕೃತ್ಯಕ್ಕೆ ಕಾರಣರಾದವರ ಮಾಹಿತಿಯನ್ನು ಸಂಗ್ರಹಿಸಿದ ಪೊಲೀಸರು ಪ್ರಮುಖ ಆರೋಪಿಗಳನ್ನು ಎರಡು ದಿನಗಳ ಹಿಂದೆ ವಶಕ್ಕೆ ಪಡೆದುಕೊಂಡಿದ್ದಾರೆ. ಮಾಹಿತಿಯ ಪ್ರಕಾರ ಕೇರಳದಲ್ಲಿ ಬೀಡು ಬಿಟ್ಟಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ನಗದು ಹಾಗೂ ಚಿನ್ನಾಭರಣವನ್ನು ಪಾಲು ಮಾಡಿಕೊಂಡು ಹಂಚಿಕೊAಡ ಮಾಹಿತಿ ಕಳ್ಳರಿಂದಲೇ ಪಡೆದುಕೊಂಡಿದ್ದಾರೆನ್ನಲಾಗಿದೆ.
ಬ್ಯಾAಕ್ ಕಟ್ಟಡದ ಹಿಂಬಾಗಿಲಿನ ಕಿಟಕಿಯನ್ನು ತುಂಡರಿಸಿ ಒಳ ನುಗ್ಗಿದ ಕಳ್ಳರು ಸೇಫ್ ಲಾಕರ್ ಬಾಗಿಲು ತುಂಡರಿಸಿ, ಲಾಕರ್ ಒಳಗಿದ್ದ ನಗದು ಹಾಗೂ ಚಿನ್ನಾಭರಣವನ್ನು ಫೆ.7ರ ರಾತ್ರಿ ದೋಚಿದ್ದರು. ಬ್ಯಾಂಕ್ ಕಳ್ಳತನ ನಡೆಯುತ್ತಿದ್ದಂತೆ ವಾಹನದ ಗುರುತು ಪತ್ತೆ ಮಾಡಿ, ಸ್ಥಳೀಯ ಇಬ್ಬರನ್ನು ಅನುಮಾನದ ಮೇಲೆ ವಿಚಾರಣೆಯನ್ನು ನಡೆಸಿ ಬಿಡುಗಡೆ ಮಾಡಲಾಗಿತ್ತು.