Recent Posts

Tuesday, January 21, 2025
ಜಿಲ್ಲೆದಕ್ಷಿಣ ಕನ್ನಡಸುದ್ದಿ

ಬಂಟ್ವಾಳ : ಶ್ರೀರಾಮ ಪದವಿ ಕಾಲೇಜಿನ ವಾರ್ಷಿಕಕ್ರೀಡಾಕೂಟ – ಕಹಳೆ ನ್ಯೂಸ್

ಬಂಟ್ವಾಳ : ಶ್ರೀರಾಮ ಪದವಿ ಕಾಲೇಜಿನ ಪ್ರತಾಪ ಕ್ರೀಡಾಸಂಘದ ವತಿಯಿಂದವಾರ್ಷಿಕಕ್ರೀಡಾಕೂಟವು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಸಂಸ್ಥೆಯ ಹಿರಿಯರಾದಡಾ| ಪ್ರಭಾಕರ ಭಟ್‌ಕಲ್ಲಡ್ಕ ಅವರು ದೀಪ ಬೆಳಗಿಸಿ ವಾಷ್ಙಿಠ್ಪಿ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಕ್ರೀಡೆಯುಯುವ ಮನಸ್ಸುಗಳಲ್ಲಿ ಸ್ವಾಭಿಮಾನ ಆತ್ಮಾಭಿಮಾನವನ್ನು ಬೆಳೆಯಲು ಸಹಕಾರಿ.ಮಾನಸಿಕ ಬೆಳವಣಿಗೆಯ ಜೊತೆಗೆ ದೈಹಿಕ ಸದೃಢತೆಯು ವೃದ್ಧಿಸುವುದು ಹಾಗೂ ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವಂತಾಗಬೇಕು, ಗೆಲುವಿಗೆ ನಾನು ಎನ್ನದೆ ನಾವು ಎಂಬ ಭಾವನೆಯೊಂದಿಗೆಎಲ್ಲರಗುರಿ ಸದಾ ಯಶಸ್ಸಿನತ್ತ ಇರಲಿ ಎಂಬುದಾಗಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಕಲ್ಲಡ್ಕದ ಬ್ಯಾಂಕ್‌ಆಫ್ ಬರೋಡಾಇದರ ಶಾಖಾ ವ್ಯವಸ್ಥಾಪಕರು ಧೀರಜ್ ಶೆಟ್ಟಿಇವರು ಬ್ಯಾಂಕಿAಗ್‌ಕ್ಷೇತ್ರದಲ್ಲಿಯೂ ಸಹ ಕ್ರೀಡೆಗೆಉತ್ತಮ ಅವಕಾಶಗಳಿವೆ ಎಂದರು.ಇನ್ನೊಬ್ಬಅತಿಥಿಯಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾರ್ಲಇದರ ಶಿಕ್ಷಕಿ ಶ್ರೀಮತಿ ಯಶೋದಾಧ್ವಜಾರೋಹಣಗೈದು – ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ರಾಜ್ಯ, ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ವಿದ್ಯಾಕೇಂದ್ರದಕೀರ್ತಿಯನ್ನು ಹೆಚ್ಚಿಸಿ ಎಂಬುದಾಗಿ ವಿದ್ಯಾರ್ಥಿಗಳಿಗೆ ಶುಭಾಶಯ ಹೇಳಿದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್‌ಕಾಯರ್‌ಕಟ್ಟೆ ಹಾಗೂ ಕ್ರೀಡಾ ಸಂಘದ ನಿರ್ದೇಶಕಧನಂಜಯಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ರೀಡಾ ಸಂಘದ ನಿರ್ದೇಶಕಧನಂಜಯ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು. ಪ್ರತೀತಂಡದ ನಾಯಕರುತಂಡ ಪರಿಚಯವನ್ನು ಅತಿಥಿಗಳಿಗೆ ಪರಿಚಯಿಸಿದರು.ಕನ್ನಡಉಪನ್ಯಾಸಕಿ ಶ್ರೀಮತಿ ರಶ್ಮಿತಾ ನಿರೂಪಿಸಿ, ಅರ್ಥಶಾಸ್ತ್ರಉಪನ್ಯಾಸಕಿ ಶ್ರೀಮತಿ ಸಂಧ್ಯಾ ಸ್ವಾಗತಿಸಿ, ಕ್ರೀಡಾ ಸಂಘದಅಧ್ಯಕ್ಷ, ವಿದ್ಯಾರ್ಥಿ ಸಂಪತ್, ಧನ್ಯವಾದ ಸಮರ್ಪಿಸಿದರು.