ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ : ಓರ್ವ ಶಂಕಿತ ವಶಕ್ಕೆ; ಪೊಲೀಸರಿಂದ ತೀವ್ರ ವಿಚಾರಣೆ – ಕಹಳೆ ನ್ಯೂಸ್
ಬೆಂಗಳೂರು: ರಾಮೇಶ್ವರಂ ಕೆಫೆ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿರುವ ಮಾಹಿತಿ ಲಭ್ಯವಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಚಹರೆಯನ್ನು ಆಧರಿಸಿ ಓರ್ವ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ.
ಹೋಟೆಲ್‌ನಲ್ಲಿ ಬ್ಯಾಗ್ ಇರಿಸಿ, ಬಸ್ ನಲ್ಲಿ ಈ ಶಂಕಿತ ಹಿಂದಿರುಗಿದ್ದ ಎನ್ನಲಾಗಿದೆ. ಶಂಕಿತನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ.
ಬೆಳಗ್ಗೆ ಸುಮಾರು 11.40ರ ವೇಳೆಗ ಆಗಂತುಕ ರಾಮೇಶ್ವರಂ ಕೆಫೆಗೆ ಬಂದಿದ್ದಾನೆ. ಹೆಗಲಿಗೆ ಸೈಡ್ ಬ್ಯಾಗ್, ತಲೆಗೆ ಟೋಪಿ ಹಾಕಿಕೊಂಡು ಕೆಫೆ ಪ್ರವೇಶಿಸಿದ್ದಾನೆ.
ಹೊಟೇಲ್ ನಲ್ಲಿ ಸ್ವಲ್ಪ ಹೊತ್ತು ಗಮನಿಸಿ ಕಾಲ ಕಳೆದಿದ್ದಾನೆ. ನಂತರ ತಿಂಡಿ ತಿಂದು ಬ್ಯಾಗ್ ವೊಂದನ್ನ ಹ್ಯಾಂಡ್ ವಾಷ್ ಬಳಿ ಇರಿಸಿದ್ದಾನೆ. ಅಲ್ಲಿಂದ ಕೆಫೆ ಸಮೀಪದಲ್ಲಿರೋ ನಿಲ್ದಾಣದಿಂದ ಬಸ್ ಹತ್ತಿ ತೆರಳಿರೋ ಸಾಧ್ಯೆತೆಗಳಿವೆ.
ಇನ್ನು ಘಟನೆ ನಡೆಯುತಿದ್ದಂತೆ ಬಾಂಬ್ ನಿಷ್ಕ್ರಿಯ ದಳ, ಎಫ್‌ಎಸ್‌ಎಲ್, ಎನ್‌ಐಎ, ಐಎಸ್‌ಡಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಘಟನಾ ಸ್ಥಳವನ್ನ ತಮ್ಮ ಸುಪರ್ದಿಗೆ ಪಡೆದು ತನಿಖೆ ಆರಂಭಿಸಿದ್ರು.
ಈ ವೇಳೆ ಸ್ಥಳದಲ್ಲಿ ಐಇಡಿ ಸ್ಫೋಟಗೊಂಡಿರೋದು ಕನ್ಫರ್ಮ್ ಆಗಿದೆ. ಅಲ್ಲದೆ ಸ್ಫೋಟಕಕ್ಕೆ ಟಿಫಿನ್ ಬಾಕ್ಸ್, ನಟ್ಟು, ಬೋಲ್ಟ್ ಬಳಸಿರೋ ಮಾಹಿತಿ ಲಭ್ಯವಾಗಿದೆ.
ಆ ಕೇಸ್‌ಗೂ ನಂಟಿದ್ಯಾ?
ರಾಮೇಶ್ವರA ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಉಗ್ರರ ಕೈವಾಡನಾ ಅನ್ನೋ ಆಯಂಗಲ್‌ನಲ್ಲ ತನಿಖೆ ಆಗ್ತಿದೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ಗೂ ಈ ಕೇಸ್‌ಗೂ ನಂಟಿದ್ಯಾ ಅಂತ ಎನ್‌ಐಎ ಹುಡುಕಾಡ್ತಿದೆ.
ಈ ಹಿಂದೆ ಬೆಂಗಳೂರು, ಕೋಲಾರ, ಉತ್ತರ ಕನ್ನಡ, ಮಂಗಳೂರಲ್ಲಿ ಶಂಕಿತರ ಬಂಧನ ಆಗಿತ್ತು. ಶಂಕಿತ ಉಗ್ರರಿಗೂ ಇವತ್ತಿನ ಬ್ಲಾಸ್ಟ್ಗೂ ಸಂಬAಧ ಇದ್ಯಾ ಅಂತ ತನಿಖೆ ನಡೆಯುತ್ತಿದೆ.
ನಿಗೂಢ ವಸ್ತು ಸ್ಫೋಟ ಘಟನೆಯಲ್ಲಿ ಓರ್ವ ಮಹಿಳೆ, ಮೂವರು ಹೋಟೆಲ್ ಸಿಬ್ಬಂದಿ ಸೇರಿ ಒಟ್ಟು 10 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ರಕ್ಷಿಸಿ, ಬ್ರೋಕ್ ಫೀಲ್ಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಈ ಪೈಕಿ ಫಾರುಕ್ ಹುಸಾಯ್ ಹಾಗೂ ದಿಪಾಂಶುಗೆ ಜನರಲ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗ್ತಿದ್ರೆ, ಸ್ವರ್ಣಾಂಭ ಎಂಬ ಮಹಿಳೆಯ ಸ್ಥಿತಿ ಗಂಭೀರವಾಗಿದೆ.