ಬೆಳ್ತಂಗಡಿ : ವಾಣಿಶ್ರೀ ಗೆಳೆಯರ ಬಳಗ 94/95 (ರಿ.) ವಾಣೀನಗರ ಇಳಂತಿಲ ಸಂಘದ 30ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಎ.6ರಂದು ನಡೆಯಲಿರುವ ಇಳಂತಿಲದ ಸಾಂಸ್ಕೃತಿಕ ಹಬ್ಬ “ಇಳೋತ್ಸವ 2024” ರ ಪೂರ್ವಭಾವಿ ಸಭೆಯು ಶುಕ್ರವಾರ ಸಂಜೆ 7 ಕ್ಕೆ ವಾಣಿಶ್ರೀ ಭಜನಾ ಮಂದಿರ ವಾಣಿ ನಗರದಲ್ಲಿ ನಡೆಯಿತು.
ಕಾರ್ಯಕ್ರಮದ ಗೌರವ ಅಧ್ಯಕ್ಷರಾಗಿ ಬೆಂಗಳೂರಿನ ಯುವ ಉದ್ಯಮಿ ಶ್ರೀ ಕಿರಣ್ ಚಂದ್ರ ಇವರು ಆಯ್ಕೆಯಾದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಇಳಂತಿಲದ ಅಶ್ವಿನಿ ಬ್ರಿಕ್ಸ್ನ ಮಾಲಕರಾದ ಶ್ರೀ ಆಕಾಶ್ “ಅಶ್ವಿನಿ” ಅವರು ಆಯ್ಕೆಯಾದರು. ಕಾರ್ಯಾಧ್ಯಕ್ಷರಾಗಿ ವಾಣಿಶ್ರೀ ಗೆಳೆಯರ ಬಳಗದ ಅಧ್ಯಕ್ಷರಾಗಿ ಶ್ರೀ ಪ್ರೀತಮ್ ವಾಣೀನಗರ ಉಪಾಧ್ಯಕ್ಷರಾಗಿ ಶ್ರೀ ಸಚಿನ್ ಪೆಲಪ್ಪಾರು ಶ್ರೀಮಾತಾ, ಮತ್ತು ಶ್ರೀ ಅಮೃತ್ ಕಲ್ಲಳಿಕೆ. ಕಾರ್ಯದರ್ಶಿಯಾಗಿ ಶ್ರೀ ಕವೀಶ್ ಶೆಟ್ಟಿ. ಜೊತೆ ಕಾರ್ಯದರ್ಶಿಯಾಗಿ ಶ್ರೀ ಮೋಕ್ಷಿತ್ ಮುರ ,ಶ್ರೀ ಗಣೇಶ್ ಕಲ್ಚಾರ್. ಕೋಶಾಧಿಕಾರಿಗಳಾಗಿ ಶ್ರೀ ರಮೇಶ್ ಶ್ರೀ ದುರ್ಗಾ ಮತ್ತು ಶ್ರೀ ಉಮೇಶ್ ಗೌಡ ಕುಂಟಾಲ್ಕಟ್ಟೆ ಆಯ್ಕೆಯಾದರು.. ಗೌರವ ಸಲಹೆಗಾರರಾಗಿ ಶ್ರೀ ಜನಾರ್ದನ ಗೌಡ ಅಣ್ಣಾಜೆ , ಶ್ರೀ ರವಿ ಇಳಂತಿಲ, ಶ್ರೀ ಲಕ್ಷ್ಮೀಶ ಪಾಡೆಂಕಿ, ಶ್ರೀ ಕೆ ವಿ ಪ್ರಸಾದ್ ಭಟ್, ಶ್ರೀಮತಿ ಚಂದ್ರಿಕಾ ಭಟ್ ,ಶ್ರೀ ತಿಮ್ಮಪ್ಪ ಗೌಡ ಕುಮೆರ್ಜಾಲ್, ಶ್ರೀ ವೆಂಕಟರಮಣ ಭಟ್ ಪೆಲಪ್ಪಾರು, ಶ್ರೀ ಗಣೇಶ್ ಭಟ್ ಮೂಡಾಜೆ, ಶ್ರೀ ಜಯಪ್ರಸಾದ್ ಕಡಮ್ಮಾಜೆ, ಶ್ರೀ ವಸಂತ ಶೆಟ್ಟಿ ಸಹಸ್ರ, ಶ್ರೀ ವಸಂತ ಜಿ ಸಾಲಿಯಾನ್, ಶ್ರೀ ಹರೀಶ್ ಗೌಡ ವಾಣೀನಗರ, ಶ್ರೀ ಸುಂದರ ಶೆಟ್ಟಿ ಎಂಜಿರಪಳಿಕೆ. ಶ್ರೀ ಪದ್ಮನಾಭ ಕುಂಬಾರ ಎಣ್ಮಾಡಿ , ಶ್ರೀ ಲಕ್ಮಣ ಮಿತ್ತಿಲ . ಪ್ರಚಾರ ಸಮಿತಿಯ ಸಂಚಾಲಕರಾಗಿ ಶ್ರೀ ಗಿರೀಶ್ ಅರ್ಬಿ. ಸ್ವಾಗತ ಸಮಿತಿಯ ಸಂಚಾಲಕರಾಗಿ ಜಗದೀಶ್ ಕಟ್ಟೆಚ್ಚಾರ್ ಮತ್ತು ಗಿರೀಶ್ ಇಳಂತಿಲ ಮಾರಾಟ ಮಳಿಗೆಯ ನಿರ್ವಹಣೆ ಶ್ರೀ ಉಮೇಶ್ ಪೂಜಾರಿ ಅಣ್ಣಾಜೆ ಮತ್ತು ಯತೀಶ್ ನೆಕ್ಕಾರೆ , ಅಲಂಕಾರ ಸಮಿತಿಯ ಸಂಚಾಲಕರಾಗಿ ಶ್ರೀ ಲಕ್ಷ್ಮೀಶ ಪಾಡೆಂಕಿ ಇವರೆಲ್ಲರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.