Inspire Award ಗೆ ಆಯ್ಕೆಯಾದ ಪಾಲ್ತಾಡಿ ಹಿರಿಯ ಪ್ರಾಥಮಿಕ ಶಾಲೆಯ ಸುಕಿತ್ ರಾಜ್ – ಕಹಳೆ ನ್ಯೂಸ್
ಪುತ್ತೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲ್ತಾಡಿ ಇಲ್ಲಿಯ ಏಳನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಕಿತ್ ರಾಜ್ ಈ ವರ್ಷದ Inspire Award ಗೆ ಆಯ್ಕೆ ಆಗಿರುತ್ತಾನೆ.
ತಾಲೂಕಿನ 59 ವಿದ್ಯಾರ್ಥಿಗಳಲ್ಲಿ ಇವನು ಒಬ್ಬನಾಗಿದ್ದು, ಕೆಯ್ಯೂರು ಕ್ಲಸ್ಟರ್ ನ ಪ್ರಾಥಮಿಕ ವಿಭಾಗದಲ್ಲಿ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಯಾಗಿರುತ್ತಾನೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ.
ಈತನಿಗೆ ಮುಖ್ಯ ಶಿಕ್ಷಕರು ಮತ್ತು ವಿಜ್ಞಾನ ಶಿಕ್ಷಕಿ ಮಾರ್ಗದರ್ಶನ ನೀಡಿರುತ್ತಾರೆ. ಇವನು ಕಾಯರ್ ಗುರಿ ಉಮೇಶ ಹಾಗೂ ಸತ್ಯವತಿ ದಂಪತಿಯ ಪುತ್ರನಾಗಿದ್ದು ಶಾಲೆಯ ಪರವಾಗಿ ಅಭಿನಂದನೆಗಳು ಸಲ್ಲಿಸಲಾಗಿದೆ.