Saturday, November 23, 2024
ಸುದ್ದಿ

ಎನ್ನೆಂಸಿ: ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ಸೀತಾ ಫಾಲ್ಸ್ ಚಾರಣ ಮತ್ತು ಅಧ್ಯಯನ ಭೇಟಿ- ಕಹಳೆ ನ್ಯೂಸ್‍

ಸುಳ್ಯ; ನೆಹರೂ ಮೆಮೋರಿಯಲ್ ಕಾಲೇಜು ಇಲ್ಲಿನ ನೇಚರ್ ಕ್ಲಬ್ ಹಾಗೂ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗಗಳ ವತಿಯಿಂದ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಹೆಬ್ರಿಯ ಕೂಡ್ಲು ತೀರ್ಥ (ಸೀತಾ ಫಾಲ್ಸ್) ಜಲಪಾತಕ್ಕೆ ಚಾರಣ ಮತ್ತು ಕಾರ್ಕಳ ತಾಲೂಕಿನ ವರಂಗ ಕೆರೆ ಬಸದಿ, ಬೈಂದೂರಿನ ಮರವಂತೆ ಹಾಗೂ ಭಟ್ಕಳದ ಮುರುಡೇಶ್ವರ ಸಮುದ್ರ ಕಿನಾರೆಗಳಲ್ಲಿ ಅಧ್ಯಯನ ಭೇಟಿ ಏರ್ಪಡಿಸಿ ಅಲ್ಲಿನ ವಿಶೇಷತೆಗಳನ್ನು ತಿಳಿದುಕೊಳ್ಳಲಾಯಿತು.

ಅಧ್ಯಯನ ಭೇಟಿಯನ್ನು ಮುಂಜಾನೆ ಕಾರ್ಕಳದ ಹೆಬ್ರಿ ಸಮೀಪದ ಇತಿಹಾಸ ಪ್ರಸಿದ್ದ ವರಂಗ ಕೆರೆ ಬಸದಿಗೆ ತೆರಳಿ ಸೂರ್ಯೋದಯವನ್ನು ವೀಕ್ಷಿಸಿ ಪ್ರಾರಂಭಿಸಲಾಯಿತು. ಇಲ್ಲಿ ಜಲ ಸಸ್ಯಗಳನ್ನು ಸಂಗ್ರಹಿಸಿ, ದೋಣಿ ಮೂಲಕ ಕೆರೆ ಮಧ್ಯಭಾಗದಲ್ಲಿರುವ ಬಸದಿಗೆ ತೆರಳಿ ಸಮೀಪದ ಮರಗಳಲ್ಲಿ ವಲಸೆ ಬಂದಿರುವ ಪಕ್ಷಿಗಳನ್ನು ಗುರುತಿಸಿ ಬರಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಹೆಬ್ರಿ ವಲಯ ಅರಣ್ಯ ವಿಭಾಗದವರ ಸಹಕಾರದೊಂದಿಗೆ ಸೀತಾ ಜಲಪಾತಕ್ಕೆ ಚಾರಣವನ್ನು ಹಮ್ಮಿಕೊಳ್ಳಲಾಯಿತು. ಚಾರಣದ ಹಾದಿಯಲ್ಲಿ ಸಿಕ್ಕ ಜರಿ ಗಿಡಗಳು, ಆರ್ಕಿಡ್ ಸಸ್ಯಗಳು, ಅರಣ್ಯ ವೃಕ್ಷ ಪ್ರಭೇದಗಳನ್ನು ವೀಕ್ಷಿಸಿ ಜಲಪಾತದ ಸಮೀಪದ ಕೆಲವು ಪಾಚಿ ಇನ್ನಿತರ ಸಸ್ಯಗಳನ್ನು ಸಂಗ್ರಹಿಸಲಾಯಿತು.
ಅಪರಾಹ್ನ ಕುಂದಾಪುರ ಸಮೀಪದ ಮರವಂತೆ ಬೀಚ್ ಬಳಿ ಮ್ಯಾಂಗ್ರೋವ್ ಕಾಡುಗಳನ್ನು ವೀಕ್ಷಿಸಿ ಮುರುಡೇಶ್ವರ ತಲುಪಿದರು. ಇಲ್ಲಿ ಸಮುದ್ರ ತೀರದ ಕೆಲವು ಸಸ್ಯಗಳನ್ನು ಸಂಗ್ರಹಿಸಿ ಶಿವ ದೇವಾಲಯಕ್ಕೆ ಭೇಟಿನೀಡಿ ಪ್ರಕೃತಿ ರಮಣೀಯ ಸೂರ್ಯಾಸ್ತಮಾನವನ್ನು ವೀಕ್ಷಿಸಿ ಸಮಾಪನಗೊಳಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಚಾರಣ ಮತ್ತು ಅಧ್ಯಯನ ಭೇಟಿಯ ನೇತೃತ್ವವನ್ನು ಎನ್ನೆಂಸಿ ನೇಚರ್ ಕ್ಲಬ್ ಸಂಚಾಲಕ ಕುಲದೀಪ್ ಪಿ ಪಿ ಹಾಗೂ ಉಪನ್ಯಾಸಕರಾದ ಕೃತಿಕಾ ಕೆ. ಜೆ, ಅಜಿತ್ ಕುಮಾರ್ ಎಸ್. ಬಿ, ಪಲ್ಲವಿ ಕೆ. ಎಸ್, ಹರ್ಷಿತಾ ಕೆ ವಹಿಸಿದ್ದರು. ನೇಚರ್ ಕ್ಲಬ್ ನ ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಸಸ್ಯಶಾಸ್ತ್ರ ಪ್ರಯೋಗಾಲಯದ ಸಹಾಯಕ ಸಿಬ್ಬಂದಿ ಭವ್ಯ ಸಹಕರಿಸಿದರು.