ಪುತ್ತೂರು, : ಸಾಹಿತ್ಯಿಕವಾಗಿ ಬಹಳ ಸಮೃದ್ಧ ಮತ್ತು ಫಲ ಭರಿತವಾದ ಕ್ಷೇತ್ರ ಪುತ್ತೂರು. ಇದಕ್ಕೆ ಬಹಳ ಹಿಂದಿನ ಒಂದು ಸಾಕ್ಷಿ ಅಥವಾ ಎಲ್ಲರೂ ತಿಳಿದಿರುವಂತಹ ಹಾಗೂ ನೋಡಿರುವಂತಹ ಹಿರಿಯ ಸಾಹಿತಿಗಳು ಇಲ್ಲಿ ಮಾಡಿರುವಂತಹ ಕೃಷಿ ಇದಕ್ಕೆಪೂರಕವಾದ ಅಂಶವಾಗಿದೆ. ಅನೇಕ ಸಾಹಿತಿಗಳು ಇಲ್ಲಿಗೆ ಬಂದು ಸಾಹಿತ್ಯ ಕೃಷಿಯನ್ನು ಮಾಡಿ ಪ್ರಶಸ್ತಿಯನ್ನು ಪಡೆದು ಪುತ್ತೂರಿಗೆಗೌರವವನ್ನು ತಂದಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕಿನ ಅಧ್ಯಕ್ಷ ಉಮೇಶ್ ನಾಯಕ್ ಹೇಳಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಕರ್ನಾಟಕ ಸಂಘ, ಪುತ್ತೂರು ಕನ್ನಡ ವಿಭಾಗ, ವಿವೇಕಾನಂದಕಾಲೇಜು (ಸಾಯತ್ತ) ಪುತ್ತೂರು ಇದರ ಸಹಯೋಗದಲ್ಲಿ ನಡೆದ ನೆನಪಾಗಿ ಉಳಿದವರು ಕೃತಿ ಲೋಕಾರ್ಪಣೆ ಸಮಾರಂಭದಲ್ಲಿಭಾಗವಹಿಸಿ ಮಾತನಾಡಿದರು.
ಬದಲಾಗುತ್ತಿರುವ ಈ ವ್ಯವಸ್ಥೆಯಲ್ಲಿ ಹಿಂದೆ ಅನುಭವಿಸಿ ಬರೆದಂತಹ ಕವಿಗಳು ಅಥವಾ ಅನುಭವಿಸಿ ಬರೆಯದೆ ಇದ್ದಂತಹವ್ಯಕ್ತಿಗಳು ಅವರ ಕುರಿತಾಗಿ ಬಹುಷಃ ಅನೇಕ ರೀತಿಯ ದಾಸಲೀಕರಣದ ಸಾಧ್ಯತೆ ಇದೆ ಹಾಗೂ ಅಗತ್ಯವೂ ಇದೆ. ಬದುಕುವ ಈಅವಧಿಯಲ್ಲಿ ಅನೇಕ ಬದಲಾವಣೆಗಳು ನಡೆಯುತ್ತಿವೆ ಅದು ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕವಾಗಿಯೇ ಬದಲಾವಣೆಗಳುಆಗುತ್ತಿವೆ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು
ಸಿದ್ದಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಹಾಗೂ ಬೆಂಗಳೂರು ಕುವೆಂಪು ಭಾಷಾಭಾರತಿಯ ಮಾಜಿ ಅಧ್ಯಕ್ಷಡಾ. ಗಿರೀಶ್ ಭಟ್ ಅಜಕ್ಕಳ ಕೃತಿ ಲೋಕಾರ್ಪಣೆ ಮಾಡಿ ಶುಭಾಶಯದ ನುಡಿಗಳನ್ನಾಡಿದರು. ಹಾಗೂ ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್. ಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಪುರಂದರ ಭಟ್, ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದಮುಖ್ಯಸ್ಥರಾದ ಡಾ. ಮನಮೋಹನ ಎಂ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಶರ್ಮ ಪ್ರಾರ್ಥಿಸಿ, ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನಎಂ. ಸ್ವಾಗತಿಸಿ, ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಮೈತ್ರಿ ಭಟ್ ವಂದಿಸಿ ನಿರೂಪಿಸಿದರು.