ಪುತ್ತೂರು : ಬದುಕುಎಂದರೆ, ಗೆಲ್ಲಬೇಕು ಎಂಬ ಹೋರಾಟ, ಸೋತರೆ ಸೋಲನ್ನುಒಪ್ಪಿಕೊಂಡುಗೆಲ್ಲಲು ಮತ್ತೆ ಹೋರಾಡುವುದು, ಅದೇಜೀವನದ ನಿಯಮ. ಅಂತೆಯೇಕ್ರೀಡೆಯಲ್ಲಿ ಸೋಲು ಗೆಲುವು ಎಂಬುದುಇದ್ದದ್ದೆ. ಹಾಗಾಗಿ ಧನಾತ್ಮಕವಾಗಿ ಭಾಗವಹಿಸುವುದು ಮುಖ್ಯ. ಕ್ರೀಡೆ ಕೇವಲ ಆಟವಲ್ಲಅದು ಬದುಕಿಗೊಂದು ಪಾಠಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆಎಂ ಕೃಷ್ಣ ಭಟ್ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ( ಸ್ವಾಯತ್ತ )ಇಲ್ಲಿ ಆಯೋಜಿಸಿದ 2023- 24 ನೇ ಸಾಲಿನ ವಾರ್ಷಿಕಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ, ಮಾತನಾಡಿ ನಾವು ಬೌದ್ಧಿಕವಾಗಿ ಹೇಗೆ ದುಡಿಯುತ್ತೇವೆಯೋ ಹಾಗೆಯೇ ಶಾರೀರಿಕವಾಗಿ ಶಿಸ್ತು,ಕ್ರಮದಿಂದ ನಮ್ಮನ್ನು ನಾವು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಇದು ನಮ್ಮದೈಹಿಕಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕಾಲೇಜಿನಎನ್ ಸಿಸಿ, ಎನ್ಎಸ್ಎಸ್,ರೋವರ್ಆ್ಯಂಡ್ರೇAಜರ್ಸ್ ಮತ್ತುಯೂಥ್ರೆಡ್ಕ್ರಾಸ್ ಹಾಗೂ ಪ್ರತಿ ತರಗತಿಗಳಿಂದ ಆಕರ್ಷಕ ಪಥಸಂಚಲನ ನಡೆದು ಬಳಿಕ ಅತಿಥಿಗಳು ಕ್ರೀಡಾಧ್ವಜಾರೋಹಣವನ್ನು ನೆರವೇರಿಸಿದರು.
ರಾಜ್ಯ ದಿಂದರಾಷ್ಟ್ರೀಯ ಮಟ್ಟದವರೆಗೆ ಸಾಧನೆ ಮಾಡಿದಕಾಲೇಜಿನ ಹೆಮ್ಮೆಯ ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯನ್ನು ಬೆಳಗಿಸಿದರು.
ದ್ವಿತೀಯ ಬಿಕಾಂ ವಿಭಾಗದ ವಿದ್ಯಾರ್ಥಿ, ಕ್ರೀಡಾಪಟುಗುರುಪ್ರಸಾದ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಕ್ರೀಡೆಯಲ್ಲಿ ವಿಶೇಷ ಸಾಧನೆಗೈದಕಾಲೇಜಿನ ಕ್ರೀಡಾಪಟುಗಳನ್ನು ಗುರುತಿಸಲಾಯಿತು.
ವೇದಿಕೆಯಲ್ಲಿಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್, ಪರೀಕ್ಷಾಂಗ ಕುಲ ಸಚಿವ ಮತ್ತುಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥಡಾ ಶ್ರೀಧರ್ ಹೆಚ್. ಜಿ, ಇತಿಹಾಸ ವಿಭಾಗದ ಮುಖ್ಯಸ್ಥ ಮತ್ತುಕಾಲೇಜಿನ ವಿಶೇಷಅಧಿಕಾರಿ ಡಾ.ಶ್ರೀಧರ್ ನಾಯ್ಕ್ ಬಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನುಕಾಲೇಜಿನಕ್ರೀಡಾ ಕಾರ್ಯದರ್ಶಿ, ತೃತೀಯ ಬಿಸಿಎ ವಿಭಾಗದ ವಿದ್ಯಾರ್ಥಿರುತ್ವಿಕ್ಎಚ್ ಸ್ವಾಗತಿಸಿ,ಜೊತೆ ಕಾರ್ಯದರ್ಶಿ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಪ್ರೇಕ್ಷಿತಾ ಶೆಟ್ಟಿ ಕೆ ವಂದಿಸಿ, ಕಾಲೇಜಿನದೈಹಿಕ ಶಿಕ್ಷಣ ನಿರ್ದೇಶಕರವಿ ಶಂಕರ್ ವಿ ಎಸ್ ನಿರ್ವಹಿಸಿದರು.