Saturday, January 25, 2025
ಬಂಟ್ವಾಳಸುದ್ದಿ

ಇಂದಿನಿಂದ ಮಾ.12ರವರೆಗೆ ಶ್ರೀ ಭಯಂಕೇಶ್ವರ ಸದಾಶಿವ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವ – ಕಹಳೆ ನ್ಯೂಸ್

ಬಂಟ್ವಾಳ: ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ಶ್ರೀಗಣಪತಿ, ಶ್ರೀ ದುರ್ಗಾ ಸಾನಿಧ್ಯಗಳ ಪುನಃಪ್ರತಿಷ್ಠೆಯೊಂದಿಗೆ ಭಯಂಕೇಶ್ವರ ಸದಾಶಿವ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವ ಮಾ.3ರಿಂದ ಮೊದಲ್ಗೊಂಡು ಮಾ.12ರವರೆಗೆ ನಡೆಯಲಿದೆ ಎಂದು ವ್ಯವಸ್ಥಾಪನಾ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘುನಾಥ ಸೋಮಯಾಜಿ ಎರಕಳ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಪ್ರಕ್ರಿಯೆಗಳು ಆರಂಭಗೊAಡಿದ್ದು, ಮಾ.5ರಂದು ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ದೊಂಪದಬಲಿ ಶ್ರೀ ನಾಲ್ಕೈತ್ತಾಯ ದೈವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳುತ್ತದೆ ಎಂದರು. ಮಾ.7ರಂದು ಬಿಂಬಪ್ರತಿಷ್ಠೆ, ಮಾ.8ರಂದು ಬೆಳಗ್ಗೆ ಬ್ರಹ್ಮಕಲಶಾಬಿಷೇಕ ನಡೆಯುವುದು. ಬಳಿಕ ಜಾತ್ರೋತ್ಸವಗಳು ಆರಂಭಗೊAಡು, ಮಾ.12ರವರೆಗೆ ನಡೆಯಲಿದೆ. ಪ್ರತಿದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ನೃತ್ಯಭಜನೆಯೂ ಇರಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾ.5ರಂದು ನರಿಕೊಂಬು ಗ್ರಾಮದ ಗುತ್ತಿನ ನಾಲ್ಕು ಮನೆಯವರಿಂದ ದೀಪ ಪ್ರಜ್ವಲನೆಯೊಂದಿಗೆ ಉಗ್ರಾಣ ಮುಹೂರ್ತ ನೆರವೇರಲಿದೆ, ಬಳಿಕ ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದೀಪ ಪ್ರಜ್ವಲನೆಯೊಂದಿಗೆ ಹೊರೆಕಾಣಿಕೆ ಮೆರವಣಿಗೆ ದೊಂಪದಬಳಿಯ ನಾಲ್ಕೈತ್ತಾಯ ದೈವಸ್ಥಾನದಿಂದ ಆರಂಭಗೊAಡು, ಮೊಗರ್ನಾಡಿನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ, ಕುರ್ಚಿಪಲ್ಲ, ಸತ್ಯದೇವತೆ ಕಲ್ಲುರ್ಟಿ ದೇವಸ್ಥಾನ, ಪಾಣೆಮಂಗಳೂರು ವೀರವಿಠಲ ದೇವಸ್ಥಾನದತ್ತ ಸಾಗಿ ಶ್ರೀ ಭಯಂಕೇಶ್ವರ ದೇವಸ್ಥಾನ ತಲುಪಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾತ್ರೋತ್ಸವದ ಪ್ರತಿದಿನವೂ ಮಧ್ಯಾಹ್ನ ರಾತ್ರಿ ಊಟೋಪಚಾರ ಸಹಿತ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭ ಪ್ರತಿದಿನ ಭಗವದ್ಗೀತಾ ಪ್ರವಚನವೂ ಇರಲಿದೆ ಎಂದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ರಘುನಾಥ ಸೋಮಯಾಜಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಡಾ. ಎಂ.ಮೋಹನ ಆಳ್ವ, ಅಧ್ಯಕ್ಷರಾಗಿ ಜಗನ್ನಾಥ ಬಂಗೇರ, ಕಾರ್ಯಾಧ್ಯಕ್ಷರಾಗಿ ಜಗನ್ನಾಥ ಚೌಟ ಬದಿಗುಡ್ಡೆ ನೇತೃತ್ವದಲ್ಲಿ ವಿವಿಧ ಸಮಿತಿ ಕಾರ್ಯಾಚರಿಸುತ್ತಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಮಾಹಿತಿ ನೀಡಿದರು. ಪ್ರಮುಖರಾದ ಪ್ರಕಾಶ್ ಕಾರಂತ ನರಿಕೊಂಬು, ರಘು ಸಫಲ್ಯ, ಲೋಕೇಶ್ ಕೆ ನರಹರಿನಗರ, ಪದ್ಮನಾಭ ಮಯ್ಯ ಏಲಬೆ, ಬಿ.ರಾಮಚಂದ್ರ ರಾವ್, ಭುವನೇಶ್, ಚಂದ್ರಾವತಿ ರತ್ನಾಕರ ನಾಯ್ಕ್, ಗೋವಿಂದ ಪೈ, ಪುರುಷೋತ್ತಮ ಸಾಲಿಯಾನ ನರಿಕೊಂಬು, ಪ್ರೇಮನಾಥ ಶೆಟ್ಟಿ ಅಂತರ ಮತ್ತಿತರರು ಉಪಸ್ಥಿತರಿದ್ದರು.