Saturday, January 25, 2025
ದಕ್ಷಿಣ ಕನ್ನಡಬಂಟ್ವಾಳಬೆಳ್ತಂಗಡಿಸುದ್ದಿ

ಧೂಮಳಿಕೆ : ಅಕ್ರಮ ಜಾನುವಾರು ವಧೆ : ಅಡ್ಡೆಗೆ ಪೋಲೀಸರು ದಾಳಿ : ಆರೋಪಿಗಳು ಪರಾರಿ – ಕಹಳೆ ನ್ಯೂಸ್

ಪುಂಜಾಲಕಟ್ಟೆ : ಬಂಟ್ವಾಳ ತಾಲೂಕು ಕಾವಳಮುಡೂರು ಗ್ರಾಮದ ಧೂಮಳಿಕೆ ಎಂಬಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾರಾಟ ಮಾಡುವ ಅಡ್ಡೆಗೆ ಪುಂಜಾಲಕಟ್ಟೆ ಪೋಲೀಸರು ದಾಳಿ ನಡೆಸಿದ್ದು, ಆರೋಪಿಗಗಳು ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಮಾಂಸ ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಇಲ್ಯಾಸ್ ಧೂಮಳಿಕೆ ಯಾನೆ ಕುಂಟ ಇಲ್ಯಾಸ್ ಮತ್ತು ಇಲ್ಯಾಸ್ ಬಂಗೇರಕೆರೆ ಎಂಬವರು ಇಲ್ಯಾಸ್ ಧೂಮಳಿಕೆ ಎಂಬವರ ನಿರ್ಮಾಣ ಹಂತದ ಮನೆಯಲ್ಲಿ, ಜಾನುವಾರನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದಾಗ, ಪುಂಜಾಲಕಟ್ಟೆ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕರಾದ ಉದಯರವಿ ವೈ.ಎಂ ಅವರು ಹಾಗೂ ಸಿಬಂದ್ದಿಗಳು ದಾಳಿ ನಡೆಸಿದ್ದು, ಈ ವೇಳೆ ಆರೋಪಿಗಳು ಓಡಿ ತಪ್ಪಿಸಿಕೊಂಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳದಲ್ಲಿ ದೊರೆತ ಸುಮಾರು 60 ಕೆ.ಜಿ ಜಾನುವಾರು ಮಾಂಸ ಮತ್ತು ಇತರೆ ಅಂಗಾಗಗಳು, ಎಲೆಕ್ಟ್ರಿಕ್ ತೂಕದ ಯಂತ್ರ, ಮಾಂಸ ಮಾಡಲು ಉಪಯೋಗಿಸುವ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು