Saturday, November 23, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬನ್ನೂರು ಶ್ರೀ ಬಲಮುರಿ ವಿದ್ಯಾಗಣಪತಿ ಸನ್ನಿಧಿಯಲ್ಲಿ ನಡೆದ ಮೂಡಪ್ಪ ಸೇವೆ – ಕಹಳೆ ನ್ಯೂಸ್

ಪುತ್ತೂರು : ಶ್ರೀ ಅಖಿಲ ಹವ್ಯಕ ಮಹಾಸಭಾ ಪುತ್ತೂರು ಶಾಖೆಯ ಸಹಯೋಗದೊಂದಿಗೆ ವೇದ ಮೂರ್ತಿ ಮಿತ್ತೂರು ತಿರುಮಲೇಶ್ವರ ಭಟ್ ಅವರ ನೇತೃತ್ವದಲ್ಲಿ ಮೂಡಪ್ಪ ಸೇವೆಯು ಮಾ.3ರಂದು ಬನ್ನೂರು ಕರ್ಮಲ ಭಾರತೀ ನಗರದಲ್ಲಿರುವ ಶ್ರೀ ಬಲಮುರಿ ವಿದ್ಯಾಗಣಪತಿ ಸನ್ನಿಧಿಯಲ್ಲಿ ನಡೆಯಿತು.

ರಾತ್ರಿ ಸಂಕಲ್ಪ, ಮೂಡಪ್ಪ ಸಮರ್ಪಣೆ ಬಳಿಕ ರಂಗಪೂಜೆ, ಕಲ್ಪೋಕ್ತ ಪೂಜೆ, ಸರ್ವಾಲಂಕಾರ ಪೂಜೆ, ಅಷ್ಟಾವಧಾನ ಪೂಜೆ, ನಡೆಯಿತು. ಕ್ಷೇತ್ರದಲ್ಲಿ ಮೂಡಪ್ಪ ಸೇವೆ ಮೂರನೇ ಬಾರಿ ನಡೆದಿದೆ. ಮೂಡಪ್ಪ ಸೇವಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ ದಂಪತಿ ಪೂಜೆಯಲ್ಲಿ ಪಾಲ್ಗೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಜೆ ನಡೆದ ವೈದಿಕ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಸಾಕ್ಷಯಾದರು. ಗುಡಿಯೊಳಗಿರುವ ಗಣಪತಿ ವಿಗ್ರಹದ ಸುತ್ತಲೂ ಕಬ್ಬು ದಂಟುಗಳ ಕಣಜ ನಿರ್ಮಿಸಿ ಅಪ್ಪ ಕಜ್ಜಾಯ ತುಂಬಿಸಲಾಯಿತು. ಮೂಡಪ್ಪ ಸೇವೆಯೊಂದಿಗೆ ಶ್ರೀ ಗಣೇಶನಿಗೆ ಮಹಾರಂಗಪೂಜೆ ಹಾಗೂ ಕವಾಟ ಬಂಧನ ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಇದೇ ಸಂದರ್ಭದಲ್ಲಿ ಬೋನಂತಾಯ ವೇದಿಕೆಯಲ್ಲಿ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ್ ಕಜೆ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ವೇ.ಮೂ.ಅನಂತನಾರಾಯಣ ಭಟ್ ಪರಕ್ಕಜೆ, ಶಿವಬ್ರಾಹ್ಮಣ ಸ್ಥಾನಿಕ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಕೆ. ಜಗನ್ನಿವಾಸ್ ರಾವ್, ಪುತ್ತೂರು ಶಿವಳ್ಳಿ ಸಂಪದ ಅಧ್ಯಕ್ಷ ದಿವಾಕರ ಕೆ ನಿಡ್ವಾಣ್ಣಾಯ, ದಕ್ಷಿಣ ಕನ್ನಡ ಜಿಲ್ಲಾ ಅಖಿಲ ಬ್ರಾಹಣ ಸಮಾಜದ ಉಪಾಧ್ಯಕ್ಷ ಮಹೇಶ್ ಕಜೆ, ಹವ್ಯಕ ಸಭಾದ ಅಧ್ಯಕ್ಷ ಶಿವಶಂಕರ ಭಟ್ಟ ಬೋನಂತಾಯ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.