ಪುತ್ತೂರು ; ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ – ಕಹಳೆ ನ್ಯೂಸ್
ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ವಿಜ್ಞಾನ ವಿಭಾಗ, ಸಯನ್ಸ್ ಫಾರಮ್, ಆಂತರಿಕ ಗುಣಮಟ್ಟಭರವಸೆ ಕೋಶ, ಹಾಗೂ ಐಐಸಿಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ವಿಜ್ಞಾನ ದಿನವನ್ನುಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟೊನಿಪ್ರಕಾಶ್ ಮೊಂತೆರೋರವರು “ವಿದ್ಯಾರ್ಥಿಗಳು ವಿಜ್ಞಾನದ ಮಹತ್ವವನ್ನು ಅರಿತುಕೊಂಡು ವೈಜ್ಞಾನಿಕ ಮನೋಭಾವವನ್ನುಅಳವಡಿಸಿಕೊಳ್ಳಬೇಕು. ವೈಜ್ಞಾನಿಕ ಅನ್ವೇಷಣೆಗಳಲ್ಲಿ ಶ್ರದ್ಧೆ, ಉತ್ಸಾಹ ಮತ್ತು ಸಮರ್ಪಣೆಯ ಪ್ರಾಮುಖ್ಯತೆಯನ್ನುತಿಳಿದುಕೊಂಡು ಯುವ ಪೀಳಿಗೆಯು ತಮ್ಮ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳನ್ನು ವೈಜ್ಞಾನಿಕತತ್ವಗಳೊಂದಿಗೆ ಜೋಡಿಸಬೇಕು” ಎಂದು ಹೇಳಿ ರಾಷ್ಟ್ರೀಯ ವಿಜ್ಙಾನ ದಿನಾಚರಣೆಯ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಹಾಯಕಪ್ರಾಧ್ಯಾಪಕರಾದ ಡಾ| ಎ ಪಿ ರಾಧಾಕೃಷ್ಣರವರು ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನದ ಕೌತುಕಗಳನ್ನು ವಿವರಿಸಿದರು. ಈಸಂದರ್ಭದಲ್ಲಿ ಅವರು ಮೂಲ ವಿಜ್ಞಾನದ ಬಗ್ಗೆ ಒಲವು ಮೂಡಿಸಲು ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ,ವೈಜ್ಞಾನಿಕ ಬರವಣಿಗೆಗಳ ಮೂಲಕ ಮೂಲ ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವ ಸಾಮಾಜಿಕ ಜವಾಬ್ದಾರಿಯಬಗ್ಗೆ ತಿಳಿಸಿದರು. ಕಾಲೇಜಿನ ಸಯನ್ಸ್ ಫಾರಮ್ ನ ಸಂಯೋಜಕರೂ ಉಪ-ಪ್ರಾಂಶುಪಾಲರೂ ಆದ ಡಾ| ಪಿ ಎಸ್ ಕೃಷ್ಣಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಕೃತಿ ಕೆ ಎನ್, ಮಲಿಹಾ, ರಿಯಾ ಡಿ ಸೋಜ ಮತ್ತು ಅಂಜುA ನಿಹಾಲರವರು ರಾಷ್ಟ್ರೀಯ ವಿಜ್ಞಾನ ದಿನದ ಪ್ರಾಮುಖ್ಯತೆಯ ಬಗ್ಗೆ ಪವರ್ ಪಾಯಿಂಟ್ ಪ್ರೆಸಂಟೇಶನ್ ಪ್ರಸ್ತುತ ಪಡಿಸಿದರು.ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಥೆಯನ್ನು ತೃತೀಯ ಬಿ ಎಸ್ಸಿ ವಿದ್ಯಾರ್ಥಿ ವಿನೀತ್ ಲೋಬೋನಡೆಸಿದರು. ಪ್ರತೀಕ್ಷಾ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಡಾ| ಮಾಲಿನಿ ಕೆಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವಾರಿಜಾ ಎಂವAದಿಸಿದರು. ವಿದ್ಯಾರ್ಥಿನಿ ನಾದ ಐ ಎ ಕಾರ್ಯಕ್ರಮ ನಿರೂಪಿಸಿದರು.