Sunday, January 19, 2025
ಆರೋಗ್ಯದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು: ಬಲ್ನಾಡು ಶ್ರೀ ಬಟ್ಟಿ ವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಮಾ.09ರಿಂದ ಮಾ.23ರವರೆಗೆ ನಡೆಯಲಿರುವ ಉಚಿತ ಫೂಟ್ ಫಲ್ಸ್ ಥೆರಫಿ – ಕಹಳೆ ನ್ಯೂಸ್

ಪುತ್ತೂರು: ಶ್ರೀ ಬಟ್ಟಿ ವಿನಾಯಕ ದೇವಸ್ಥಾನ ಉಜ್ರುಪಾದೆ ಬಲ್ನಾಡು, ಗ್ರಾಮ ಪಂಚಾಯತ್ ಬಲ್ನಾಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಕಲ್ಲಾಜೆ, ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಉಜ್ರುಪಾದೆ ಮತ್ತು ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಉಜ್ರುಪಾದೆ ಶ್ರೀ ಬಟ್ಟಿ ವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಮಾ.09ರಿಂದ ಮಾ.23ರವರೆಗೆ ಉಚಿತ ಫೂಟ್ ಫಲ್ಸ್ ಥೆರಫಿ ಶಿಬಿರವು ನಡೆಯಲಿದೆ.

ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪರಮೇಶ್ವರಿ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಉದ್ಘಾಟಿಸಲಿದ್ದಾರೆ. ಪುತ್ತೂರಿನ ನೆಮ್ಮದಿ ವೆಲ್‍ನೆಸ್ ಸೆಂಟರ್ ನ ಮಾಲಕ ಕೆ. ಪ್ರಭಾಕರ್ ಸಾಲ್ಯಾನ್ ಫೂಟ್ ಥೆರಫಿ ಬಗ್ಗೆ ಮಾಹಿತಿ ನೀಡಲಿದ್ದಾರೆ.ಪ್ರತಿದಿನ ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ಫೂಟ್ ಥೆರಫಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಇನ್ನು ಕಾರ್ಯಕ್ರಮದಲ್ಲಿ ಬಲ್ನಾಡ್ ಗ್ರಾಮಪಂಚಾಯತ್ ಪಿಡಿಒ ದೇವಪ್ಪ, ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ನ ಅಧ್ಯಕ್ಷ ಗಿರೀಶ್ ಕಂಟ್ರಾನಿಮೂಲೆ, ಬಲ್ನಾಡ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ವಳಗುಡ್ಡೆ, ಪ್ರಗತಿಪರ ಕೃಷಿಕ ಸುರೇಶ್ ಬಾಯಾರ್, ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಮಾಜಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಕಲ್ಲಾಜೆ ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆ ಪೂರ್ಣಿಮ ಚೆನ್ನಪ್ಪ ಗೌಡ, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಬಾಲಸುಬ್ರಹ್ಮಣ್ಯ ಕೋಟ್ಯಾನ್, ಕೃಷ್ಣಪ್ಪ ನಾಯ್ಕ, ಗಣೇಶ್ ಗೌಡ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು