ಬಂಟ್ವಾಳ ಮಾ.17ರಿಂದ ಮಾ.25ರವರೆಗೆ ಪಾಂಡವರಕಲ್ಲು ಶ್ರೀರಾಜನ್ ದೈವ ಕೊಡಮಣಿತ್ತಾಯ ಶ್ರೀ ಬ್ರಹ್ಮಬೈದೆರೆ ಗರೋಡಿಯ ವಾರ್ಷಿಕ ಜಾತ್ರೋತ್ಸವ – ಕಹಳೆ ನ್ಯೂಸ್
ಬಂಟ್ವಾಳ : ಬಂಟ್ವಾಳ ತಾಲೂಕಿನ ಬಡಗ ಕಜೆಕಾರಿನ ಪಾಂಡವರಕಲ್ಲು ಶ್ರೀರಾಜನ್ ದೈವ ಕೊಡಮಣಿತ್ತಾಯ ಶ್ರೀ ಬ್ರಹ್ಮಬೈದೆರೆ ಗರೋಡಿಯ ವಾರ್ಷಿಕ ಜಾತ್ರೋತ್ಸವವು ಮಾ.17ರಿಂದ ಮಾ.25ರವರೆಗೆ ನಡೆಯಲಿದೆ.
ಮಾ.17ರಂದು ಶ್ರೀ ಕ್ಷೇತ್ರದಲ್ಲಿ ದೊಂಪದ ಬಲಿ ನೇಮೋತ್ಸವ ನಡೆಯಲಿದ್ದು, ಮಾ.21ರಂದು ಶ್ರೀ ಕೊಡಮಣಿತ್ತಾಯ, ಶ್ರೀ ಬ್ರಹ್ಮಬೈದ್ಯರೆ ಗರೋಡಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾದ ದೈವಸ್ಥಾನದಲ್ಲಿ ಶ್ರೀ ಧರ್ಮದೈವ ವಿಷ್ಣುಮೂರ್ತಿ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ.
ರಾತ್ರಿ ಕಜೆಕಾರ್ ಗುತ್ತಿನಿಂದ ದೈವ ಕೊಡಮಣಿತ್ತಾಯ ಮತ್ತು ಪಟ್ರಾಡಿ ತಾವಿನಿಂದ ಶ್ರೀ ಬ್ರಹ್ಮಬೈದೆರೆ ಭಂಡಾರ ಬಂದು ಬಲಿ ಉತ್ಸವ ನೇರವೇರಲಿದೆ.
ಮಾ.22ರಂದು ಧರ್ಮದೈವ ಶ್ರೀ ವಿಷ್ಣುಮೂರ್ತಿ ಪ್ರತಿಷ್ಠೆ, ಹಾಗೂ ಕೊಡಿಮರ ತೈಲಾಧಿವಾಸ ನಡೆಯಲಿದೆ. ಮಧ್ಯಾಹ್ನ ಶ್ರೀ ಕ್ಷೇತ್ರದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ, ಹಾಗೂ ರಾತ್ರಿ ಧರ್ಮದೈವ ವಿಷ್ಣುಮೂರ್ತಿ ದೈವದ ನೇಮ, ಹಾಗೂ ಮಾ.23ರಂದು ಶ್ರೀರಾಜನ್ ದೈವ, ಕೊಡಮಣಿತ್ತಾಯ ದೈವ ಮತ್ತು ಕಲ್ಕುಡ ದೈವದ ನೇಮೋತ್ಸವ ನಡೆಯಲಿದೆ.
ಮಾ.24ರಂದು ಪಿಲಿಚಾಮುಂಡಿ ನೇಮ, ಹಾಗೂ ಶ್ರೀ ಬ್ರಹ್ಮಬೈದ್ಯೆರೆ ಜಾತ್ರೋತ್ಸವ ನಡೆಯಲಿದ್ದು, ರಾತ್ರಿ ಸ್ಥಳೀಯರಿಂದ ಸಾಂಸ್ಕøತಿಕ ಕಾರ್ಯಕ್ರಮ, ಸುಡುಮದ್ದು ಪ್ರದರ್ಶನ, ಹಾಗೂ ಗರೋಡಿ ಫ್ರೆಂಡ್ಸ್ ಪಾಂಡವರಕಲ್ಲು ಇವರ ಪ್ರಾಯೋಜಕತ್ವದಲ್ಲಿ ಮಂಜೇಶ್ವರದ ಶಾರದಾ ಆಟ್ರ್ಸ್ ತಂಡದ ಐಸಿರಿ ಕಲಾವಿದರಿಂದ ಕಲಿಗದ ಮಾಯ್ಕಾರೆ ಪಂಜುರ್ಲಿ ಎಂಬ ಭಕ್ತಿ ಪ್ರಧಾನ ನಾಟಕ ನಡೆಯಲಿದೆ. ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ಹಾಗೂ ರಾತ್ರಿ 10ಕ್ಕೆ ಬೈದೆರು ಗರೋಡಿ ಇಳಿದು, ನೇಮೋತ್ಸವ ನಡೆಯಲಿದೆ.