Sunday, January 19, 2025
ಅಂತಾರಾಷ್ಟ್ರೀಯದೆಹಲಿಸುದ್ದಿ

ಮೇ 10ರೊಳಗೆ ದೇಶ ಬಿಟ್ಟು ಹೋಗಿ : ಭಾರತೀಯ ಮಿಲಿಟರಿಗೆ ಮಾಲ್ಡೀವ್ಸ್ ಅಧ್ಯಕ್ಷರಿಂದ ಡೆಡ್​ಲೈನ್ – ಕಹಳೆ ನ್ಯೂಸ್

ನವದೆಹಲಿ : ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರ ಭಾರತ ವಿರೋಧಿ ಮಾತು ಎಗ್ಗಿಲ್ಲದೇ ಮುಂದುವರಿಯುತ್ತಿದೆ. ಮೇ 10ರೊಳಗೆ ಎಲ್ಲಾ ಭಾರತೀಯ ತುಕಡಿಗಳು ಮಾಲ್ಡೀವ್ಸ್ ನೆಲದಿಂದ ಕಾಲ್ತೆಗೆಯಬೇಕು ಎಂದು ಅವರು ಮತ್ತೆ ತಾಕೀತು ಮಾಡಿದ್ದಾರೆ. ಬಾ ಅತೋಲ್ ಎಂಬಲ್ಲಿ ಸಾರ್ವಜನಿಕ ಸಮಾವೇಶದ ವೇಳೆ ಮುಯಿಜು ಅವರ ಭಾರತ ವಿರೋಧಿ ಮಾತುಗಳು ಕೇಳಿಬಂದವು. ಮೇ 10ರ ನಂತರ ಯಾವ ಭಾರತೀಯ ಮಿಲಿಟರಿ ಸಿಬ್ಬಂದಿಯೂ ಮಾಲ್ಡೀವ್ಸ್​ನಲ್ಲಿ ಇರುವುದಿಲ್ಲ. ನಾಗರಿಕ ಪೋಷಾಕಿನಲ್ಲಿರುವವರೂ ಇಲ್ಲಿಂದ ಜಾಗ ಖಾಲಿ ಮಾಡಬೇಕು ಎಂದು ಮೊಹಮ್ಮದ್ ಮುಯಿಜು ಎಚ್ಚರಿಕೆ ನೀಡಿದ್ದಾರೆ.

ಮಾಲ್ಡೀವ್ಸ್​ನಲ್ಲಿ ಭಾರತದ ಮಿಲಿಟರಿ ವತಿಯಿಂದ ಎರಡು ಹೆಲಿಕಾಪ್ಟರ್ ಮತ್ತು ಒಂದು ಏರ್​ಕ್ರಾಫ್ಟ್​ನ ನಿರ್ವಹಣೆ ಆಗುತ್ತಿದೆ. ಒಟ್ಟು 88 ಮಂದಿ ಸಿಬ್ಬಂದಿ ಇದರಲ್ಲಿ ತೊಡಗಿದ್ದಾರೆ. ಮಾನವ ರಕ್ಷಣಾ ಕಾರ್ಯಗಳಿಗೆ ಇವುಗಳ ಬಳಕೆ ಆಗುತ್ತದೆ. ಈ ಎಲ್ಲಾ 88 ಭಾರತೀಯ ಮಿಲಿಟರಿ ಸಿಬ್ಬಂದಿಯಲ್ಲಿ ಒಬ್ಬರೂ ಕೂಡ ಇರಬಾರದು ಎಂದು ಮೊಹಮ್ಮದ್ ಮುಯಿಜು ಮಾಲ್ಡೀವ್ಸ್ ಅಧ್ಯಕ್ಷರಾಗಿ ಬಂದ ದಿನವೇ ಘಂಟಾಘೋಷವಾಗಿ ಆಜ್ಞೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವಾರವಷ್ಟೇ ಒಂದು ಹೆಲಿಕಾಪ್ಟರ್​ಗೆ ನಿಯೋಜಿಸಿದ್ದ ಮಿಲಿಟರಿ ಸಿಬ್ಬಂದಿಯನ್ನು ಕರೆಸಿಕೊಂಡು, ಅವರ ಜಾಗಕ್ಕೆ ನುರಿತ ನಾಗರಿಕರನ್ನು ಭಾರತ ಕಳುಹಿಸಿದೆ. ಆದರೆ, ನಾಗರಿಕರ ವೇಷ ಹಾಕಿ ಮಿಲಿಟರಿ ಸಿಬ್ಬಂದಿಯನ್ನೇ ಭಾರತ ಕಳುಹಿಸಿದೆ ಎಂಬರ್ಥದಲ್ಲಿ ಅಧ್ಯಕ್ಷರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊಹಮ್ಮದ್ ಮುಯಿಜು ಅಧ್ಯಕ್ಷರಾದ ಬಳಿಕ ಚೀನಾ ಜೊತೆ ಹೆಚ್ಚು ಸ್ನೇಹ ಸಂಪಾದನೆ ಮಾಡುತ್ತಿದ್ದಾರೆ. ಮಾಲ್ಡೀವ್ಸ್​ಗೆ ಚೀನಾ ಉಚಿತ ಮಿಲಿಟರಿ ಸಹಾಯ ಮಾಡುವ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಿವೆ. ಅದರ ಬೆನ್ನಲ್ಲೇ ಮುಯಿಜು ತಮ್ಮ ಭಾರತ ವಿರೋಧಿ ಹೇಳಿಕೆಯನ್ನು ಗಟ್ಟಿಯಾಗಿ ನೀಡುತ್ತಿದ್ದಾರೆ.

ವೈದ್ಯಕೀಯ ಕಾರ್ಯಾಚರಣೆಗೆ ಫ್ಲೈಟ್​ಗಳನ್ನು ನಿರ್ವಹಿಸಲು ಶ್ರೀಲಂಕಾ ಜೊತೆ ಮಾಲ್ಡೀವ್ಸ್ ಒಪ್ಪಂದ ಮಾಡಿಕೊಂಡಿರುವುದೂ ಕೂಡ ಗಮನಾರ್ಹ. ಇವೆಲ್ಲಾ ಬೆಳವಣಿಗೆಯೂ ಭಾರತವನ್ನು ಆದಷ್ಟೂ ದೂರ ಇಡುವ ಮಾಲ್ಡೀವ್ಸ್​ನ ಪ್ರಯತ್ನದ ಭಾಗಗಳೇ ಆಗಿವೆ.