Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪಾದಾಚಾರಿಗೆ ಸರಕಾರಿ ವಾಹನ ಡಿಕ್ಕಿ ; ಚಾಲಕ ಪರಾರಿ – ಕಹಳೆ ನ್ಯೂಸ್

ಬಂಟ್ವಾಳ : ಸರಕಾರಿ ಇಲಾಖೆಗೆ ಸೇರಿದ ವಾಹನವೊಂದು ಪಾದಾಚಾರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಟ್ರಾಫಿಕ್ ಎಸ್.ಐ.ಸುತೇಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ.


ಪುತ್ತೂರು ಅರಣ್ಯ ಇಲಾಖೆಗೆ ಸೇರಿದ ವಾಹನ ಇದಾಗಿದ್ದು, ಬಿಸಿರೋಡು ಕಡೆಯಿಂದ ಮಂಗಳೂರು ಕಡೆಗೆ ಸಂಚಾರ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಮೃತಪಟ್ಟ ಪಾದಾಚಾರಿಯ ಬಗ್ಗೆ ವಿವರ ಲಭ್ಯವಾಗಿಲ್ಲ. ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಅರಣ್ಯ ಇಲಾಖೆಯ ಆರ್.ಎಫ್.ಕಿರಣ್ ಎಂಬವರು ಸಂಚಾರ ಮಾಡುತ್ತಿದ್ಧ ಬೊಲೆರೋ ವಾಹನ ಪರಂಗಿಪೇಟೆಯ ರಿಕ್ಷಾ ಪಾರ್ಕ್ ನ ಎದುರು ಪಾದಚಾರಿಗೆ ಡಿಕ್ಕಿಹೊಡೆದಿದೆ.ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಕ್ಷಾoತರ ರೂ ಹಣದ ಕಟ್ಟು ಇಲಾಖಾ ವಾಹನದಲ್ಲಿ

ಅರಣ್ಯ ಇಲಾಖೆಯ ವಾಹನ ಅಪಘಾತ ಸಂಭವಿಸಿದ ಕೂಡಲೇ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ರಕ್ತಸಿಕ್ತವಾಗಿ ಒದ್ದಾಡುತ್ತಿದ್ದಾತನನ್ನು ಅಲ್ಲೇ ಇದ್ದ
ರಿಕ್ಷಾ ಚಾಲಕರಿಬ್ಬರು ಅದೇ ಸರಕಾರಿ ಇಲಾಖೆಯ ವಾಹನದಲ್ಲಿ ಹಾಕಿಕೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಪಾದಾಚಾರಿಯನ್ನು ಬದುಕಿಸುವ ಪ್ರಯತ್ನ ಫಲನೀಡಲಿಲ್ಲ.

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅನಾಮಿಕನ ಜೀವ ಉಳಿಸುವ ನಿಟ್ಟಿನಲ್ಲಿ ಇಲ್ಲಿನ ನಿವಾಸಿಗಳಿಬ್ಬರು ಸರಕಾರಿ ವಾಹನದಲ್ಲಿ ಆಸ್ಪತ್ರೆಗೆ ಸೇರಿಸಿ ವಾಪಾಸು ಬರುತ್ತಿದ್ದ ವೇಳೆ ವಳಚ್ಚಿಲ ಎಂಬಲ್ಲಿಗೆ ಇಲಾಖೆಯ ಚಾಲಕ ಆಗಮಿಸಿ ವಾಹನದೊಳಗಿದ್ದ ಕಡತಗಳನ್ನು ಪಡೆದುಕೊಂಡು ಹೋಗಿದ್ದಾರೆ.
ಅದರೆ ಈ ಇಲಾಖಾ ವಾಹನದಲ್ಲಿ ಲಕ್ಷಾಂತರ ರೂ ಹಣದ ಕಂತೆ ಇತ್ತು ಎಂದು ಹೇಳಲಾಗಿದೆ.

ಚಾಲಕನ ಸೀಟಿನ ಬಳಿಯಲ್ಲಿ ಇತ್ತು ಎನ್ನಲಾಗಿರುವ ಹಣದ ಕಂತೆಯನ್ನು ವಳಚ್ಚಿಲ್ ನಿಂದ ಎಸ್ಕೇಪ್ ಮಾಡಲಾಗಿದೆಯೆ? ಹೀಗೊಂದು ಸಂಶಯ ಇದೀಗ ಸ್ಥಳೀಯವಾಗಿ ಉಂಟಾಗಿದ್ದು, ಇಷ್ಟೊಂದು ಹಣವನ್ನು ಇಲಾಖಾ ವಾಹನದಲ್ಲಿ ರಾತ್ರಿ ವೇಳೆ ಎಲ್ಲಿಗೆ ಕೊಂಡುಹೋಗಲಾಗುತ್ತಿತ್ತು ಎಂದು ಪ್ರಶ್ನೆ ಮಾಡುತ್ತಿದ್ದಾರೆ.