ಪುರುಷರಿಗೆ ಮದುವೆಗಾಗಿ ಕಾನೂನು ಪ್ರಕಾರ ನಿಗದಿ ಆಗಿರುವ ಕನಿಷ್ಠ ವಯಸ್ಸನ್ನು ಕಡಿತಗೊಳಿಸಬೇಕು ಎಂದು ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಪುರುಷರಿಗೆ ಮದುವೆಗೆ ಕನಿಷ್ಠ 21 ವರ್ಷ ಆಗಿರಬೇಕು ಎಂಬುದು ಸದ್ಯಕ್ಕೆ ಇರುವ ಕಾನೂನು. ಮಹಿಳೆಯರಿಗೆ ಇರುವಂತೆಯೇ ಪುರುಷರಿಗೆ ಮದುವೆ ಕನಿಷ್ಠ ವಯಸ್ಸನ್ನು 18 ಕ್ಕೆ ಇಳಿಸಬೇಕು ಎಂದು ಅರ್ಜಿ ಹಾಕಲಾಗಿತ್ತು.
ಇಂಥ ಅರ್ಜಿ ಹಾಕಿದ್ದಕ್ಕಾಗಿ ವಕೀಲ ಅಶೋಕ್ ಪಾಂಡೆಗೆ 25 ಸಾವಿರ ರುಪಾಯಿ ದಂಡ ವಿಧಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ಎಸ್.ಕೆ.ಕೌಲ್ ಅವರನ್ನು ಒಳಗೊಂಡ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.