Sunday, January 19, 2025
ಉಡುಪಿಕಾಪುಜಿಲ್ಲೆರಾಜಕೀಯಸುದ್ದಿ

ಪಾಂಗಳ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ಗೋಪುರ ಕಟ್ಟಡ ಮತ್ತು ಅಡುಗೆ ಕೋಣೆಯ ಭೂಮಿ ಪೂಜೆ – ಕಹಳೆ ನ್ಯೂಸ್

ಉಡುಪಿ: ಪಾಂಗಳ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ಗೋಪುರ ಕಟ್ಟಡ ಮತ್ತು ಅಡುಗೆ ಕೋಣೆಯ ಭೂಮಿ ಪೂಜೆ ಕಾರ್ಯಕ್ರಮ ಪಾಂಗಳ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದಲ್ಲಿ ನಡೆಯಿತು. ಭೂಮಿ ಪೂಜೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾಪು ಸುರೇಶ ಶೆಟ್ಟಿ ಗುರ್ಮೆ ನಿತ್ಯ ದೇವರ ನಂಬಿಕೆಯಿAದಲೇ ಬದುಕು ನಡೆಯುವುದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೇವಸ್ಥಾನಗಳು ಪ್ರಾರಂಭವಾದ ಕಾರಣ ಮಾನವ ಜೀವನದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸುಭದ್ರ ಬದುಕಿನ ಆದಾರವಾಗಿದೆ. ಪುರಾತನ ಕಾಲದಲ್ಲಿ ರಾಜ ಮಹಾರಾಜರು ಒಂದು ಊರು ನಿರ್ಮಾಣ ಮಾಡುವ ಮೊದಲು ದೇವಸ್ಥಾನ ನಿರ್ಮಾಣ ಮಾಡಿ ಊರಿನ ರೂಪುರೆಷೆ ಮಾಡುತ್ತಿದ್ದರು. ನಾವು ಎಷ್ಟೇ ಮುಂದುವರಿದರು ವಿದ್ಯಾವಂತರದರೂ ನಂಬಿಕೆ ಮತ್ತು ಭಕ್ತಿ ನಮ್ಮ ಜೀವನದ ಸೂತ್ರವಾಗಬೇಕು. ನನಗೆ ಜನತಾ ಸೇವೆ ಜನಾರ್ಧನ್ ಸೇವೆ ತೃಪ್ತಿ ನೀಡಿದೆ. ತಾವೆಲ್ಲರೂ ಈ ಸೇವಾ ಕಾರ್ಯಕ್ಕೆ ಕೈ ಜೋಡಿಸಿ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಮೂರ್ತಿ ಪಾಡಿಗರು ಶ್ರೀ ಶ್ರೀನಿವಾಸ್ ತಂತ್ರಿ ಪೂಜಾ ಕೈಂಕರ್ಯ ಮತ್ತು ಆಶೀರ್ವಾಚನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಡಾ ಮೋಹನ್ ದಾಸ್ ಭಟ್ ವಹಿಸಿದ್ದರು. ಕಟ್ಟಡ ಅಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷ ಗೋವಿಂದ ಶೆಟ್ಟಿ ಪಾಂಗಳ ಮಾತಾನಾಡಿ, ಈ ಸೌಭಾಗ್ಯದ ಅವಕಾಶದಲ್ಲಿ ನಾವೆಲ್ಲರೂ ಜೊತೆಯಾಗಿ ಶ್ರೀ ಆರ್ಯಡಿ ಲಕ್ಷ್ಮಿ ಜನಾರ್ದನ ಸೇವೆಯಲ್ಲಿ ಪಾಲ್ಗೊಳ್ಳೊಣ ಎಂದರು. ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ ಕೃಷ್ಣಮೂರ್ತಿ ಆಚಾರ್ಯ, ಪಾಂಗಳ ಬೀಡು ಶ್ರೀ ಬಾಲಕೃಷ್ಣ ಶೆಟ್ಟಿ ಮತ್ತು ಊರ ಪರವೂರ ಭಗವದ್ಬಕ್ತರು ಉಪಸ್ಥಿತರಿದ್ದರು.