Sunday, January 19, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಪುತ್ತೂರು ಮಾರ್ಚ್‌ 8: ಸಂತ ಫಿಲೋಮಿನಾ ಕಾಲೇಜಿನ ಮಹಿಳಾ ಸಬಲೀಕರಣ ಘಟಕ, ಮಹಿಳಾ ದೌರ್ಜನ್ಯ ವಿರೋಧಿ ಘಟಕಯುತ್‌ ರೆಡ್‌ಕ್ರಾಸ್‌ ಸೊಸೈಟಿ, ಐಐಸಿ ಹಾಗೂ ಈಕ್ವಲ್‌ ಒಪರ್ಚುನಿಟಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ
ಪ್ರಾಚಾರ್ಯರಾದ ವಂ| ಡಾ| ಆಂಟೊನಿ ಪ್ರಕಾಶ್‌ ಮೊಂತೆರೋರವರು ವಹಿಸಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುವಸಂದರ್ಭದಲ್ಲಿ ಅವರು “ಮಹಿಳೆಯರಲ್ಲಿ ಅಸಾಧಾರಣ ಸಾಮರ್ಥ್ಯವಿದೆ. ಮಹಿಳೆ ಮತ್ತು ಪುರುಷ ವಿರುದ್ಧಾರ್ಥಪದಗಳಲ್ಲ ಅವುಪರಸ್ಪರ ಪೂರಕ ಪದಗಳಾಗಿವೆ. ಮಹಿಳೆಯರಿಗೆ ಅಸಾಧಾರಣ ಸಾಮರ್ಥ್ಯವಿದೆ. ಅದನ್ನು ಸದುಪಯೋಗ ಪಡಿಸಿಕೊಂಡಲ್ಲಿಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಡರೂ ಯಶಸ್ಸನ್ನು ಸಾಧಿಸಬಹುದು. ಈ ದಿನವು ಪ್ರತಿಯೋರ್ವ ಮಹಿಳೆಯೂ ತನ್ನಕುಟುಂಬಕ್ಕೆ, ಸಮುದಾಯಕ್ಕೆ ಹಾಗೂ ದೇಶಕ್ಕೆ ನೀಡಿರುವ ಕೊಡುಗೆಗಳನ್ನು ನೆನಪಿಸಿ ಅಭಿನಂದಿಸುವ ದಿನ. ಸ್ತ್ರೀತ್ವವನ್ನುಸಂಭ್ರಮಿಸುವ ದಿನ” ಎಂದು ಹೇಳಿ ಅಂತರಾಷ್ಟ್ರೀಯ ಮಹಿಳಾ ದಿನದ ಶುಭಾಷಯಗಳನ್ನು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಕಾರ್ಯಕ್ರಮದ ಮುಖ್ಯಾತಿಥಿಯಾಗಿ ಭಾಗವಹಿಸಿದ್ದ ಇಂಪೀರಿಲ್‌ ಫರ್ನಿಚರ್‌ ಸಂಸ್ಥೆಯ ಸಂಸ್ಥಾಪಕರಾದ ವಯೊಲೆಟ್‌ನತಾಲಿಯಾ ಮಹಿಳಾ ದೌರ್ಜನ್ಯ ವಿರೋಧಿ ಘಟಕ ಪಿಂಟೋರವರು “ಆಲೋಚನೆಗಳಿಂದ ಪ್ರಭಾವದವರೆಗೆ: ವ್ಯಾಪಾರದಲ್ಲಿಮಹಿಳಾ ನವೋದ್ಯಮಿಗಳು” ಎಂಬ ವಿಷಯದ ಕುರಿತು ಮಾನತಾಡುವ ಸಂದರ್ಭದಲ್ಲಿ “ಮಹಿಳೆಯರು ಹಿಂಜರಿಕೆ ಸ್ವಭಾವವನ್ನು
ಬಿಟ್ಟು ತಮಗೆ ದೊರಕಿದ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಬೇಕು. ಉದ್ಯಮ ಕ್ಷೇತ್ರದಲ್ಲಿ ಬಂದೊದಗುವ ಸವಾಲುಗಳನ್ನುದಿಟ್ಟತನದಿಂದ ಎದುರಿಸುವ ಶಕ್ತಿ ಮಹಿಳೆಯರಿಗಿದೆ” ಎಂದು ಹೇಳಿ ಉದ್ಯಮ ಕ್ಷೇತ್ರದಲ್ಲಿ ಯಶಸ್ಸುಗಳಿಸಿದ ಮಹಿಳೆಯರಉದಾಹರಣೆ ನೀಡಿ ವಿದ್ಯಾರ್ಥಿಗಳಿಗೆ ಸ್ಪೂರ್ತಿತುಂಬಿದರು.ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ವಿಜಯಕುಮಾರ್‌ ಎಂ ಮಾತನಾಡಿ “ಮಹಿಳೆಯು ಅಬಲೆಯಲ್ಲ ಬದಲಾಗಿ ಇಂದುವಿದ್ಯಾವಂತಳಾಗಿ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸನ್ನು ಗಳಿಸುತ್ತಿದ್ದಾಳೆ” ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಿಷಿತಾ ಮತ್ತು ಬಳಗ ಪ್ರಾರ್ಥಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿ ಸಿಂಚನ್‌ ಸ್ವಾಗತಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿಸಹನಾ ಗೌಡ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಪ್ರಥಮ ಬಿಬಿಎ ವಿದ್ಯಾರ್ಥಿನಿ ಶಿಶಿಕಾ ವಂದಿಸಿದರು. ಪ್ರಥಮ ಬಿಕಾಂನಕ್ಲಿಂಟನ್‌ ಸುವಾರಿಸ್‌ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ
ಡಾ} ಡಿಂಪಲ್‌ ಜೆನ್ನಿಫರ್‌ ಫೆರ್ನಾಂಡಿಸ್‌, ಕಾಲೇಜಿನ ಮಹಿಳಾ ದೌರ್ಜನ್ಯ ವಿರೋಧಿ ಘಟಕದ ಸಂಯೋಜಕರಾದ ನೊವೆಲಿನ್‌ಡಿಜೋಜ ಹಾಗೂ ಕಾಲೇಜಿನ ಐಐಸಿ ಘಟಕದ ಸಂಯೋಜಕರಾದ ಗೀತಾ ಪೂರ್ಣಿಮಾ ಈ ಸಂದರ್ಭದಲ್ಲಿ ವೇದಿಕೆಯಲ್ಲಿಉಪಸ್ಥಿತರಿದ್ದರು.