ಮಾರ್ಚ್ 9 ಬೆಂಗಳೂರಿನ ಯುವಪಥದಲ್ಲಿ ” ನಾರಿ ಶಕ್ತಿ ಸಮಾಗಮ ” ; ವಿವಿಧ ಕ್ಷೇತ್ರದ ಮಹಿಳಾ ಸಾಧಕರು ಭಾಗಿ – ಕಹಳೆ ನ್ಯೂಸ್
ಬೆಂಗಳೂರು : ಜಯನಗರದ ಯುವಪಥದಲ್ಲಿ ” ನಾರಿ ಶಕ್ತಿ ಸಮಾಗಮ ” ಎಂಬ ಕಾರ್ಯಕ್ರಮ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಖ್ಯಾತ ಚಿಂತಕಿ ಡಾ.ಆರತಿ ವಿ.ಬಿ., ಖ್ಯಾತ ಲೇಖಕಿ ಅಮಿ ಗಾನಾತ್ರ , ವೀನಾಕ್ಷಿ ಜೈನ್ , ಖ್ಯಾತ ಪತ್ರಕರ್ತೆ ಸ್ಮಿತಾ ರಂಗನಾಥ್, ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.
ಸಂಜೆ 4.00 ಗಂಟೆ ಯಿಂದ ರಾತ್ರಿ 9.00 ಗಂಟೆ ವರೆಗೆ ಕಾರ್ಯಕ್ರಮ ನಡೆಯಲಿದೆ. ಮಹಿಳಾ ಸಲಭಲೀಕರಣದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರುವ ನಿರೀಕ್ಷೆಯಿದೆ.