ಶ್ರೀರಾಮ ಪ್ರಥಮದರ್ಜೆಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನುಆಯೋಜಿಸಲಾಯಿತು.
ಯತ್ರ ನಾರ್ಯಸ್ತು ಪೂಜ್ಯಂತೆತತ್ರರಮAತೆದೇವತಾಃ”: ಎಲ್ಲಿ ನಾರಿಯನ್ನು ಪೂಜಿಸಲಾಗುವುದೋಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ಕಲಿಸಿದೆ ನಮ್ಮ ಪರಂಪರೆ. ಇದು ಭಾರತೀಯ ಪರಂಪರೆಯಲ್ಲಿ ಹೆಣ್ಣೊಬ್ಬಳ ಸ್ಥಾನಮಾನವನ್ನು ಸೂಚಿಸುತ್ತದೆ. ಇಂದಿನ ಆಧುನಿಕ ಪ್ರಪಂಚದಲ್ಲೂ ಮಹಿಳೆಯ ಮೇಲೆ ಶೋಷಣೆ, ದೌರ್ಜನ್ಯಗಳು ನಡೆಯುತ್ತಿವೆ. ಈ ದೌರ್ಜನ್ಯಗಳನ್ನು ತಡೆಗಟ್ಟಲು ಪ್ರತಿಯೊಬ್ಬರೂ ಪಣತೊಡಬೇಕು. ಹೆಣ್ಣುಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯಕ್ಷಮತೆ ಹೊಂದಿರುವವಳುಎAದುಹಿAದಿ ಉಪನ್ಯಾಸಕಿ ಶ್ರೀಮತಿ ವಿಭಾನಿ ಉತ್ತೇಜಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿರಾಜ್ಯಶಾಸ್ತ್ರಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಮತ್ತುಕಾಲೇಜಿನ ಮಹಿಳಾ ದೌರ್ಜನ್ಯ ನಿರ್ಮೂಲನಾ ಘಟಕದ ನಿರ್ದೇಶಕರಾದಶ್ರೀಮತಿ ಶ್ರೀದೇವಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರತೀಕ್ಷಾಅಂತಿಮ ಬಿ.ಕಾಂ.ನಿರೂಪಿಸಿ, ಪದ್ಮಶ್ರೀ ದ್ವಿತೀಯ ಬಿ.ಎ ಸ್ವಾಗತಿಸಿ, ವಂದಿಸಿದರು.