ಶಿವಮೊಗ್ಗ : ಸಾಗರ ತಾಲೂಕಿನ ಚಿಪ್ಪಳ್ಳಿ ಬಳಿಯ ರಸ್ತೆಯಲ್ಲಿ ಕಾರು ಹತ್ತಿಸಿ ಸಹೋದರನನ್ನ ಹತ್ಯೆ ಮಾಡಿದ್ದ ಕೇಸ್‌ಗೆ ಸಂಬAಧಿಸಿದ ಕೊಲೆ ಮಾಡಿರುವ ವೀಡಿಯೋ ಲಭ್ಯವಾಗಿದೆ.
ಶಿವಮೊಗ್ಗದ ಸಾಗರ ತಾಲೂಕಿನ ಚಿಪ್ಪಳಿ ಕ್ರಾಸ್ ಬಳಿ ಎನ್ ಹೆಚ್-206 ಪಕ್ಕದಲ್ಲಿ ಕೃತ್ಯ ನಡೆಸಲಾಗಿದೆ.
ರಫೀಕ್ (45) ಕೊಲೆಯಾದ ದುರ್ದೈವಿ. ರಫೀಕ್, ಜಿಲ್ಲೆಯ ಸೊರಬ ತಾಲೂಕಿನ ತುಡನೀರು ಗ್ರಾಮದ ನಿವಾಸಿ. ಸಹೋದರರ ನಡುವಿನ ಆಸ್ತಿ ಕಲಹದ ಹಿನ್ನೆಲೆಯಲ್ಲಿ ಕೊಲೆ ನಡೆದಿತ್ತು.
ಭಯಾನಕ ವೀಡಿಯೋದಲ್ಲಿ ಏನಿದೆ..!?
ಸಹೋದರರ ಮಧ್ಯೆ ಗಲಾಟೆಯ ನಂತರ ಮೃತ ರಫಿಕ್ ರಸ್ತೆ ಮಧ್ಯೆ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಂತೆ ಕಾಣ್ತಿದ್ದಾರೆ. ಆಗ ಹಿಂದಿನಿAದ ವೇಗವಾಗಿ ಕಾರು ಚಲಾಯಿಸಿಕೊಂಡ ಬಂದ ಆರೋಪಿ ಸಹೋದರ ಆತ ಮೇಲೆ ಕಾರನ್ನು ಹತ್ತಿಸಿ ಪರಾರಿಯಾಗಿದ್ದಾನೆ. ಈ ದೃಶ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ಪ್ರಯಾಣಿಕರು ಸೆರೆ ಹಿಡಿದಿದ್ದಾರೆ. ಜನಸಂಚಾರದ ನಡುವೆಯೇ ಸಹೋದರನ ಮೇಲೆ ಕಾರು ಹತ್ತಿಸಿ ಕೊಲೆ ಮಾಡ್ತಿರುವ ದೃಶ್ಯ ತುಂಬಾನೇ ಭಯಾನಕವಾಗಿದೆ.
ಕೊಲೆ ಮಾಡಿದ ಬಳಿಕ ಸಾಗರ ತಾಲೂಕಿನ ಆನಂದಪುರದಲ್ಲಿರುವ ಮುರುಘಾ ಮಠದ ಆವರಣಕ್ಕೆ ಹೋಗಿ ಬಟ್ಟೆ ಬದಲಿಸಿದ್ದ. ಈ ಸಂಬAಧ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ.