Recent Posts

Sunday, January 19, 2025
ಸುದ್ದಿ

ಪಾಕಿಸ್ತಾನದ ಒಂದು ಗುಂಡಿಗೆ ಭಾರತದಿಂದ ನೂರು ಗುಂಡಿನ ಉತ್ತರ ನೀಡಿ – ರಾಜನಾಥ್ ಸಿಂಗ್

ದೆಹಲಿ : ಮೋದಿಯವರ ಸರ್ಕಾರ ಬಂದಾಗಿನಿಂದಲೂ ಸೈನ್ಯಕ್ಕೆ ಬಲ ಬಂದಿದೆ ಎಂದರೆ ತಪ್ಪಿಲ್ಲ. ಮೋದಿಯವರ ಸರ್ಕಾರ ಬಂದ ನಂತರ ಸೈನಿಕರ ಆತ್ಮಸ್ಥೈರ್ಯ ಹೆಚ್ಚಾಗಿದೆ.  ಯಾಕಂದ್ರೆ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಅದಕ್ಕೆ ಸಾಕ್ಷಿ ಎಂಬಂತೆ ದಿನೇ ದಿನೇ ಭಯೋತ್ಪಾದಕರು ಸತ್ತ ಸುದ್ಧಿಯನ್ನು ಕೇಳುತ್ತಿದ್ದೇವೆ. ಆ ಭಯೋತ್ಪಾದಕರು ನಮ್ಮ ಸೈನಿಕರ ಗುಂಡಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿಯೇ ಇವತ್ತು ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಜೈಶ್ ಎ ಮೊಹಮದ್ ಎಂಬ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಅಬು ಖಾಲಿದ್ ನಮ್ಮ ಸೈನಿಕರ ಗುಂಡಿಗೆ ಬಲಿಯಾಗಿದ್ದಾನೆ. ಇದೇ ಅಲ್ವಾ ನಮ್ಮ ಸೈನಿಕರ ತಾಕತ್ತು. ಮೋದಿ ಸರ್ಕಾರ ಸೇನೆಗೆ ಕೊಟ್ಟ ಸ್ವಾತಂತ್ರ್ಯದಿಂದಲೇ ಭಯೋತ್ಪಾದನೆ ಇಷ್ಟೊಂದು ಕಡಿಮೆಯಾಗಿದೆ. ಅತ್ರ ಉಗ್ರ ಅಥವಾ ಪಾಕಿಸ್ತಾನದಿಂದ ಒಂದು ಗುಂಡು ಹಾರಿದರೆ ಇತ್ತ ನಮ್ಮಿಂದ ಅಸಂಖ್ಯೆ ಗುಂಡು ಹಾರಲಿ ಎಂಬ ಸ್ವಾತಂತ್ರ್ಯವನ್ನು ನಮ್ಮ ಸೇನೆಗೆ ಕೊಟ್ಟಿದ್ದಾರೆ.

ಹೀಗಾಗಿಯೇ ಪ್ರತಿದಿನ ಭಾರತ ಸೇನೆ ಭಾರತ-ಪಾಕ್ ಗಡಿ ನಿಯಂತ್ರಣ ರೇಖೆ ಬಳಿ ಕನಿಷ್ಠ 5-6 ಭಯೋತ್ಪಾದಕರನ್ನು ಹೊಡೆದುರುಳಿಸುತ್ತಿದ್ದಾರೆಂದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಹಿಂದೆ ಒಂದು ಮಾತು ಹೇಳಿದ್ದರು. ಭಾರತೀಯ ಒಬ್ಬ ಯೋಧನ ತಲೆ ಹೋದರೆ ಅದಕ್ಕ ಪಾಕಿಗಳ ಹತ್ತು ತಲೆ ಹೋಗಬೇಕು ಎಂದು. ಸಾಕಲ್ವಾ ಇಷ್ಟು ಸ್ವಾತಂತ್ರ್ಯ ಸಿಕ್ಕರೆ.
ಪ್ರತಿಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದಾಗಲೂ ಅದಕ್ಕೆ ತಕ್ಕ ಉತ್ತರ ಭಾರತೀಯ ಸೇನೆ ನೀಡುತ್ತಿದೆ. ಹಾಗೆ ಉತ್ತರ ನೀಡಲು ಭಾರತಿಯ ಸೇನೆಗೆ ಪರವಾನಿಗೆ ನೀಡಿದ್ದಾರೆಂದು ರಾಜ ನಾಥ್ ಸಿಂಗ್ ಹೇಳಿದ್ದಾರೆ. ಪಾಕ್ ಏನಾದರೂ ಗುಂಡಿನ ದಾಳಿಗೆ ಮುಂದಾದರೆ ಗುಂಡುಗಳನ್ನು ಲೆಕ್ಕ ವಿಡದೇ ಫೈರಿಂಗ್ ಮಾಡಲು ಭಾರತದ ಸೇನೆಗೆ ರಾಜನಾಥ್ ಸಿಂಗ್ ಸೂಚಿಸಿದ್ದಾರೆ ಹೀಗಾಗಿ ಭಾರತೀಯ ಯೋಧ ಬೇಟೆಯಾಡುತ್ತಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response