Monday, November 25, 2024
ದಕ್ಷಿಣ ಕನ್ನಡಸುದ್ದಿ

ಸಂತ ಫಿಲೋಮಿನಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ಒಂದು ದಿನದ ಕಾರ್ಯಗಾರ – ಕಹಳೆ ನ್ಯೂಸ್

ಪುತ್ತೂರು  :  ಸಂತ ಫಿಲೋಮಿನಾ ಕಾಲೇಜಿನ ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಶನ್‌ ವಿಭಾಗ, ಮ್ಯಾನೇಜ್ಮೆಂಟ್‌ ಅನೋಸಿಯೇಶನ್‌, ಹಾಗೂಕಾಲೇಜಿನ ಇನ್ಸ್ಟಿಟ್ಯೂಶನ್ಸ್‌ ಇನ್ನೊವೇಶನ್‌ ಕೌನ್ಸಿಲ್‌ಗಳ ಸಂಯುಕ್ತ ಆಶ್ರಯದಲ್ಲಿ “ಇನ್ನೋವೇಟ್ ಫಾರ್ ಇಂಪ್ಯಾಕ್ಟ್: ಎ ಜರ್ನಿ ಇನ್ಸೋಶಿಯಲ್ ಎಂಟರ್‌ಪ್ರೆನ್ಯೂರ್‌ಶಿಪ್” ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಪುತ್ತೂರಿನ ಸಂತ ಫಿಲೋಮಿನಾಕಾಲೇಜಿನ ಹಿರಿಯ ವಿದ್ಯಾರ್ಥಿ ಗೊಲೆಕ್ಸ್ ಎಂಟರ್‌ಪ್ರೈಸೆಸ್ ಮಾಲಕರಾದ ಜೆ.ಸಿ.ಕೃಷ್ಣ ಮೋಹನ್ ಪಿ.ಎಸ್ ದೀಪ ಬೆಳಗಿಸಿ ಕಾರ್ಯಾಗಾರವನ್ನು
ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟೊನಿ ಪ್ರಕಾಶ್‌ ಮೊಂತೆರೋರವರು“ಕುತೂಹಲವು ನವೀನ ಆಲೋಚನೆಗಳಿಗೆ ಕಾರಣವಾಗುತ್ತದೆ. ನಾವೀನ್ಯತೆ ಪರಿಣಾಮಕಾರಿ ವ್ಯಾಪಾರ ಮಾದರಿಗಳ ಅಭಿವೃದ್ಧಿಗೆ ಕಾರಣವಾಗುತ್ತದೆ.ಓರ್ವ ಉದ್ಯಮಿಯು ಯಶಸ್ವಿಯಾದಲ್ಲಿ ತನ್ನ ಸುತ್ತುಮುತ್ತಲಿನ ಹಲವಾರು ಮಂದಿಗೆ ಉದ್ಯೋಗದಾತನಾಗಿ ತಾನು ಪ್ರಗತಿಹೊಂದಿ ದೇಶದಅಭಿವೃದ್ಧಿಗೆ ಕಾರಣೀಭೂತನಾಗುತ್ತಾನೆ” ಎಂದು ಹೇಳಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಲು ಮತ್ತುಸಾಮಾಜಿಕ ಉದ್ಯಮಶೀಲತೆಯ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ಪಡೆಯಲು ಕರೆನೀಡಿದರು.

ಉದ್ಘಾಟನಾ ಭಾಷಣದಲ್ಲಿ ಕೃಷ್ಣಮೋಹನ್ ಅವರು ಭಾರತದಲ್ಲಿ ಸ್ಟಾರ್ಟಪ್ ಅವಕಾಶಗಳು ಮತ್ತು ಸಾಮಾಜಿಕ ಉದ್ಯಮಶೀಲತೆಗಾಗಿ ಲಭ್ಯವಿರುವವಿವಿಧ ಯೋಜನೆಗಳ ಬಗ್ಗೆ ಚರ್ಚಿಸಿದರು. ವಿದ್ಯಾರ್ಥಿಗಳಿಗಾಗಿ ವಿನೂತನ ಕೌಶಲ್ಯ ವರ್ಧಕ ಕಾರ್ಯಾಗಾರವನ್ನು ಆಯೋಜಿಸಿದ್ದಕ್ಕಾಗಿ ಸಂಸ್ಥೆಯನ್ನುಅಭಿನಂದಿಸಿದರು. ಕಾರ್ಯಗಾರದಲ್ಲಿ ಮೂರು ತಾಂತ್ರಿಕ ಉಪನ್ಯಾಸಗಳು ಇದ್ದವು. ಸಾಮಾಜಿಕ ಉದ್ಯಮಶೀಲತೆಯ ಪರಿಚಯ, ಸಾಮಾಜಿಕ ಉದ್ಯಮಮಾದರಿಯನ್ನು ಅಭಿವೃದ್ಧಿಪಡಿಸುವುದು, ಸಾಮಾಜಿಕ ಉದ್ಯಮಶೀಲತೆಯಲ್ಲಿ ಭಾವನಾತ್ಮಕ ಬುದ್ಧಿವಂತಿಕೆ. ಮೊದಲನೆಯ ತಾಂತ್ರಿಕ ಉಪನ್ಯಾಸಕ್ಕೆ ಜೆ.ಸಿ.ಕೃಷ್ಣ ಮೋಹನ್ ಪಿ.ಎಸ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಅವರು ನಮ್ಮ ಸುತ್ತುಮುತ್ತಲಿನ ಹಲವು ಯಶಸ್ವಿ ಉದ್ಯಮಗಳಉದಾಹರಣೆ ನೀಡಿ ಸಾಮಾಜಿಕ ಉದ್ಯಮಶೀಲತೆಯ ವಿವಿಧ ಹಂತಗಳು, ಸಾಮಾಜಿಕ ಉದ್ಯಮಶೀಲತೆಯ ಪ್ರಮುಖ ಗುಣಲಕ್ಷಣಗಳು, ಸಾಮಾಜಿಕಪರಿಣಾಮ ಹಾಗೂ ಸಾಂಪ್ರದಾಯಿಕ ವ್ಯಾಪಾರಗಳ ನಡುವಿನ ವ್ಯತ್ಯಾಸ, ಸಾಮಾಜಿಕ ಸಮಸ್ಯೆಗಳನ್ನು ಗುರುತಿಸುವ ವಿಧಾನಗಳು, ಯಶಸ್ವಿ ಸಾಮಾಜಿಕಉದ್ಯಮಶೀಲತಾ ಉಪಕ್ರಮಗಳನ್ನು ಪರೀಕ್ಷಿಸುವುದು, ಯಶಸ್ವಿ ಸಾಮಾಜಿಕ ಉದ್ಯಮಿಗಳ ಕೌಶಲ್ಯಗಳು ಮತ್ತು ಗುಣಗಳು ಮುಂತಾದ ವಿಷಯಗಳ ಮೇಲೆ
ಅರಿವು ಮೂಡಿಸಿದರು.

ದ್ವಿತೀಯ ತಾಂತ್ರಿಕ ಉಪನ್ಯಾಸದ ಸಂಪನ್ಮೂಲ ವ್ಯಕ್ತಿಯಾದ ಬೆಂಗಳೂರಿನ ಸ್ಲ್ಯಾಂಗ್‌ ಲ್ಯಾಬ್ಸ್‌ ನ ಮಾರ್ಕೆಟಿಂಗ್‌ ವಿಭಾಗದ ಮುಖ್ಯಸ್ಥರಾದಮಧುರಾನಾಥ್‌ ಆರ್‌ರವರು ಸಾಮಾಜಿಕ ಉದ್ಯಮ ಮಾದರಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಉದ್ಯಮದ ಗಳಿಕೆಯನ್ನು ಕೇವಲ ಸ್ವಂತಲಾಭಕ್ಕೆ ಮಾತ್ರ ಬಳಸಿಕೊಳ್ಳದೆ ಸಾಮಾಜಿಕ ಕಳಕಳಿಯನ್ನು ಯಾವರೀತಿ ವ್ಯಕ್ತಪಡಿಸಬಹುದು, ಸ್ಥಳೀಯ ಅಥವಾ ಜಾಗತಿಕ ಸಾಮಾಜಿಕ ಸವಾಲುಗಳನ್ನುವಿಶ್ಲೇಷಿಸುವುದು ಫಲಾನುಭವಿಗಳನ್ನು ಗುರುತಿಸುವುದು, ಸಾಮಾಜಿಕ ಉದ್ಯಮಗಳಿಗಾಗಿ ವ್ಯಾಪಾರ ಮಾದರಿಗಳು, ಸಾಮಾಜಿಕ ಉದ್ಯಮಗಳಿಗಸರಿಯಾದ ಕಾನೂನುಗಳ ರಚನೆ, ಸಾಮಾಜಿಕ ಉದ್ಯಮದಲ್ಲಿ ಆರ್ಥಿಕ ಸುಸ್ಥಿರತೆ, ಸಾಮಾಜಿಕ ಉದ್ಯಮಗಳಿಗೆ ಆದಾಯ ಮಾದರಿಗಳು ನಿಧಿಸಂಗ್ರಹಣೆತಂತ್ರಗಳು ಮತ್ತು ಸರಕಾರ ಅಥವಾ ವಿವಿಧ ಸಂಸ್ಥೆಗಳಿಂದ ದೊರೆಯಬಹುದಾದ ಅನುದಾನಗಳು ಮುಂತಾದ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆಪ್ರಾತ್ಯಕ್ಷಿಕೆಗಳ ಸಹಾಯದಿಂದ ವಿವರಿಸಿದರು.

ಉಪ್ಪಿನಂಗಡಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ನಂದೀಶ್‌ ವೈ ಡಿ ರವರು ಸಾಮಾಜಿಕಉದ್ಯಮದಲ್ಲಿ ಭಾವನಾತ್ಮಕ ಬುದ್ಧಿವಂತಿಕೆ ಎಂಬ ವಿಷಯದ ಮೇಲೆ ತಾಂತ್ರಿಕ ಉಪನ್ಯಾಸ ನೀಡಿದರು. ತಮ್ಮ ಉಪನ್ಯಾಸದಲ್ಲಿ ಅವರು ಭಾವನಾತ್ಮಕಬುದ್ಧಿವಂತಿಕೆಯ ವ್ಯಾಖ್ಯಾನ, ವಾಣಿಜ್ಯೋದ್ಯಮದಲ್ಲಿ ಭಾವನಾತ್ಮಕ ಬುದ್ಧಿವಂತಿಕೆಯಯ ಪ್ರಾಮುಖ್ಯತೆ, ಉದ್ಯಮ ಕ್ಷೇತ್ರದಲ್ಲಿ ಭಾವನೆಗಳನಿಯಂತ್ರಣ ಮತ್ತು ಒತ್ತಡ ನಿರ್ವಹಣೆಯ ಮಹತ್ವ, ಪರಾನುಭೂತಿ ಮತ್ತು ಸಾಮಾಜಿಕ ಜಾಗೃತಿ, ಭಾವನಾತ್ಮಕ ಬುದ್ಧಿವಂತಿಕೆಯೊಂದಿಗೆವ್ಯವಹಾರವನ್ನು ಮುನ್ನಡೆಸುವುದು, ಧನಾತ್ಮಕ ಪ್ರಭಾವಕ್ಕಾಗಿ ಭಾವನಾತ್ಮಕ ಬುದ್ಧಿವಂತಿಕೆಯನ್ನು ನಿಯಂತ್ರಿಸುವುದು ಮುಂತಾದ ವಿಷಯಗಳ ಬಗ್ಗೆತಮ್ಮ ಅನುಭವವನ್ನು ವಿದ್ಯಾರ್ಥಿಗಳೊಡನೆ ಹಂಚಿಕೊಂಡರು.

ಹೃಷಿತಾ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಶನ್‌ ವಿಭಾಗದ ಮುಖ್ಯಸ್ಥರಾದ ಡಾ} ರಾಧಾಕೃಷ್ಣ ಗೌಡ ಸ್ವಾಗತಿಸಿಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಮ್ಯಾನೇಜ್ಮೆಂಟ್‌ ಅನೋಸಿಯೇಶನ್‌ನ ಸಂಯೋಜಕರಾದ ಪ್ರಶಾಂತ್‌ ರೈ ವಂದಿಸಿದರು. ವಿದ್ಯಾರ್ಥಿನಿರಾಶಿ ರೈ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಶನ್‌ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪುಷ್ಪಾ ಎನ್‌ ಹಾಗೂಅಭಿಷೇಕ್‌ ಸುವರ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.