Friday, January 24, 2025
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲ: ವಿವಾಹಿತ ಮಹಿಳೆಯನ್ನು ಅಪಹರಿಸಿ ಲವ್ ಜಿಹಾದ್ ಪ್ರಕರಣ : ಆರೋಪಿಯ ಬಂಧನಕ್ಕಾಗಿ ವಿ.ಹಿಂ.ಪ. ಬಜರಂಗದಳ ವಿಟ್ಲ ಪ್ರಖಂಡದ ವತಿಯಿಂದ ವಿಟ್ಲ ಠಾಣಾ ಇನ್ಸ್‌ಸ್ಪೆಕ್ಟರ್‌ ರಿಗೆ ಮನವಿ- ಕಹಳೆ ನ್ಯೂಸ್

ವಿಟ್ಲ: ವಿವಾಹಿತ ಮಹಿಳೆಯನ್ನು ಅಪಹರಿಸಿ ಲವ್ ಜಿಹಾದ್ ಹೆಸರಿನಲ್ಲಿ ಬಂಧನದಲ್ಲಿರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸದೆ ಆದಷ್ಟು ಶೀಘ್ರದಲ್ಲಿ ಬಂಧಿಸಿ ಆರೋಪಿ ಅಬ್ದುಲ್ ರಹಿಮಾನ್ ಅಲಿಯಾಸ್ ಶೆರೀಫ್ ಎಂಬಾತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿ.ಹಿಂ.ಪ. ಬಜರಂಗದಳ ವಿಟ್ಲ ಪ್ರಖಂಡದ ವತಿಯಿಂದ ವಿಟ್ಲ ಠಾಣಾ ಇನ್ಸ್‌ಸ್ಪೆಕ್ಟರ್‌ ರವರಿಗೆ ಮನವಿ ಸಲ್ಲಿಸಲಾಯಿತು.

ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿ ಗ್ರಾಮ ಚಾವಡಿ ಎಂಬಲ್ಲಿರುವ ಎರಡು ಮಕ್ಕಳ ತಾಯಿ ವಿಧವೆ ಮಹಿಳೆಯನ್ನು ಸುಮಾರು ನಾಲ್ಕು ದಿನಗಳ ಹಿಂದೆ ಬಂಟ್ವಾಳ ತಾಲೂಕು ಸಜಿಪ ಗ್ರಾಮದ ಅನ್ಯಕೋಮಿನ ವ್ಯಕ್ತಿ ನಾಲ್ಕು ಮಕ್ಕಳ ತಂದೆಯಾಗಿರುವ ಅಬ್ದುಲ್ ರಹಿಮಾನ್ ಅಲಿಯಾಸ್ ಶೆರೀಫ್ ಎಂಬಾತನು ವಶೀಕರಣ ಮಾಡಿ ಕರೆದೊಯ್ದು ಪರ್ತಿಪ್ಪಾಡಿ ಎಂಬಲ್ಲಿರುವ KAMZ ಅಪಾಟ್‌ಮೆಂಟ್ ಎಂಬ ಹೆಸರಿನ ಬಾಡಿಗೆ ಮನೆಯಲ್ಲಿ ಇರಿಸಿರುತ್ತಾನೆ . ಸದ್ರಿ ಮಹಿಳೆಗೆ ಪ್ರಾಯಪ್ರಬುದ್ದರಾಧ ಇಬ್ಬರು ಮಕ್ಕಳಿದ್ದು ಮಹಿಳೆಯ ಮಗನಿಗೆ ಆರೋಪಿ ಅಬ್ದುಲ್ ರಹಿಮಾನ್ ಮಗ ಮೊಬೈಲ್ ಮುಖಾಂತರ ಅವರಿಬ್ಬರ ನಡುವೆ ಲೈಂಗಿಕ ಕ್ರಿಯೆಯ ನೀಲಿ ಚಿತ್ರಗಳನ್ನು ತೋರಿಸಿ ಅದನ್ನು ಬಹಿರಂಗ ಪಡಿಸುವ ಕಾರಣ ಕೊಟ್ಟು ಮಹಿಳೆಯನ್ನು ಹೆದರಿಸಿ ಅಪಹರಣ ಮಾಡಿರುವುದಾಗಿದೆ. ಲವ್ ಜಿಹಾದ್ ಹೆಸರಿನಲ್ಲಿ ಮಹಿಳೆಯನ್ನು ಅಪಹರಿಸಿ ಆಕೆಯನ್ನು ದುರುಪಯೋಗ ಪಡಿಸಿಕೊಂಡು ಕೊನೆಗೆ ಬಲತ್ಕಾರವಾಗಿ ಮತಾಂತರ ಮಾಡಿಸುವ ಹುನ್ನಾರ ಇದಾಗಿರುತ್ತದೆ. ಈ ಕುರಿತು ನೊಂದ ಮಹಿಳೆಯ ಪುತ್ರ ಆತನ ವಿರುದ್ದ ವಿಟ್ಲ ಆರಕ್ಷಕರ ಠಾಣೆಗೆ ದೂರು ನೀಡಿದ್ದರೂ ಈ ತನಕ ಅಪಹರಣ ಕಾರನ ವಿರುದ್ದ ಯಾವುದೇ ಕ್ರಮ ಕೈಗೊಂಡಿರುವುದಾಗಲೀ ಅವರನ್ನು ಠಾಣೆಗೆ ಹಾಜರುಪಡಿಸುವ ಬಗ್ಗೆ ಕೂಡಾ ಕ್ರಮ ಕೈಗೊಂಡಿರುವುದಿಲ್ಲ.ಆದುದರಿಂದ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸದೆ ಆದಷ್ಟು ಶೀಘ್ರದಲ್ಲಿ ಇವರನ್ನು ಬಂಧಿಸಿ ಆರೋಪಿ ಅಬ್ದುಲ್ ರಹಿಮಾನ್ ಅಲಿಯಾಸ್ ಶೆರೀಫ್ ಎಂಬಾತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಸಂದರ್ಭದಲ್ಲಿ ವಿ.ಹಿಂ.ಪ. ಬಜರಂಗದಳ ಜಿಲ್ಲಾ ಮಠ ಮಂದಿರ ಪ್ರಮುಖ್ ಪದ್ಮನಾಭ ಕಟ್ಟೆ , ವಿ.ಹಿಂ.ಪ. ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕ ಚೇತನ್ ಕಡಂಬು, ವಿ.ಹಿಂ.ಪ. ಬಜರಂಗದಳ ವಿಟ್ಲ ಪ್ರಖಂಡ ಅಧ್ಯಕ್ಷ ವಿಶ್ವನಾಥ್ ನಾಯ್ತೋಟ್ಟು, ವಿ.ಹಿಂ.ಪ. ಬಜರಂಗದಳ ವಿಟ್ಲ ಪ್ರಖಂಡ ಗೋರಕ್ಷ ಪ್ರಮುಖ್ ಹೇಮಂತ್ ಕುಂಡಡ್ಕ, ಹಿಂದೂ ಮುಖಂಡ ಚರಣ್ ಕಾಪುಮಜಲು, ಫ್ರೆಂಡ್ಸ್ ಕಾಪುಮಜಲು ಅಧ್ಯಕ್ಷ ವಿನಯ್ ಜೋಗಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು