ಸುಬ್ರಹ್ಮಣ್ಯ : ಮಹಾಶಿವರಾತ್ರಿ ಹಾಗೂ ಮರುದಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಸಂದಣಿ ಅಧಿಕವಾಗಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಕೂಡ ಅಧಿಕ ಬಸ್ಸುಗಳನ್ನು ರಾಜ್ಯದ ವಿವಿಧ ಕ್ಷೇತ್ರಗಳಿಗೆ ಕಲ್ಪಿಸಿದ್ದರು. ಅದರಿಂದಾಗಿ ಬೇರೆ ಕ್ಷೇತ್ರಗಳಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೂಡ ಉತ್ತರ ಕರ್ನಾಟಕ ಹಾಗೂ ವಿವಿಧ ಭಾಗಗಳಿಂದ ಅಧಿಕ ಸಂಖ್ಯೆಯ ಭಕ್ತರು ಆಗಮಿಸಿರುವರು .ಶ್ರೀ ದೇವಳದ ವತಿಯಿಂದ ಭಕ್ತರಿಗೆ ಅನುಕೂಲವಾಗುವ ಹಾಗೆ ದೇವರ ದರುಶನ ಸಾಲು, ಪ್ರಸಾದ ವಿತರಣೆ, ಹಾಗೂ ವಿಶೇಷವಾಗಿ ಆದಿ ಸುಬ್ರಹ್ಮಣ್ಯದಲ್ಲಿ ಭೋಜನ ಪ್ರಸಾದ ವಿತರಣೆಯನ್ನು ಕೂಡ ಮಾಡಲಾಗಿದೆ.