ಭಾರತೀಯ ಸಂಗೀತದಿಂದ ಸರ್ವೋತ್ಕೃಷ್ಟ ಉಪಚಾರವಾಗುತ್ತದೆ ! – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ; ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಬ್ಯಾಂಕಾಕ್ ನಲ್ಲಿ ಸಂಗೀತದ ಬಗ್ಗೆ ಸಂಶೋಧನೆ ಸಾದರ ! –
ಮಂತ್ರ, ನಾಮಜಪ, ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದ ರಾಗಗಳಿಂದ ಸರ್ವೋತ್ಕೃಷ್ಟ ಉಪಚಾರವಾಗುತ್ತದೆ. ಈಪ್ರಾಚೀನ, ಯಾವುದೇ ರೀತಿಯ ಹಾನಿ ಮಾಡದಿರುವ ಉಪಚಾರ ಪದ್ಧತಿಯನ್ನು ವೈದ್ಯಕೀಯ ಚಿಕಿತ್ಸೆಯಲ್ಲಿಉಪಯೋಗಿಸುವ ಬಗ್ಗೆ ವೈದ್ಯಕೀಯ ಸಮೂಹ ಸಂಶೋಧನೆ ನಡೆಸಬೇಕೆಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಶ್ರೀ. ಶಾನ್ ಕ್ಲಾರ್ಕ್ ಇವರು ಕರೆ ನೀಡಿದರು. ಇತ್ತೀಚೆಗೆ ಬ್ಯಾಂಕಾಕ್, ಥೈಲ್ಯಾಂಡ್ ನಲ್ಲಿ ನಡೆದ ‘ಸೆವೆಂತ್ ಗ್ಲೋಬಲ್ ಪಬ್ಲಿಕ್ಹೆಲ್ತ್ ಕಾನ್ಫರೆನ್ಸ್’ನಲ್ಲಿ ಶ್ರೀ. ಶಾನ್ ಕ್ಲಾರ್ಕ್ ಇವರು ಮಾತನಾಡುತ್ತಿದ್ದರು. ಅವರು ಸದೃಢ ಆರೋಗ್ಯಕ್ಕಾಗಿ ವಿಶೇಷವಾಗಿರಕ್ತದೊತ್ತಡದ ಮೇಲೆ ಕೇಂದ್ರಿತ ಸಂಗೀತದ ಉಪಚಾರ ಈ ಶೋಧ ಪ್ರಬಂಧ ಪ್ರಸ್ತುತಪಡಿಸಿದರು.
ಈ ಶೋಧಪ್ರಬಂಧದ ಲೇಖಕರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಸಚ್ಚಿದಾನಂದಪರಬ್ರಹ್ಮ ಡಾ. ಜಯಂತ ಆಠವಲೆ ಮತ್ತು ಶ್ರೀ. ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ. ಅಕ್ಟೋಬರ್ 2016 ರಿಂದಫೆಬ್ರವರಿ 2024 ಈ ಕಾಲಾವಧಿಯಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು 20 ರಾಷ್ಟ್ರೀಯ ಮತ್ತು 93ಅಂತರಾಷ್ಟ್ರೀಯ ಒಟ್ಟು 113 ವೈಜ್ಞಾನಿಕ ಸಭೆಗಳಲ್ಲಿ ಶೋಧಪ್ರಬಂಧಗಳನ್ನು ಪ್ರಸ್ತುತಪಡಿಸಿದೆ. ಇದರಲ್ಲಿ 14ಅಂತರಾಷ್ಟ್ರೀಯ ಸಭೆಗಳಲ್ಲಿ ‘ಸರ್ವೋತ್ಕೃಷ್ಟ ಪ್ರಸ್ತುತೀಕರಣ’ದ ಪ್ರಶಸ್ತಿ ದೊರೆತಿದೆ.
ಹೈ ಬಿಪಿ ಇರುವಾಗ ವಿವಿಧ ಧ್ವನಿಯಿಂದಾಗುವ ಪರಿಣಾಮದ ಅಭ್ಯಾಸ ಮಾಡುವ 4 ಪ್ರಯೋಗಗಳ ಫಲಿತಾಂಶ ಪ್ರಸ್ತುತಪಡಿಸಿದರು. ಪ್ರಯೋಗದ ಮುನ್ನ ಮತ್ತು ಪ್ರಯೋಗದ ನಂತರ ಇದರಲ್ಲಿ ಸಹಭಾಗಿ ವ್ಯಕ್ತಿಗಳ ಪ್ರಭಾವಲಯ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಈ ಯಂತ್ರದ ಮೂಲಕ ಅಳೆದಿದ್ದರು. ಜೊತೆಗೆ ಅವರ ಬಿಪಿ ನಿಯಮಿತವಾಗಿಅಳೆಯುವ ಯಂತ್ರದಿಂದ ಅಳೆಯಲಾಯಿತು. ಪ್ರಯೋಗದಲ್ಲಿ ಸಹಭಾಗಿ ಆಗಿರುವ ವ್ಯಕ್ತಿಗಳ ಪ್ರಯೋಗದ ಮೊದಲು 2ದಿನ, ಹಾಗೂ ಪ್ರಯೋಗದ ರಾತ್ರಿ ಅವರ ರಕ್ತದೊತ್ತಡದ ಔಷಧ ತೆಗೆದುಕೊಳ್ಳದಂತೆ ತಜ್ಞ ಡಾಕ್ಟರರ ನಿರೀಕ್ಷಣೆಯಲ್ಲಿಇಡಲು ನಿಶ್ಚಯಿಸಲಾಯಿತು. ಪ್ರಯೋಗದ ಎರಡನೆಯ ದಿನ ಬೆಳಗ್ಗೆ ಮತ್ತೆ ಎಲ್ಲಾ ಪರೀಕ್ಷೆಗಳನ್ನು ಮಾಡಲಾಯಿತು.
ಪ್ರಯೋಗದಲ್ಲಿನ ಮೊದಲ 5 ವ್ಯಕ್ತಿಗಳಿಗೆ ಭಾರತೀಯ ಸಂಗೀತದ `ರಾಗ ಘೋರಖಕಲ್ಯಾಣ’ ಕೇಳಿಸಿದ್ದರು. ಅದರನಂತರ ಎಲ್ಲರ ನಾಡಿ ಬಡಿತ ಸರಾಸರಿ ಶೇಕಡಾ 15 ರಷ್ಟು ಕಡಿಮೆ ಆಗಿರುವುದು ಕಂಡುಬಂತು. ಎರಡನೆಯ ದಿನ ಬೆಳಿಗ್ಗೆ(72 ಗಂಟೆ ಬಿಪಿ ಔಷಧಿ ತೆಗೆದುಕೊಳ್ಳದಿರುವಾಗಲೂ) 5 ರಲ್ಲಿನ 4 ವ್ಯಕ್ತಿಗಳ ರಕ್ತದೊತ್ತಡ ಕಡಿಮೆ ಆಗಿರುವುದುಕಂಡುಬಂತು. ಎಲ್ಲಾ ವ್ಯಕ್ತಿಗಳ ಪ್ರಭಾವಲಯದಲ್ಲಿನ ನಕಾರಾತ್ಮಕತೆ ಸುಮಾರು ಶೇಕಡ 60 ರಷ್ಟು ಕಡಿಮೆ ಆಗಿರುವುದುಮತ್ತು ಸಕಾರಾತ್ಮಕತೆ ಶೇಕಡ 155 ರಷ್ಟು ಹೆಚ್ಚಾಗಿರುವುದು ಕಂಡುಬಂತು. ಎರಡನೇ ಪರೀಕ್ಷೆಯಲ್ಲಿ 2 ವ್ಯಕ್ತಿಗಳಿಗೆ `ಓಂನಮೋ ಭಗವತೇ ವಾಸುದೇವಾಯ’, ಈ ನಾಮಜಪ ಕೇಳಿಸಿದರು. ಮೂರನೆಯ ಪರೀಕ್ಷೆಯಲ್ಲಿ 3 ವ್ಯಕ್ತಿಗಳಿಗೆ `ಓಂ’ ಈಬೀಜಮಂತ್ರದ ಧ್ವನಿ ಕೇಳಿಸಿದರು. ಈ ಎರೆಡೂ ಪ್ರಯೋಗದ ಪರಿಣಾಮ ಮೊದಲ ಪ್ರಯೋಗದಂತೆಯೇ ಬಂದಿತು.
ನಾಲ್ಕನೇ ಪರೀಕ್ಷೆಯಲ್ಲಿ 2 ವ್ಯಕ್ತಿಗಳಿಗೆ `ಮಾರಕೋನಿ’ ಈ ವಾದ್ಯವೃಂದ ಸಮೂಹದ ‘ವೆಟಲೇಸ್’ (weightless)ಜಗತ್ತಿನ ಪ್ರಸಿದ್ಧ ಒತ್ತಡ ಮುಕ್ತಿ ನೀಡುವ ಎಂದು ಪ್ರಸಿದ್ಧಿ ಪಡೆದಿರುವ ಸಂಗೀತ ಕೇಳಿದರು. ಅದರ ನಂತರ ಎಲ್ಲರರಕ್ತದೊತ್ತಡ ಕಡಿಮೆ ಆಗಿರುವುದು ಕಂಡುಬಂತು; ಆದರೆ ನಾಡಿ ಬಡಿತ ಹೆಚ್ಚಾಗಿತ್ತು. ಎರಡನೇ ದಿನ ಬೆಳಿಗ್ಗೆ ಇಬ್ಬರರಕ್ತದೊತ್ತಡ ಇನ್ನೂ ಕಡಿಮೆ ಆಗಿರುವುದು ಕಂಡುಬಂತು. ಆದರೆ ಮೊದಲ 3 ಪರೀಕ್ಷೆಯ ತುಲನೆಯಲ್ಲಿ ಈ ಪರೀಕ್ಷೆಯಲ್ಲಿಸಹಭಾಗಿ ವ್ಯಕ್ತಿಗಳ ಪ್ರಭಾವಲಯದಲ್ಲಿನ ನಕಾರಾತ್ಮಕತೆ ಇನ್ನೂ ಹೆಚ್ಚಿರುವುದು ಮತ್ತು ಸಕಾರಾತ್ಮಕತೆ ಕಡಿಮೆಆಗಿರುವುದು ಕಂಡುಬಂದಿತು; ಏಕೆಂದರೆ ವೇಟಲೇಸ್ ಈ ಸಂಗೀತ ರಚನೆ ಮಾಡಲು ಉಪಯೋಗಿಸಿರುವ ಎಲೆಕ್ಟ್ರಾನಿಕ್ವಾದ್ಯಗಳು ಹಾಗೂ ಈ ರಚನೆಯಲ್ಲಿನ ಸ್ವರ ಮತ್ತು ಧ್ವನಿಯಿಂದ ನಕಾರಾತ್ಮಕ ಸ್ಪಂದನಗಳ ನಿರ್ಮಿತಿ ಆಗಬಹುದುಎಂದು ಶ್ರೀ. ಕ್ಲಾರ್ಕ್ ಇವರು ಹೇಳಿದರು.
ತಮ್ಮ ಸವಿನಯ,
ಶ್ರೀ. ಆಶಿಷ ಸಾವಂತ
ಸಂಶೋಧನಾ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
(ಸಂಪರ್ಕ : 9561574972 )