Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಮಾದಕ ದ್ರವ್ಯಗಳ ದುಷ್ಪರಿಣಾಮದ ಬಗ್ಗೆ ಜಾಗೃತಿಯಲ್ಲಿ ಪೋಲೀಸರಿಗೆ ಸಾಥ್ ನೀಡಿದ ಸಂತ ಫಿಲೋಮಿನಾ ಕಾಲೇಜ್ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ವತಿಯಿಂದ ಕರ್ನಾಟಕ ರಾಜ್ಯ ಪೋಲೀಸ್ ಸುವರ್ಣಮಹೋತ್ಸವದ ಅಂಗವಾಗಿ ಮಾದಕ ದ್ರವ್ಯಗಳ ದುಷ್ಪರಿಣಾಮದ ಬಗ್ಗೆ ಜಾಗೃತಿಗಾಗಿ ʼಪೋಲೀಸ್ ರನ್ನ್ 2024ʼಕಾರ್ಯಕ್ರಮವನ್ನು ಪೋಲೀಸ್ ಇಲಾಖೆಯಂದ ಆಯೋಜಿದ ಕಾರ್ಯಕ್ರಮದಲ್ಲಿ ನೂರಾರು ಕಾಲೇಜುವಿದ್ಯಾರ್ಥಿಗಳು ಪಾಲ್ಗೊಂಡರು. ದರ್ಬೆಯ ಫಾ| ಪತ್ರಾವೋ ವೃತ್ತದ ಬಳಿಯಲ್ಲಿ ಪಾರಿವಾಳಗಳನ್ನು ಹಾರಿಸಿ ಹಸಿರುನಿಶಾನೆ ತೋರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪಿ ಬಿರಿಷ್ಯಂತ್‌ರವರು ಮುಂಬರುವ ದಿನಗಳಲ್ಲಿ ಪ್ರತಿ ತಿಂಗಳು ಪೋಲೀಸ್ ಠಾಣಾವ್ಯಾಪ್ತಿಯ ಎಲ್ಲಾ ಶಾಲೆಕಾಲೇಜುಗಳಲ್ಲಿ ಪೋಲೀಸ್ ಇಲಾಖೆಯ ವತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದುಎಂದು ಹೇಳಿದರು. ಭಾನುವಾರ ಬೆಳಗ್ಗೆ 8 ಗಂಟೆಗೆ ಫಾ| ಪತ್ರಾವೋ ವೃತ್ತದಿಂದ ಪ್ರಾರಂಭಗೊoಡ ಪೋಲೀಸ್‌ರನ್ ಕಾರ್ಯಕ್ರಮವು ಪುತ್ತೂರಿನ ಮುಖ್ಯರಸ್ತೆಯಲ್ಲಿ ಸಾಗಿ ಪುತ್ತೂರು ನಗರ ಪೋಲೀಸ್‌ಠಾಣೆಯ ಬಳಿಸಂಪನ್ನಗೊoಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೋಲೀಸ್ ಅಧಿಕಾರಿ ಧರ್ಮಪ್ಪ, ಪುತ್ತೂರು ಡಿವೈಎಸ್‌ಪಿಅರುಣ್ ನಾಗೇಗೌಡ, ಪುತ್ತೂರು ನಗರ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಜೆ ಜೆ, ಸಬ್ ಇನ್ಸ್ಪೆಕ್ಟರ್ ಆಂಜನೇಯರೆಡ್ಡಿ, ಪುತ್ತೂರು ಮಹಿಳಾ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಎಂ ಎಸ್, ಪುತ್ತೂರುಸಂಚಾರಿ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಾಹಿದ್ ಅಫ್ರಿದಿ, ಎಲ್ಲಾ ಪೋಲೀಸ್ ಠಾಣೆಗಳ ಸಿಬ್ಬಂದಿ ವರ್ಗ,ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘ, ಎನ್ ಸಿ ಸಿ, ಎನ್ ಎಸ್ ಎಸ್, ರೋವರ್ಸ್ ರೇಂಜರ್ಸ್ಮತ್ತು ಯುತ್ ರೆಡ್‌ಕ್ರಾಸ್ ಘಟಕಗಳ ವಿದ್ಯಾರ್ಥಿಗಳು ಭಾಗವಹಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಪಿ ಎಸ್ ಕೃಷ್ಣ ಕುಮಾರ್, ಸಾರ್ವಜನಿಕ ಸಂಪರ್ಕಾಧಿಕಾರಿಯಾದ ಭಾರತಿ ಎಸ್ ರೈ,ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಡಾ| ಚಂದ್ರಶೇಖರ್ ಕೆ, , ಎನ್ ಎಸ್ ಎಸ್ಕಾರ್ಯಕ್ರಮಾಧಿಕಾರಿಗಳಾದ ವಾಸುದೇವ ಎನ್ ಮತ್ತು ಪುಷ್ಪಾ ಎನ್ ಹಾಗೂ ರೋವರ್ಸ್ ರೇಂಜರ್ಸ್ಘಟಕದ ಸಂಯೋಜಕರಾದ ಧನ್ಯ ಪಿ ಟಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು