Sunday, January 19, 2025
ಉಡುಪಿಕಾಪುಸುದ್ದಿ

ಸನ್ ಫ್ಲವರ್ ಆಯಿಲ್ ಮತ್ತು ಬಯೋಡೇಸಲ್ ಉತ್ಪಾದನಾ ಘಟಕಕ್ಕೆ ಶಾಂಭವಿ ನದಿಯಿಂದ ನೀರನ್ನು ಉಪಯೋಗಿಸುದನ್ನು ವಿರೋಧಿಸಿ ಇಂದು ಪಲಿಮಾರು ಗ್ರಾಮ ಪಂಚಾಯತ್ ಬಳಿ ನಡೆದ ಬೃಹತ್ ಪ್ರತಿಭಟನೆ – ಕಹಳೆ ನ್ಯೂಸ್

ಕಾಪು : M11 ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಹೊಸದಾಗಿ ಸ್ಥಾಪಿಸಲು ಉದ್ದೇಶಿಸಿರುವ ಪಾಮ್ ಆಯಿಲ್, ಸನ್ ಫ್ಲವರ್ ಆಯಿಲ್ ಮತ್ತು ಬಯೋಡೇಸಲ್ ಉತ್ಪಾದನಾ ಘಟಕಕ್ಕೆ ಶಾಂಭವಿ ನದಿಯಿಂದ ನೀರನ್ನು ಉಪಯೋಗಿಸುದನ್ನು ವಿರೋಧಿಸಿ ಇಂದು ಪಲಿಮಾರು ಗ್ರಾಮ ಪಂಚಾಯತ್ ಬಳಿ ನಡೆದ ಸಾರ್ವಜನಿಕರ ಬೃಹತ್ ಪ್ರತಿಭಟನೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸರಕಾರದ ಶರತ್ತುಗಳು ನಿಬಂಧನೆಗಳಿಗೆ ಬದ್ಧರಾಗಿದ್ದುಕೊಂಡು ಸ್ಥಳೀಯ ರೈತರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಗ್ರಾಮಸ್ಥರೊಂದಿಗೆ ಸೇರಿ ಶಾಸಕರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.