Sunday, January 19, 2025
ಕೃಷಿದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ: ತೋಟಕ್ಕೆ ಆನೆ ದಾಳಿ: ಅಪಾರ ಕೃಷಿ ಹಾನಿ – ಕಹಳೆ ನ್ಯೂಸ್

ಬೆಳ್ತಂಗಡಿ: ಕಣಿಯೂರು ಅಲೆಕ್ಕಿ ಕುಕ್ಕುಂಜಾ ಕುರಿಯಡಿ ಹಾಗೂ ಪದ್ಮುಂಜ ಬಳಿ ಪದ್ಮುಂಜ ಕ್ವಾಟ್ರಾಸ್ ಬಳಿಯಲ್ಲಿ ತಡರಾತ್ರಿ ಸುಮಾರು 1 ಗಂಟೆಗೆ ಕಾಡಾನೆ ದಾಳಿ ನಡೆಸಿದ್ದು, ಹಲವಾರು ಕಡೆ ತೋಟಕ್ಕೆ ನುಗ್ಗಿ ಕೃಷಿಗೆ ಹಾನಿಯಾಗಿದೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯರು ರಾತ್ರಿ ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದ್ದು ಯಾವ ಕಡೆ ಆನೆ ಚಲಿಸಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

 

ನಾರಾಯಣ ಗೌಡ ಕುಕ್ಕುಂಜಾ, ಬಾಲಕೃಷ್ಣ ಗೌಡ ಕುರಿಯಾಡಿ, ಯಶೋಧ ನಾಯ್ಕ ಕೇರಿಕಟ್ಟೆ, ರಮೇಶ್ ಮೂಲ್ಯ ಕೇರಿಕಟ್ಟೆ, ಚಂದಪ್ಪ ಅಲೆಕ್ಕಿ ಇವರ ಕೃಷಿಗೆ ಆನೆ ದಾಳಿ ಮಾಡಿ ಅಪಾರ ನಷ್ಟ ಉಂಟಾಗಿದೆ. ತೋಟಕ್ಕೆ ನುಗ್ಗಿ ಬಾಳೆ ಹಾಗೂ ಕೃಷಿಗೆ ಹಾನಿಯಾಗಿ, ನಷ್ಟ ಸಂಭವಿಸಿದ್ದು, ಕೃಷಿಗರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.