ಇಂದು ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕ ಮಾಲಕರ ಸಂಘ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಕಚೇರಿ ಎದುರು ಪ್ರತಿಭಟನೆ – ಕಹಳೆ ನ್ಯೂಸ್
ಬಂಟ್ವಾಳ: ಕಳೆದ 2023ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಕಾರ್ಯಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಳಸಿದ ಖಾಸಗಿ ಕ್ಯಾಬ್, ಮ್ಯಾಕ್ಸಿಕ್ಯಾಬ್ ಸೇರಿದಂತೆ ಹಲವು ವಾಹನಗಳ ಮಾಲಕರಿಗೆ ಚುನಾವಣಾ ಆಯೋಗ ನಿಗದಿಪಡಿಸಿದ್ದ ಬಾಡಿಗೆ ಮೊತ್ತದಲ್ಲಿ ಕಡಿತಗೊಳಿಸಿ ಹಣ ಪಾವತಿಸದೆ ವಂಚಿಸಿರುವ ಹಿನ್ನಲೆಯಲ್ಲಿ ತಮಗೆ ಬರಬೇಕಾದ ಉಳಿಕೆ ಹಣವನ್ನು ಪಡೆಯಲು ಚಾಲಕ ಸಮುದಾಯ ಹೋರಾಟಕ್ಕಿಳಿದಿದೆ.
ಮಾ.12 ರಂದು ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ರು ವ್ಯಾನ್ ಚಾಲಕ ಮಾಲಕರ ಸಂಘ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.ಈ ಬಗ್ಗೆ ಸೋಮವಾರ ಸಂಘದ ಪದಾಧಿಕಾರಿಗಳಾದ ಸದಾನಂದಗೌಡ ನಾವೂರ, ಸುನೀಲ್ ಲೋಬೋ, ಮಹಮ್ಮದ್ ಇಕ್ಬಾಲ್, ವಿಠಲರೈ ವಿನ್ಸೆಂಟ್ ರೋಡ್ರಿಗಸ್ ಬಂಟ್ವಾಳ ಪ್ರೆಸ್‍ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ.
ಮಂಗಳೂರು ಪೆÇಲೀಸ್ ಆಯುಕ್ತರ ವ್ಯಾಪ್ತಿ ಹೊರತು ಪಡಿಸಿ ದ.ಕ.ಜಿಲ್ಲೆ ವಿವಿಧ ತಾಲೂಕಿನಲ್ಲಿ ಚುನಾವಣಾ ಕಾಲದಲ್ಲಿ ಬಳಸಲಾದ ವಾಹನಗಳ ಬಾಡಿಗೆ ಸಿಗದೆ ವಂಚಿತರಾಗಿರುವ ಚಾಲಕ,ಮಾಲಕರು ಸ್ಥಳೀಯವಾಗಿ ಪ್ರತಿಭಟನೆ ನಡೆಸಲಿದ್ದಾರೆ.
ಲಿಖಿತವಾಗಿ ನೀಡಲು ಆಗ್ರಹ
ಮುಂಬರುವ ಲೋಕಸಭಾ ಚುನಾವಣಾ ಕಾರ್ಯಕ್ಕೆ ಒದಗಿಸಲಾಗುವ ವಾಹನಗಳಿಗೆ ಚುನಾವಣಾಧಿಕಾರಿ ನಿಗದಿಪಡಿಸಿದ ಬಾಡಿಗೆ ದರವನ್ನು ಪಾವತಿಸುವ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳು ಲಿಖಿತವಾಗಿ ನೀಡಿದಲ್ಲಿ ಮಾತ್ರ ಚಾಲಕರು ಕರ್ತವ್ಯ ಹಾಜರಾಗಲಿದ್ದಾರೆ ಎಂದು ಪ್ರತಿಭಟನೆಯ ವೇಳೆ ತಹಶೀಲ್ದಾರರ ಗಮನಕ್ಕೆ ತರಲಾಗುವುದು ಎಂದರು.
ಬಂಟ್ವಾಳ ತಾಲೂಕಿನಲ್ಲೇ 50 ಕ್ಕು ಹೆಚ್ಚು ವಾಹನಗಳಿಗೆ ಉಳಿಕೆ ಬಾಡಿಗೆ ಬರಬೇಕಾಗಿದ್ದು, ಸರಕಾರ ನಿಗದಿ ಪಡಿಸಿದ ಮೊತ್ತಕ್ಕೆ ವಾಹನ ಒದಗಿಸಿ ಹಗಲು ರಾತ್ರಿಯೆನ್ನದೆ ಕಾರ್ಯನಿರ್ವಹಿಸಿ ಇದೀಗ ಅರ್ಧಕ್ಕರ್ಧಷ್ಟು ಬಾಡಿಗೆ ನೀಡದೆ ಸಂಬಂಧಪಟ್ಟ ಇಲಾಖೆಗಳು ವಂಚಿಸಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ,ಸಾರಿಗೆ ಇಲಾಖೆ,ಜಿಲ್ಲಾಧಿಕಾರಿ,ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟವರಲ್ಲಿ ಪತ್ರವ್ಯವಹಾರ,ಮುಖತ: ಭೇಟಿಯಾಗಿ ಮನವಿ ಸಲ್ಲಿಸಿ ಕೇಳಿಕೊಂಡರೂ ಕೆಲ ಅಧಿಕಾರಿಗಳು ಉಢಾಫೆಯ ಉತ್ತರ ನೀಡಿದರೆ ,ಚುನಾವಣಾ ಆಯೋಗ ಮುಂದಿನ ಕ್ರಮಕ್ಕೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಎಂದು ಪತ್ರ ಬರೆದು ಕೈತೊಳೆದುಕೊಂಡಿದೆ.ತಮಗಾದ ಈ ಅನ್ಯಾವನ್ನು ಸಂಘ ನ್ಯಾಯಾಲಯದ ಮೊರೆಯು ಹೋಗಲಿದೆ ಎಂದು ಅವರು ತಿಳಿಸಿದ್ದಾರೆ.
ಚುನಾವಣಾ ಸಂದರ್ಭ ಮದುವೆ ಸಹಿತ ಸಾಕಷ್ಟು ಕಾರ್ಯಕ್ರಮದ ಬಾಡಿಗೆಯನ್ನು ಬಿಟ್ಟು ವಾಹನ ಒದಗಿಸಿದ್ದರೂ ಇದೀಗ ಬಾಡಿಗೆಯನ್ನು ಕಡಿತಗೊಳಿಸಿರುವುದಕ್ಕೆ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಹನದ ಸಾಲದ ಕಂತು,ವಿಮೆ ಸಹಿತ ವಿವಿಧ ತೆರಿಗೆ ಪಾವತಿಸಬೇಕಾಗಿದ್ದು, ಹಾಗಾಗಿ ಹೋರಾಟಕ್ಕಿಳಿಯಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಬಾಕಿ ಮೊತ್ತ ಪಾವತಿಸದೆ ಲೋಕಸಭಾ ಚುನಾವಣಾ ಕಾರ್ಯಕ್ಕೆ ವಾಹನ ವಶಪಡಿಸಿಕೊಂಡರೆ ಚಾಲಕರು ತಮ್ಮ ವಾಹನವನ್ನು ದಾರಿಯಲ್ಲೇ ಬಿಟ್ಟು ಬರುವ ಮೂಲಕ ವಿನೂತನ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.