ಅಳಿಕೆ ಗ್ರಾಮದಲ್ಲಿ 53 ಲಕ್ಷ ರೂ ವಿವಿಧ ಕಾಮಗಾರಿಗೆ ಶಾಸಕರಿಂದ ಶಿಲಾನ್ಯಾಸ : ಶಿಲಾನ್ಯಾಸಗೈದ ಎಲ್ಲಾ ಕಾಮಗಾರಿಗಳೂ ಶೀಘ್ರದಲ್ಲೇ ಪೂರ್ಣ: ಶಾಸಕ ಅಶೋಕ್ ಕುಮಾರ್ ರೈ – ಕಹಳೆ ನ್ಯೂಸ್
ಪುತ್ತೂರು: ಕಳೆದ ವಾರಗಳಿಂದ ಪುತ್ತೂರು ವಿಧನಾಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲೂ ವಿವಿಧ ಕಾಮಗಾರಿಗೆ ಶಿಲಾನ್ಯಾಸ ನಡೆಸಿದ್ದು ಶಿಲಾನ್ಯಾಸಗೈದ ಎಲ್ಲಾ ಕಾಮಗಾರಿಗಳೂ ಶೀಘ್ರಪೀರ್ಣಗೊಳ್ಳಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಅಳಿಕೆ ಗ್ರಾಮಕ್ಕೆ ಪ್ರಥಮ ಅವಧಿಯಲ್ಲಿ 53 ಲಕ್ಷ ಅನುದಾನ ನೀಡಿದ್ದೇವೆ ಮುಂದಿನ ಅವಧಿಗೆ ಒಂದು ಕೋಟಿ ಅನುದಾನ ನೀಡುವುದಾಗಿ ಶಾಸಕರು ಹೇಳಿದರು. ಅಳಿಕೆಯಲ್ಲಿ ಕಾಂಗ್ರೆಸ್ ಸುಭದ್ರವಾಗಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಪಡಿಸುವ ಕಾರ್ಯ ಆಗಬೇಕು. ಸರಕಾರದ ಐದು ಗ್ಯಾರಂಟಿ ಯೋಜನೆಗಳು ಎಲ್ಲಾಕುಟುಂಬವನ್ನು ಬೆಳಗಿಸುವ ಕೆಲಸ ಆಗಿದೆ. ಚುನಾವಣೆಯ ಸಂದರ್ಭದಲ್ಲಿ ಕಾರ್ಯಕರ್ತರು ಗ್ಯಾರಂಟಿ ಯೋಜನೆ ಮನೆ ಮನೆಗೆ ತಲುಪಿದೆಯೇ ಎಂಬುದನ್ನು ಖಾತ್ರಿಪಡಿಸಿ ಮತ ಕೇಳಬೇಕು ಎಂದು ಹೇಳಿದರು. ಸಂಕಷ್ಟದಲ್ಲಿರುವ ಅನೇಕ ಕುಟುಂಬಗಳು ಗೃಹಲಕ್ಷ್ಮಿ ಯೋಜನೆಯಿಂದ ನೆಮ್ಮದಿಯ ಜೀವನ ನಡೆಸುತ್ತಿದೆ. ವಿಶ್ವದಲ್ಲಿ ಎಲ್ಲಿಯೂ ಇಲ್ಲದ ಗ್ಯಾರಂಟಿ ಯೋಜನೆ ವಿಶ್ವದಲ್ಲಿ ಇತಿಹಾಸವನ್ನು ನಿರ್ಮಿಸಿದೆ. ಪ್ರತೀ ಕುಟುಂಬಕ್ಕೂ ತಿಂಗಳಿಗೆ 5 ಸಾವಿರ ಹಣ ಪ್ರತೀ ಕುಟುಂಬಕ್ಕೆ ಜಮೆಯಾಗುತ್ತಿದೆ ಎಂದು ಹೇಳಿದರು.
ಫಿಲ್ಟರ್ ನೀರು ಕೊಡುತ್ತೇವೆ: ಕ್ಷೇತ್ರದ ಎಲ್ಲಾ ಮನೆಗಳಿಗೂ ಫಿಲ್ಟರ್ ನೀರನ್ನು ಸರಬರಾಜು ಮಾಡುತ್ತೇವೆ. ಜನ ಗುಣಮಟ್ಟದ ನೀರು 24 ಗಂಟೆಯೂ ಕುಡಿಯಬೇಕು ಎಂಬ ಉದ್ದೇಶದಿಂದ 1010 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿಯೂ ಆರಂಭಗೊಂಡಿದೆ ಎಂದು ಹೇಳಿದರು.
ಪಕ್ಷ ಬೇದ ಮಾಡುವುದಿಲ್ಲ: ಅನುದಾನ ಹಂಚಿಕೆಯಲ್ಲಿ ಎಲ್ಲೂ ಪಕ್ಷ ಬೇಧಮಾಡಿಲ್ಲ. ನಾವು ಅಭಿವೃದ್ದಿಯಲ್ಲಿ ರಾಜಕೀಯ ಖಂಡಿತಮಾಡುವುದೇ ಇಲ್ಲ .ಕಾಂಗ್ರೆಸ್ ಬೆಂಬಲಿತರುಅಧಿಕಾರದಲ್ಲಿಲ್ಲದ ಗ್ರಾಪಂಗೂ ಅನುದಾನವನ್ನು ಇಟ್ಟಿದ್ದೇನೆ ಎಂದು ಶಾಸಕರುಹೇಳಿದರು.
ಕುಮ್ಕಿಅಂದ್ರೆ ಸರಕಾರಿಭೂಮಿ: ನನ್ನಜಾಗವನ್ನು ಕುಮ್ಕಿ ಎಂದು ಕಂದಾಯ ಇಲಾಖೆ ನಮೂದಿಸಿದೆ ಎಂದು ಹೇಳುತ್ತಿದ್ದಾರೆ ಇದರಲ್ಲೇನು ಗಡಿಬಿಡಿಯಿಲ್ಲ,ಕುಮ್ಕಿ ಎಂದರೆ ಅದು ಸರಕಾರ ಎಂದು ತಿಳಿದುಕೊಳ್ಳಿ ಎಂದು ಹೇಳಿದರು.ಪ್ರತೀ ಗ್ರಾಮದಲ್ಲೂ ಜಾಗಗುರುತಿಸಿ ಅದನ್ನುಮನೆ ಇಲ್ಲದವರಿಗೆ ನೀಡುವ ಕೆಲಸ ಆಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ,ಕೆಪಿಸಿಸಿ ಸದಸ್ಯ ಎಂ ಎಸ್ ಮಹಮ್ಮದ್, ಈಶ್ವರಭಟ್ ಪಂಜಿಗುಡ್ಡೆ, ಕಾನ ಈಶ್ವರ ಭಟ್ ಗ್ರಾಪಂ ಸದಸ್ಯ, ವಲಯ ಕಾಂಗ್ರೆಸ್ ಅಧ್ಯಕ್ಷ ಸೀತರಾಮ ಶೆಟ್ಡಿ, ಅಕ್ರ. ಸಕ್ರಮ ಸಮಿತಿಯ ರಾಮಣ್ಣ ಪಿಲಿಂಜ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾರ್ಯದರ್ಶಿ ರಶೀದ್, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ ಶೆಟ್ಟಿ,ಗ್ರಾಪಂ ಪಿಡಿಒ ದನಂಜಯ,ಮೊದಲಾದವರು ಉಪಸ್ಥಿತರಿದ್ದರು. ಅಳಿಕೆ ಗ್ರಾಪಂ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸ್ವಾಗತಿಸಿ ವಂದಿಸಿದರು.