Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ರಜಾ ದಿನಗಳ ತರಗತಿ ಉದ್ಘಾಟನೆ ಸಮಯದ ಮಹತ್ವ ಅರಿತು ಸಾಧನೆ ಮಾಡಿದರೆ ಯಶಸ್ಸು: ರಾಜಶ್ರೀ ಎಸ್. ನಟ್ಟೋಜಾ – ಕಹಳೆ ನ್ಯೂಸ್

ಪುತ್ತೂರು: ಸಮಯದ ಮಹತ್ವ ಅರಿತು ಏಕಾಗ್ರತೆಯಿಂದ ಅಭ್ಯಾಸ ನಡೆಸಿ ಸಾಧನೆ ಮಾಡಿದಾಗ ಯಶಸ್ಸು ಸಾಧ್ಯ, ಅಂಬಿಕಾದಲ್ಲಿ ರಜಾದಿನಗಳ ಕೋಚಿಂಗ್ ತರಗತಿಗಳು ಪ್ರಾರಂಭವಾಗಿ 25 ವರ್ಷಗಳಾದವು, ಇದು 25ನೇ ಬ್ಯಾಚ್ ಅಂದರೆ ಬೆಳ್ಳಿ ಹಬ್ಬದ ಸಂಭ್ರಮ. ಇಲಾಖಾ ವಾರ್ಷಿಕ ಪರೀಕ್ಷೆಯ ತಯಾರಿಯ ಜೊತೆಗೆ ಸಿಇಟಿ, ನೀಟ್, ಜೆಇಇ ಮುಂತಾದ ಪರೀಕ್ಷೆಗಳಿಗೆ ಕೋಚಿಂಗ್ ಪಡೆದು ಸಾಧನೆ ಮಾಡುತ್ತಿದ್ದಾರೆ ಎಂದು ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜಾ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಅವರು ನಗರದ ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ಪಿಯು ರಜಾ ದಿನಗಳ ವಿಶೇಷ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತರಗತಿಗಳು ನಡೆಯುವ ರೀತಿ, ವಿಜ್ಞಾನ ವಿದ್ಯಾರ್ಥಿಗಳಿಗೆ ತರಗತಿಗಳ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಓದು, ವ್ಯಾಯಾಮ, ಸೂರ್ಯ ನಮಸ್ಕಾರ ಮಾಡುವುದರಿಂದ ದೈನಂದಿನ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ. ಸದಾ ಆಸಕ್ತಿಯಿಂದ ಮುಂದೆ ಸಾಗಿ. ವಿಷಯಗಳನ್ನು ಚೆನ್ನಾಗಿ ಅರಿಯುವ ಆಸಕ್ತಿ ಮೂಡಿಸಿಕೊಂಡಾಗ, ಕಲಿಕೆಯ ಹಾದಿ ಸುಗಮವಾಗುತ್ತದೆ. ಸಮಾಜದಲ್ಲಿ ಜ್ಞಾನಿಯಾಗಬೇಕು ಎನ್ನುವ ಆಸೆ, ಆಸಕ್ತಿಯಿಂದ ಪ್ರಶ್ನೆಗಳನ್ನು ಕೇಳಿ ಸಂಶಯ ನಿವಾರಿಸಿಕೊಂಡು ಕಲಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ಸೋಮಾರಿತನ ಎನ್ನುವ ಬೇಲಿಯನ್ನು ಕಿತ್ತು ಹಾಕಿ, ದಿನಂಪ್ರತಿ ಪಾಠಗಳನ್ನು ಪುನರ್ಮನನ ಮಾಡಿಕೊಳ್ಳುವುದು ಅಗತ್ಯ ಎಂದರು.

ಬೆಂಗಳೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನ ಪ್ರಸಕ್ತ ಸಾಲಿನಲ್ಲಿ ನಡೆಸಿದ ಭಾರತ ಸಂಸ್ಕೃತಿ ಪರಿಚಯ, ರಾಮಾಯಣ ಮತ್ತು ಮಹಾಭಾರತ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಪ್ರಥಮ ಸ್ಥಾನ ಪಡೆದ ಸಂಕೇತ ಶೆಟ್ಟಿಗೆ ಪದಕ ಪ್ರದಾನ ಮಾಡಿ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿನಿಯರಾದ ಆತ್ಮಶ್ರೀ, ಸಾನ್ವಿ ಕಜೆ ಮತ್ತು ಮಹತಿ ಪ್ರಾರ್ಥಿಸಿದರು. ವಿದ್ಯಾಲಯದ ಪ್ರಾಚಾರ್ಯರಾದ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿದರು. ರಸಾಯನಶಾಸ್ತ್ರ ಉಪನ್ಯಾಸಕಿ ಅಕ್ಷತಾ ಎಂ. ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕರಾದ ಮುರಳಿ ಮೋಹನ ಮತ್ತು ನಯನ್ ಕುಮಾರ್ ಆರ್. ಸಹಕರಿಸಿದರು.