Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಜೀರ್ಣೋದ್ಧಾರ ಸಿದ್ಧತೆಯಲ್ಲಿರುವ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಮಾಣಿಲ ಶ್ರೀ – ಕಹಳೆ ನ್ಯೂಸ್

ಪುತ್ತೂರು: ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವೇ ಒಂದು ನಿಧಿ. ಈ ನಿಧಿಯನ್ನು ಊರಿನವರು ಭಕ್ತಿ, ಶ್ರದ್ಧೆಯಿಂದ ಬೆಳಗಿಸುವ ಕಾರ್ಯ ನಡೆಸಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.

ಜೀರ್ಣೋದ್ಧಾರದ ಸಿದ್ಧತೆಯಲ್ಲಿರುವ ಆರ್ಯಾಪು ಗ್ರಾಮದ ಶ್ರೀ ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆರ್ಯಾಪು ಗ್ರಾಮಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಸುತ್ತಲಿನ ನಾಲ್ಕೂರಿಗೂ ಸಂಬಂಧಿಸಿದ ದೇವಳ. ಬಹಳ ಕಾರಣೀಕತೆಯಿಂದ ಕೂಡಿರುವ ದೇವಸ್ಥಾನ. ಇಲ್ಲಿ ಪಿಲಿಚಾಮುಂಡಿ ದೈವವಿದ್ದು, ತಾಯಿ ಸ್ಥಾನದಲ್ಲಿರುವ ಈ ದೈವವೂ ಬಹಳ ಕಾರಣೀಕತೆಯಿಂದ ಕೂಡಿದೆ ಎಂದರು.


ದೇವಸ್ಥಾನದಲ್ಲಿ ಹಾಲು – ಪಾಯಸ ಸೇವೆ ಬಹಳ ವಿಶಿಷ್ಟವಾಗಿದೆ. ಗ್ರಾಮಸ್ಥರು ಈ ಸೇವೆಯನ್ನು ಮಾಡಿಸಲೇಬೇಕು. ಅದರಲ್ಲೂ ಮನೆಯಲ್ಲಿ ಮದುವೆ ದಿನ, ಮಗುವನ್ನು ತೊಟ್ಟಿಲಿಗೆ ಹಾಕುವ ದಿನಗಳಂತಹ ಮಹತ್ವಪೂರ್ಣ ದಿನಗಳಲ್ಲಿ ಈ ಸೇವೆಯನ್ನು ಮಾಡಿಸಿ, ಆ ಪ್ರಸಾದವನ್ನು ಮನೆಗೆ ಕೊಂಡೊಯ್ದು ಸೇವನೆ ಮಾಡುವುದು ಉತ್ತಮ ಎಂದರು.

ಕಾರ್ಪಾಡಿ ದೇವಸ್ಥಾನ ಎಷ್ಟು ಕಾರಣೀಕತೆಯಿಂದ ಕೂಡಿದೆಯೋ, ಇದರ ಮೂಲಸ್ಥಾನವಾದ ಬಲ್ಲೇರಿ ಮಲೆಯೂ ಅಷ್ಟೇ ಕಾರಣೀಕತೆಯಿಂದ ಕೂಡಿದೆ. ಇದರ ಮಹತ್ವವನ್ನು ಊರವರು ಇನ್ನು ತಿಳಿದುಕೊಂಡಿಲ್ಲ. ದೇವಸ್ಥಾನವನ್ನು ಬೆಳಗಿಸುವ ಕಾರ್ಯದಲ್ಲಿ ಪ್ರತಿಯೋರ್ವರು ಕೈಜೋಡಿಸಬೇಕು. ಈ ದೇವಸ್ಥಾನ ಊರನ್ನು ಮತ್ತು ಊರಿನ ಬಾಳಲ್ಲಿ ನಿಧಿಯಾಗಿ ಪರಿಣಮಿಸುವುದರಲ್ಲಿ ಎರಡು ಮಾತಿಲ್ಲ ಎಂದರು.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕಾರ್ಯದರ್ಶಿ ರಾಧಾಕೃಷ್ಣ ಬೋರ್ಕರ್, ಸಮಿತಿ ಪ್ರಮುಖರಾದ ಡಾ. ಸುರೇಶ್ ಪುತ್ತೂರಾಯ, ರಾಂ ಭಟ್ ಮಚ್ಚಿಮಲೆ, ವಿಜಯ್ ಬಿ.ಎಸ್., ಬಾಲಕೃಷ್ಣ, ಗಿರೀಶ್ ಕಿನ್ನಿಮಜಲು, ಕಿಶೋರ್, ಬಾಲಕೃಷ್ಣ ಗೌಡ ಆರ್ಯಾಪು, ಚೇತನ್, ದೇವಯ್ಯ ದೇವಸ್ಯ ಮೊದಲಾದವರು ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸುಧಾಕರ್ ರಾವ್ ಆರ್ಯಾಪು ಅವರು ಸ್ವಾಮೀಜಿಗೆ ದೇವರ ಪ್ರಸಾದ ನೀಡಿದರು.