Recent Posts

Thursday, November 21, 2024
ದಕ್ಷಿಣ ಕನ್ನಡಪುತ್ತೂರುರಾಜಕೀಯಸುದ್ದಿ

ಪುಣಚ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ರಸ್ತೆ ದುರಸ್ಥಿಗೆ ಪುತ್ತೂರು ಶಾಸಕರಿಂದ ಶಿಲಾನ್ಯಾಸ : ಹಲವು ವರ್ಷಗಳಿಂದ ಇದ್ದ ರಸ್ತೆ ವಿವಾದವನ್ನು ಇತ್ಯರ್ಥಪಡಿಸಿದ ಶಾಸಕರು- ಗ್ರಾಮಸ್ಥರಿಂದ ಅಭಿನಂದನೆ – ಕಹಳೆ ನ್ಯೂಸ್

ಪುತ್ತೂರು: ಪುಣಚ ಶ್ರೀ ಮಹಿಷಮರ್ಧಿನಿ ದೇವಸ್ಥಾನಕ್ಕೆ ತೆರಳುವ ರಸ್ತೆ ವಿವಾದಕ್ಕೆ ಅನೇಕ ವರ್ಷಗಳ ಬಳಿಕ ತೆರೆ ಎಳೆಯಲಾಗಿದ್ದು ಪುತ್ತೂರು ಶಾಸಕರಾದ ಅಶೋಕ್‌ರೈ ಯವರ ಸಂಧಾನ ಮಾತುಕತೆ ಸಫಲವಾಗಿದ್ದು ,ಈ ರಸ್ತೆಗೆ 50 ಲಕ್ಷ ರೂ ಅನುದಾನವನ್ನು ಒದಗಿಸಿ ಕಾಮಗಾರಿಗೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದೇವಸ್ಥಾನಕ್ಕೆ ತೆರಳುವ ಪ್ರಮುಖ ಪ್ರವೇಶದ್ವಾಋದ ಬಳಿ ಜಾಗದ ತಕರಾರು ಇರುವ ಕಾರಣ ರಸ್ತೆ ಅಭಿವೃದ್ದಿಗೆ ಅಡ್ಡಿಯಾಗಿತ್ತು. ಜಾಗದ ಮಾಲಕರಾದ ಸದಾನಂದ ಎಂಬವರನ್ನು ಕರೆಸಿ ಮಾತುಕತೆ ನಡೆಸಿದ ಶಸಕರು ದೇವಸ್ಥಾನದ ರಸ್ತೆ ಅಭಿವೃದ್ದಿಗೆ ಸಹಕಾರ ಮಾಡುವಂತೆ ಮತ್ತು ಈ ಹಿಂದೆ ಇದೇ ವಿಚಾರದಲ್ಲಿ ಮಾಡಲಾಗಿರುವ ಕೇಸುಗಳನ್ನು ಹಿಂಪಡೆದು ಭಕ್ತರಿಗೆ ನೆರವಾಗಲು ರಸ್ತೆ ವಿವಾದವನ್ನು ಇತ್ಯರ್ಥ ಪಡಿಸಬೇಕು ಮತ್ತು ಈ ವಿಚಾರದಲ್ಲಿ ಸಹಕಾರ ನೀಡುವಂತೆ ಶಾಸಕರು ಕೇಳಿಕೊಂಡಿದ್ದರು. ಶಾಸಕರ ಮನವಿಗೆ ಸ್ಪಂದಿಸಿದ ಜಾಗದ ಮಾಲಿಕ ಸದಾನಂದ ರವರು ಪುತ್ತೂರು ಶಾಸಕರು ಹೇಳುವುದಾದರೆ ನಾನು ಏನು ಮಾಡಲು ಬೇಕಾದರೂ ಸಿದ್ದ ಎಂದು ಹೇಳಿ ಅನೇಕ ವರ್ಷಗಳಿಂದ ತಕರಾರಿನಿಂದ ಬಾಕಿಯಾಗಿದ್ದ ರಸ್ತೆ ಕಾಮಗಾರಿಗೆ ಚಾಲನೆ ಸಿಕ್ಕಂತಾಗಿದೆ.

ಪುಣಚಾ ಗ್ರಾಮಕ್ಕೆ ಒಟ್ಟು 1.95ಕೋಟಿ ರೂ ಕಾಮಗಾರಿಗೆ ಶಾಸಕರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕರು ದೇವಸ್ಥಾನದ ರಸ್ತೆ ಅಭಿವೃದ್ದಿಯಾಗದೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ವಿವಾದ ಇತ್ಯರ್ಥಪಡಿಸಿ ರಸ್ತೆ ಅಭಿವೃದ್ದಿಗೂ ಅನುದಾನ ಇರಿಸಿದ್ದೇನೆ, ಅದೇ ರೀತಿ ಪುಣಚಾ ಗ್ರಾಮದ ವಿವಿಧ ವಾರ್ಡುಗಳ ರಸ್ತೆಗೂ ಅನುದಾನವನ್ನು ನೀಡಿದ್ದೇನೆ ಎಂದು ಹೇಳಿದ ಶಾಸಕರು ಗ್ಯಾರಂಟಿ ಯೋಜನೆ ಹೇಗೆ ಜನರ ಮನೆ ಮನೆಗೆ ತಲುಪಿದೆಯೋ ಅದೇ ರೀತಿ ಅಭಿವೃದ್ದಿ ಕೆಲಸಗಳು ಪ್ರತೀ ಗ್ರಾಮಗಳಿಗೂ ತಲುಪಿದೆ ಎಂದು ಹೇಳಿದರು.

ದೇವಳದ ರಸ್ತೆಗೆ ಮೊದಲ ಬಾರಿಗೆ ಹಣ ಇಟ್ಟದ್ದು ನಾನು : ಎಂ ಎಸ್ ಮಹಮ್ಮದ್

ನಾನು ಜಿಪಂ ಉಪಾಧ್ಯಕ್ಷನಾಗಿದ್ದ ವೇಳೆ ಈ ದೇವಳದ ರಸ್ತೆ ಅಭಿವೃದ್ದಿಗೆ ಅನುದಾನವನ್ನು ಇಟ್ಟಿದ್ದೆ ಆ ಬಳಿಕ ಇಲ್ಲಿಗೆ ಯಾರೂ ಅನುದಾನವನ್ನು ನೀಡಿಲ್ಲ. ಅನುದಾನ ಕೊಟ್ಟ ನನ್ನನ್ನು ದೇವಳದ ವತಿಯಿಂದ ಸನ್ಮಾನವನ್ನು ಮಾಡಿದ್ದರು. ಇದೀಗ ಈ ರಸ್ತೆ ಸಂಪೂರ್ಣ ದುರಸ್ಥಿ ಯಾಗಲಿದ್ದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಟ್ಟ ಸದಾನಂದ ಅವ ರಿಗೆ ಅಭಿನಂದನೆ ಸಲ್ಲಿಸುವುದಾಗಿ ಎಂ ಎಸ್ ಮಹಮ್ಮದ್ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾಟ. ರಾಜಾರಾಂ ಕೆ.ಬಿ, ಡಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಲ್ವಾ, ದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಕಾರ್ಯದರ್ಶಿ ಶ್ರೀಧರ ಶೆಟ್ಟಿ ದೇವರಗುಂಡಿ, ಪರಿಯಾಲ್ತಡ್ಕ ಶಾಲಾ ನಿವೃತ್ತ ಮುಖ್ಯ ಗುರು ಹರ್ಷಶಾಸ್ತ್ರಿ ಮಣಿಲ, ರಮಾನಾಥ್ ವಿಟ್ಲ, ರಶೀದ್ ವಿಟ್ಲ, ನವೀನ್ ರೈ ಚೆಲ್ಯಡ್ಕ, ಅಶ್ರಫ್, ರೈತ ಸೇನಾ ಮುಖಂಡ ಶ್ರೀಧರ ಶೆಟ್ಟಿ ಬೈಲುಗುತ್ತು, ವಲಯ ಕಾರ್ಯದರ್ಶಿ ಮಹಮ್ಮದ್ ಸಿರಾಜ್ ಮನಿಲ, ಗ್ರಾ.ಪಂ.ಅಧ್ಯಕ್ಷೆ ಬೇಬಿ ಪಟಿಕಲ್ಲು, ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಸದಸ್ಯರಾದ ಲಲಿತಾ, ಗಿರಿಜ, ಹರೀಶ್, ಪ್ರಮುಖರಾದ ಪ್ರತಿಭಾ ಶ್ರೀಧರ್ ಶೆಟ್ಟಿ, ರಾಜೇಂದ್ರ ರೈ ಬೈಲುಗುತ್ತು, ನಾರಾಯಣ ಪೂಜಾರಿ ನೀರುಮಜಲು, ಜಯರಾಂ ಶಾಸ್ತ್ರೀ ಮಣಿಲ, ನಾರಾಯಣ ನಾಯ್ಕ, ಅಲ್ಬರ್ಟ್ ಡಿಸೋಜಾ, ಕ್ಷೇವಿಯರ್ ಡಿಸೋಜಾ, ವೆಂಕಪ್ಪ ಗೌಡ ಅಜೇರು ಮಜಲು, ಕುಂಞಣ್ಣ ರೈ, ಸೀತಾರಾಮ ಪಟಿಕಲ್ಲು, ಮಹಾಲಿಂಗ ನಾಯ್ಕ, ಕರೀಂ ಕುದ್ದುಪದವು, ಮೌರಿಸ್‌ಟೆಲ್ಲಿಸ್, ದಿವಾಕರ ತೋರಣಕಟ್ಟೆ, ಮೋಹನ ಎಚ್, ಶಿವರಾಮ ನಾಯ್ಕ ಪಾವಳುಮೂಲೆ, ಪೂವಪ್ಪ ಎರ್ಮೆತೊಟ್ಟಿ, ಗೋವಿಂದ ನಾಯ್ಕ ಆಜೇರು, ಹಮೀದ್ ಎಂ.ಎಸ್, ಇಸ್ಮಾಯಿಲ್ ಪಾಲಸ್ತಡ್ಕ, ಮುಸ್ತಫ ಗರಡಿ, ಅಬ್ದುಲ್ಲ ಕೆಪಿ, ವಾಮನ ನಾಯ್ಕ, ಹರೀಶ್ ಕುಮಾರ್ ಆಜೇರುಮಜಲು, ಶರೀಫ್ ಕೊಲ್ಲಪದವು, ರಮೇಶ್ ದಂಬೆ, ಶ್ರೀನಿವಾಸ ನಾರ್ಣಡ್ಕ ಸೇರಿದಂತೆ ಹಲವು ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪುಣಚ ವಲಯಾದ್ಯಕ್ಷ ಬಾಲಕೃಷ್ಣ ಪೂಜಾರಿ ಹಿತ್ತಿಲು ಸ್ವಾಗತಿಸಿ, ವಂದಿಸಿದರು.