Sunday, January 19, 2025
ಕಡಬದಕ್ಷಿಣ ಕನ್ನಡಸಂತಾಪಸುದ್ದಿ

ಕಡಬ : ಕೆರೆಗೆ ಈಜಲು ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತ್ಯು – ಕಹಳೆ ನ್ಯೂಸ್

ಈಜಲು ಕೆರೆಗೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೆದಂಬಾಡಿ ಗ್ರಾಮದ ತಿಂಗಳಾಡಿಯ ಪಟ್ಟೆಯಲ್ಲಿ ನಡೆದಿದೆ.

ಕಡಬ ಕರ್ಮಾಯಿ ನಿವಾಸಿ ಕಿರಣ್ ರೈ (40ವ) ಎಂಬವರು ಮೃತಪಟ್ಟ ವ್ಯಕ್ತಿ . ಸಂಜೀವ ರೈ ಎಂ.ರವರ ಪುತ್ರಿಯನ್ನು ವಿವಾಹವಾಗಿದ್ದು, ಪ್ರಸ್ತುತ ಪತ್ನಿ ಮನೆಯಲ್ಲಿ ವಾಸವಾಗಿದ್ದರು. ಮಾ.11ರಂದು ಸಂಜೆ ತೋಟದ ಕೆರೆಗೆ ನೀರು ತರಲೆಂದು ಪತಿ ಜೊತೆ ತೆರಳಿದ್ದು, ಆ ಬಳಿಕ ನಾನು ಕೆರೆಯಲ್ಲಿ ಈಜಾಡುತ್ತೇನೆ ಎಂದು ಹೇಳಿ ಕೆರೆಗೆ ಇಳಿದವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಿರಣ್ ರೈಯವರ ಸ್ವಂತ ಮನೆ ಕಡಬದ ಕರ್ಮಯಿಯಲ್ಲಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೆÇಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು