Monday, January 20, 2025
ಪುತ್ತೂರುಶಿಕ್ಷಣಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ ಸಮಾರಂಭ ಲೋಕಕಲ್ಯಾಣದ ಚಿಂತನೆಯನ್ನು ಜಗತ್ತಿಗೆ ಪಸರಿಸಿದ ದೇಶ ಭಾರತ- ಪ್ರೊಕೃಷ್ಣ ಭಟ್ ಪಿ ವಿ – ಕಹಳೆ ನ್ಯೂಸ್

ಪುತ್ತೂರು, ; ದೇಶದ ಭವಿಷ್ಯ ಸುಭಿಕ್ಷವಾಗಿರ ಬೇಕಾದರೆ ಯುವಶಕ್ತಿದೇಶದ ವಿಕಾಸದಕಡೆಗೆ ಗಮನ ಹರಿಸಬೇಕು ,ಜಗತ್ತಿನಕಲ್ಯಾಣಕ್ಕಾಗಿ ತನ್ನ ಅಂತಃಸತ್ವ ತಿಳಿದುಕೊಂಡು ಮತ್ತೆ ತಲೆಯೆತ್ತಿ ನಿಂತಿರುವ ಭಾರತದ ಒಳಿತಿಗಾಗಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಒಡಿಶಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊಕೃಷ್ಣ ಭಟ್ ಪಿ ವಿ ಹೇಳಿದರು.


ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ ) ಪುತ್ತೂರುಇದರಆಶ್ರಯದಲ್ಲಿ ನಡೆದ ‘2047ರಲ್ಲಿ ಭಾರತ ಶತಮಾನದದೃಷ್ಟಿ ‘ ಎಂಬ ವಿಷಯದ ಮೇಲೆ ನಡೆದರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಕನಸನ್ನು ಕಂಡರೆ ಸಾಲದು, ಕನಸನ್ನು ನನಸು ಮಾಡುವಕರ್ತೃತ್ವ ಶಕ್ತಿ ವಿದ್ಯಾರ್ಥಿಗಳಲ್ಲಿರಬೇಕು. ಅಂತಹ ವಿದ್ಯಾರ್ಥಿಗಳೇ ಭಾರತದ ಭವಿಷ್ಯದ ರೂವಾರಿಗಳಾಗುತ್ತಾರೆ ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಕೆ ಎಂ ಮಾತನಾಡಿಆರ್ಥಿಕ ಬೆಳವಣಿಗೆ, ಉತ್ತಮ ಆಡಳಿತ, ಸುಸ್ಥಿರ ಪರಿಸರ, ಸಾಮಾಜಿಕತಿದ್ದುಪಡಿ ಎಂಬಿವು ಭಾರತದ ವಿಕಾಸವನ್ನು ಅಳೆಯುವ ಮಾನದಂಡಗಳಾಗಿದ್ದು, ಇವುಗಳ ಬಗ್ಗೆ ಪ್ರತಿಯೊಬ್ಬ ನಾಗರಿಕನೂ ಗಮನ ಹರಿಸಬೇಕುಎಂದು ಹೇಳಿದರು.
ವೇದಿಕೆಯಲ್ಲಿಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ , ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಯೋಜಕಿ ಹಾಗೂ ಸ್ನಾತಕೋತ್ತರಅಧ್ಯಯನಕೇಂದ್ರದಡೀನ್‌ಡಾ. ವಿಜಯಸರಸ್ವತಿ ಬಿ. ವಂದಿಸಿದರು. ಉಪನ್ಯಾಸಕಿ ಪ್ರಜ್ಞಾಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್ಐಟಂ –

ಎರಡು ದಿನಗಳ ಕಾಲ ನಡೆದರಾಷ್ಟ್ರೀಯ ವಿಚಾರ ಸಂಕಿರಣದಲ್ಲಿದೇಶದ ವಿವಿಧ ಭಾಗಗಳಿಂದ ಸಂಶೋಧಕರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಆಗಮಿಸಿ 2047ರಲ್ಲಿ ಭಾರತ ಎಂಬ ಪರಿಕಲ್ಪನೆಯಕುರಿತು ವಿಚಾರ ಮಂಡನೆ ಮಾಡಿದರು.

“ಇಂದು ಪಠ್ಯಪುಸ್ತಕಗಳಲ್ಲಿರುವ ನಮ್ಮದೇಶದಇತಿಹಾಸವು ಭಾರತದ ಮೇಲೆ ದಂಡೆತ್ತಿ ಬಂದ ದಾಳಿಕೋರರು ತಮ್ಮಅಗತ್ಯಕ್ಕೆತಕ್ಕಂತೆ ಬದಲಿಸಿ ಬರೆದಿರುವುದು ಬೆಳಕಿಗೆ ಬರುತ್ತದೆ. ಹಾಗಾಗಿ ಸರಿಯಾದಅಧ್ಯಯನ ಮಾಡಿ ನೈಜಇತಿಹಾಸವನ್ನು ತಿಳಿಯುವುದು ಮತ್ತು ಭಾರತದ ಏಳ್ಗೆಗೆ ಪೂರಕವಾಗಿ ಹೊಸ ಇತಿಹಾಸ ಸೃಷ್ಟಿಸುವ ಹೊಣೆಗಾರಿಕೆ ಇಂದಿನ ಯುವಜನತೆಯ ಮೇಲಿದೆ”
-ಪ್ರೊಕೃಷ್ಣ ಭಟ್ ಪಿ ವಿ

ಈ ಸಂದರ್ಭದಲ್ಲಿ ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಯಶವತ್‌ಡೋಂಗ್ರೆ ಸಹಕಾರ ಮತ್ತುಗ್ರಾಮೀಣಾಭಿವೃದ್ಧಿ ಎಂಬ ವಿಷಯದಕುರಿತಾಗಿ ವಿಚಾರಗೋಷ್ಠಿ ಮಂಡಿಸಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನುಕ್ಯಾಂಪ್ಕೋ ಲಿ. ಮಾಜಿಅಧ್ಯಕ್ಷ ಸತೀಶ್‌ಚಂದ್ರಎಸ್‌ಆರ್ ವಹಿಸಿದ್ದರು.

ತದನಂತರ ಸಹಕಾರಿ ಸಂಘದಅಧ್ಯಕ್ಷರು ಸದಸ್ಯರು ಮತ್ತು ಪದಾಧಿಕಾರಿಗಳೊಂದಿಗೆ ಕಾಲೇಜಿನ ಎವಿ ಸಭಾಂಗಣದಲ್ಲಿ ಸಂವಾದಕಾರ್ಯಕ್ರಮ ನಡೆಯಿತು.

ಜೊತೆಗೆ ವಿಕಾಸಿತ್ ಭಾರತದ ಹೊಸ ಆರ್ಥಿಕತೆ ಎಂಬ ವಿಷಯದಕುರಿತಾಗಿಎಸ್‌ಡಿಎಂಐಎAಡಿ ಮೈಸೂರುಇಲ್ಲಿನಅರ್ಥಶಾಸ್ತ್ರಉಪನ್ಯಾಸಕಡಾ. ಬಿ ವೆಂಕಟ್‌ರಾಜ್ ವಿಚಾರಗೋಷ್ಠಿ ಮಂಡಿಸಿದರು,