Sunday, January 19, 2025
ಸುದ್ದಿ

ಕೊಳವೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿವೇಕ ಕೊಠಡಿಯ ಶಂಕುಸ್ಥಾಪನೆ ಕಾರ್ಯಕ್ರಮ – ಕಹಳೆ ನ್ಯೂಸ್

ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಳವೂರು ಮುತ್ತೂರು ಇಲ್ಲಿ ಸನ್ಮಾನ್ಯ ಶ್ರೀ ಡಾಕ್ಟರ್. ಭರತ್ ವೈ.ಶೆಟ್ಟಿ ಶಾಸಕರು , ವಿವೇಕ ಕೊಠಡಿಯ ಶಂಕು ಸ್ಥಾಪನೆಯನ್ನು ಸಾಂಕೇತಿಕವಾಗಿ ಕೆ.ಪಿ.ಎಸ್ ಮುತ್ತೂರು ಕಾಲೇಜ್ ಆವರಣದಲ್ಲಿ ದಿ.13ರಂದು ನಿನ್ನೆ ನೆರವೇರಿಸಿದರು. ಮುಂದುವರಿದ ಭಾಗವಾಗಿ ಕೆ.ಪಿ.ಎಸ್ ಮುತ್ತೂರು ಪ್ರಾಥಮಿಕ ವಿಭಾಗದ ಶಾಲಾ ಮೈದಾನದ ಆವರಣದಲ್ಲಿ ವಿವೇಕ ಕೊಠಡಿಯ ಶಂಕುಸ್ಥಾಪನೆಯನ್ನು ಎಸ್ ಡಿಎಂಸಿ ಉಪಾಧ್ಯಕ್ಷರಾದ ಶ್ರೀಮತಿ ವೀಣಾರವರು ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಕೆ.ಪಿ.ಎಸ್ ಕೊಳವೂರು ಮುತ್ತೂರು ಕಾರ್ಯಾಧ್ಯಕ್ಷರಾದ ಶ್ರೀ ನಾಗೇಶ್ ಶೆಟ್ಟಿ , ಕಾಲೇಜು ವಿಭಾಗದ ಪ್ರಾಂಶುಪಾಲರಾದ ಶ್ರೀ ರಘುರಾಮ್, ಎಸ್ ಡಿ ಎಂ ಸಿ ಸದಸ್ಯರಾದ ಶ್ರೀ ಚಂದ್ರಹಾಸ್ ಶೆಟ್ಟಿ, ಶ್ರೀ ಅಬ್ದುಲ್ ಲತೀಫ್ ,ಶ್ರೀಮತಿ ಮಮತ, ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ರೋಹಿಣಿ ಹಾಗೂ ಶಿಕ್ಷಕರು ಮತ್ತು ಶಾಲೆಯ ಎಲ್ಲ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಂದಿರುವ ಎಲ್ಲಾ ಅತಿಥಿಗಳನ್ನು ಮುಖ್ಯ ಶಿಕ್ಷಕರು ಸ್ವಾಗತಿಸಿದರು ಸಹಶಿಕ್ಷಕಿ ದಯಾ ಅವರು ಎಲ್ಲರನ್ನ ವಂದಿಸಿದರು ಎಲ್ಲರಿಗೂ ಸಿಹಿ ತಿಂಡಿಯನ್ನು ವಿತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು